ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆಗೆ ಬೆಂಗಳೂರಿನ ಜಸ್ಟ್ ಬೇಕ್ ಕೇಕ್!

|
Google Oneindia Kannada News

Just Bake's World's Largest Cake
ಬೆಂಗಳೂರು, ಡಿ.10: ಕ್ರಿಸ್ ಮಸ್ ಹಬ್ಬ ಬರುತ್ತಿದ್ದಂತೇ ವಿಧವಿಧ ಕೇಕ್ ಗಳ ತಯಾರಿಕೆಯೂ ಭರಾಟೆಯಾಗಿರುತ್ತೆ. ಬೆಂಗಳೂರಿನಲ್ಲೂ ಕ್ರಿಸ್ ಮಸ್ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ಬೆಂಗಳೂರಿನ ಜಸ್ಟ್ ಬೇಕ್ ಬೇಕರಿ ಪ್ರಪಂಚದ ಅತಿ ದೊಡ್ಡ ಫ್ರೂಟ್ ಕೇಕನ್ನು ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆಯಲ್ಲಿ ತನ್ನ ಹೆಸರು ಗುರುತಿಸಿಕೊಳ್ಳಲು ಮುಂದಾಗಿದೆ.

ಡಿಸೆಂಬರ್ 8 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ 3510 ಕೆ.ಜಿಯ ಈ ಫ್ರೂಟ್ ಕೇಕನ್ನು ಪ್ರದರ್ಶನಕ್ಕಿಡಲಾಗಿದೆ. ಗಿನ್ನಿಸ್ ದಾಖಲೆಯ ಅಧಿಕಾರಿಗಳು ಭಾನುವಾರ ಕೇಕನ್ನು ಪರಿಶೀಲಿಸಿ ವಿಶ್ವ ದಾಖಲೆಗೆ ಸೇರಿಸುವ ಕುರಿತು ಚಿಂತನೆ ನಡೆಸಲಿದ್ದಾರೆ ಎಂದು ಜಸ್ಟ್ ಬೇಕ್ ನಿರ್ದೇಶಕ ರಾಮ್ ರೆಡ್ಡಿ ತಿಳಿಸಿದ್ದಾರೆ.

ಸದ್ಯದಲ್ಲಿ ಟಿಆರ್ ಡಿ ರೊಮಾನಿಯಾ ಡಯಾರೀಸ್ ಪ್ರಪಂಚದಲ್ಲಿ ಅತಿ ದೊಡ್ಡ ಕೇಕ್ ತಯಾರಿಸಿದ ಖ್ಯಾತಿ ಪಡೆದುಕೊಂಡಿದೆ (281.1ಕೆಜಿ) ನಮಗೆ ನಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸವಿದೆ. ಇದು ಈಗಿರುವ ದಾಖಲೆ ಕೇಕ್ ಗಿಂತ 13 ಪಟ್ಟು ಹೆಚ್ಚಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಇದು ಕ್ರಿಸ್ ಮಸ್ ಹಬ್ಬದ ಸಮಯವಾದ್ದರಿಂದ ಸಾಂಟಾ ಕ್ಲಾಸ್ ಉಡುಗೊರೆ ಹೊತ್ತು ಹೋಗುವ ಮಾದರಿಯಲ್ಲಿ ತಯಾರಿಸಲಾಗಿದೆ ಎಂದಿದ್ದಾರೆ.

ಕೇಕ್ ತಯಾರಿಕೆಗೆಂದು 150 ಬಾಟಲ್ ರಂ, 1700 ಕೆಜಿ ಹಣ್ಣು ಮತ್ತು 17,500 ಮೊಟ್ಟೆ ಬಳಸಿಕೊಳ್ಳಲಾಗಿದೆ. ಕೇಕನ್ನು ವಿಶ್ವ ದಾಖಲೆಗೆ ಸೇರಿಸಲು 3 ತಿಂಗಳಿನಿಂದ 30 ಚೆಫ್ ಗಳು ಕಾರ್ಯ ನಿರ್ವಹಿಸುತ್ತಿದ್ದರು. ಈ ಕೇಕನ್ನು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ಫುಡ್ ಅಂಡ್ ಕಿಚನ್ ಎಕ್ಸ್ ಪೊದಲ್ಲಿ ಭಾನುವಾರದವರೆಗೆ ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದೆ.

English summary
Just Bake, a bangalore bakery is all set to make its appearance in the Guinness Book of World Records as it displayed the largest fruit cake in the world on December 8 at Palace Ground. The cake weighed over 3510 kgs in Santa Claus theme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X