ಉತ್ತಮ ಛಾಯಾಗ್ರಾಹಕರಿಗೆ ಟಿಎಸ್ ಸತ್ಯನ್ ಪ್ರಶಸ್ತಿ

Posted By:
Subscribe to Oneindia Kannada
TS Satyan memorial awardees (pic : Churumuri.com)
ಬೆಂಗಳೂರು, ಡಿ. 17 : ಛಾಯಾ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಚುರುಮುರಿ ಬ್ಲಾಗ್ ಮತ್ತು ಕರ್ನಾಟಕ ಫೋಟೋ ನ್ಯೂಸ್ ಜಂಟಿಯಾಗಿ ನೀಡುತ್ತಿರುವ ಟಿಎಸ್ ಸತ್ಯನ್ ಸ್ಮಾರಕ ಪ್ರಶಸ್ತಿಗೆ 6 ಛಾಯಾಗ್ರಾಹಕರು ಭಾಜನರಾಗಿದ್ದು, ಸಮಾರಂಭ ಡಿ.18ರಂದು ಭಾನುವಾರ ರಾಜಭವನದಲ್ಲಿ ನಡೆಯಲಿದೆ.

ಖುದ್ದು ಖ್ಯಾತ ಛಾಯಾಪತ್ರಕರ್ತರಾಗಿದ್ದ ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ (ಟಿಎಸ್ ಸತ್ಯನ್) ಅವರ ಹೆಸರಲ್ಲಿ ನೀಡುತ್ತಿರುವ ಈ ಪ್ರಶಸ್ತಿಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬೆಳಿಗ್ಗೆ 11.15ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿ 10 ಸಾವಿರ ರು. ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಉಳಿದ ಪ್ರಶಸ್ತಿ ಪಡೆದವರಿಗೆ 5 ಸಾವಿರ ರು. ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತಿದೆ. ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಟಿಜೆಎಸ್ ಜಾರ್ಜ್ ಮತ್ತು ಪ್ರಜಾವಾಣಿ ಸಂಪಾದಕ ಕೆಎನ್ ಶಾಂತ ಕುಮಾರ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಪ್ರಶಸ್ತಿ ಪಡೆದವರು

* ಜೀವಮಾನ ಸಾಧನೆ ಪ್ರಶಸ್ತಿ : ಯಜ್ಞ, ಮಂಗಳೂರು
* ಅತ್ಯುತ್ತಮ ದಿನಪತ್ರಿಕೆ ಛಾಯಾಗ್ರಾಹಕ : ಕೆ. ಗೋಪಿನಾಥನ್, ದಿ ಹಿಂದೂ, ಬೆಂಗಳೂರು
* ಅತ್ಯುತ್ತಮ ವೃತ್ತಿಪರ ಛಾಯಾಗ್ರಾಹಕ : ನೇತ್ರ ರಾಜು, ದಿ ಟೈಮ್ಸ್ ಆಫ್ ಇಂಡಿಯಾ, ಮೈಸೂರು
* ಅತ್ಯುತ್ತಮ ಮ್ಯಾಗಜೀನ್ ಛಾಯಾಗ್ರಾಹಕ : ಭಾನು ಪ್ರಕಾಶ್ ಚಂದ್ರ, ದಿ ವೀಕ್, ಬೆಂಗಳೂರು
* ಅತ್ಯುತ್ತಮ ಹವ್ಯಾಸಿ ಛಾಯಾಗ್ರಾಹಕ : 'ರಿಗ್ರೆಟ್' ಅಯ್ಯರ್, ಬೆಂಗಳೂರು
* ಅತ್ಯುತ್ತಮ ಆನ್‌ಲೈನ್ ಛಾಯಾಗ್ರಾಹಕ : ಎಮ್ಎಸ್ ಗೋಪಾಲ್, eyeforindia.blogspot.com

ಸೂಚನೆ : ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ವಿರುತ್ತದೆ. ಸಮಾರಂಭ ಶುರುವಾಗುವ ಮೊದಲೇ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಸಮಾರಂಭ ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.

English summary
TS Satyan memorial awards instituted by Karnataka Photo News and Churumuri.com blog will be presented to 6 eminent photojournalists at Raj Bhavan by Governor Hansraj Bhardwaj in Bangalore on December 18, Sunday.
Please Wait while comments are loading...