ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ದಂಪತಿ ಪ್ರಕರಣ ರದ್ದು ಹೈಕೋರ್ಟ್ ತೀರ್ಪು

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಅ.21: ಜಂತಕಲ್ ಮೈನಿಂಗ್ ಲೈಸನ್ಸ್ ಹಾಗೂ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ಡಿನೋಟಿಫೈ ಅವ್ಯವಹಾರ ಪ್ರಕರಣವನ್ನು ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸಂಸದ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ದೂರು ಸಲ್ಲಿಸಲಾಗಿದೆ. ಎಚ್ಡಿಕೆ ದಂಪತಿಯಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಸರ್ಮಥಿಸಲು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.

ದೂರು ನೀಡಿರುವ ವಿನೋದ್ ಕುಮಾರ್ ಅವರು ದೃಢೀಕರಣ ಪತ್ರ ಸಲ್ಲಿಸದ ಕಾರಣ ಇಡೀ ಪ್ರಕರಣವನ್ನು ನ್ಯಾಯಾಧೀಶ ಜಗನ್ನಾಥನ್ ಅವರು ರದ್ದುಗೊಳಿಸಿದ್ದಾರೆ. ಫಿರ್ಯಾದುದಾರ ವಿನೋದ್ ಕುಮಾರ್ ಅವರಿಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದು ಕೋರ್ಟ್ ಗೆ ನೀಡಿಲ್ಲ. ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಪಾಲರ ಆನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಎನ್ ಜಗನ್ನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Karnataka High court cancels Lokayukta probe and court proceeding on Jantakal Mining and Vishwabharati Housing Cooperative Society. Vinod Kumar is the one filed plea against JDS leader HD Kumaraswamy and his wife Anitha Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X