ಸಿರಿಯಾ ದೇಶದಲ್ಲಿ ಐಫೋನ್ ಬಳಕೆ ನಿಷೇಧ

Posted by:
 
Share this on your social network:
   Facebook Twitter Google+ Comments Mail

iphone ban in Syria
ಡಮಾಸ್ಕಸ್, ಡಿ.5: ಸಿರಿಯಾದಲ್ಲಿ ಜನಪ್ರಿಯ ಸ್ಮಾರ್ಟ್ ಫೋನ್ ಐಫೋನ್ ಬಳಕೆ ನಿಷೇಧಿಸಲಾಗಿದೆ. ದೇಶದಿಂದ ಮಾಹಿತಿ ಸೋರಿಕೆಯಾಗುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಐಫೋನ್ ಬಳಸುವಂತಿಲ್ಲ ಎಂದು ಇಲ್ಲಿನ ಸರ್ಕಾರ ಎಚ್ಚರಿಕೆ ಆದೇಶ ನೀಡಿದೆ.

ಸಿರಿಯಾದ ಆರ್ಥಿಕ ವಿಭಾಗ ಹಾಗೂ ಕಸ್ಟಮ್ಸ್ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಐಫೋನ್ ಆಮದು ಕೂಡಾ ಬಂದ್ ಮಾಡಲಾಗಿದೆ ಎಂದು ಲಿಬೆನಾಸ್ ಹಾಗೂ ಜರ್ಮನಿಯ ಮಾಧ್ಯಮಗಳು ವರದಿ ಮಾಡಿದೆ.

ನಿಷೇಧಕ್ಕೆ ಕಾರಣವೇನು? : ಸಿರಿಯಾ ಬಂಡುಕೋರರ ಕುಮ್ಮಕ್ಕಿನಿಂದ ಕೆಲವರು ಸರ್ಕಾರಿ ವಿರೋಧಿ ಚಿತ್ರಗಳನ್ನು ಹಾಗೂ ವಿಡಿಯೋ ತುಣುಕುಗಳನ್ನು ಇಂಟರ್ ನೆಟ್ ಗೆ ಅಪ್ ಲೋಡ್ ಮಾಡುತ್ತಿದ್ದಾರೆ. ದೇಶದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸಿಲ್ಲ.

ಅಶಾಂತಿ ಎಬ್ಬಿಸಿ ಸರ್ಕಾರ ಇಳಿಸಲು ಯತ್ನಿಸಲಾಗುತ್ತಿದೆ. ಆದ್ದರಿಂದ ಐಫೋನ್ ನಿಷೇಧಿಸಿ ಈ ರೀತಿ ಸ್ವಾಮಿದ್ರೋಹದ ಕೆಲಸಕ್ಕೆ ಕಡಿವಾಣ ಹಾಕಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳಿದೆ.

ಬಹುತೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಈಗಾಗಲೇ ಸಿರಿಯಾದಿಂದ ಕಾಲ್ತೆಗೆದಿದೆ. ಹಾಗಾಗಿ ವಿಡಿಯೋ ತುಣುಕುಗಳನ್ನು ಪ್ರಸರಿಸುವ ಕೆಲಸ ಸಾರ್ವಜನಿಕರೇ ಮಾಡುತ್ತಿದ್ದಾರೆ ಎಂದು ಸರ್ಕಾರ ನಂಬಿದೆ.

ಮೂಲಗಳ ಪ್ರಕಾರ ಐಫೋನ್ ಬಳಕೆದಾರರು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಆದರೆ, ಈ ನಿಷೇಧ ಇತರೆ ಸ್ಮಾರ್ಟ್ ಫೋನ್ ಗಳಿಗೆ ಅನ್ವಯವಾಗಿಲ್ಲ ಎಂಬುದು ವಿಶೇಷ.

English summary
Syria has banned the iPhone as many images and video footage filmed by iphone against the government posted on the internet. Government tries to control information getting out of the country. However, smartphones are apparently not affected by the ban.
Please Wait while comments are loading...
Your Fashion Voice
Advertisement
Content will resume after advertisement