ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ರೈತರ ಅರೆಬೆತ್ತಲೆ ಪ್ರತಿಭಟನೆ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

Farmers protest against UPCL
ಉಡುಪಿ, ಅ.18 : ಎಲ್ಲೂರು ಗ್ರಾಮದಲ್ಲಿರುವ ಯುಪಿಸಿಎಲ್‌ (ಉಡುಪಿ ಪವರ್‌ ಕಾರ್ಪೋರೇಶನ್‌ ಲಿ.) ಉಷ್ಣ ವಿದ್ಯುತ್‌ ಸ್ಥಾವರವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಇದೇ ಮೊದಲ ಬಾರಿಗೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಯುಪಿಸಿಎಲ್‌ ಕಂಪೆನಿಯಿಂದಾಗಿ ಸ್ಥಳೀಯ ಪರಿಸರ, ಜನಜೀವನದ ಮೇಲೆ ಉಂಟಾಗಿರುವ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಡಾ| ಎಂ.ಟಿ. ರೆಜು ಅವರು ಇತ್ತೀಚೆಗೆ ಯುಪಿಸಿಎಲ್‌ ಪ್ರದೇಶಕ್ಕೆ ಭೇಟಿ ಇತ್ತಾಗ ಅ. 17ರ ಒಳಗೆ ಸಾರ್ವಜನಿಕ ಅಹವಾಲು ಸ್ವೀಕರಿಸುತ್ತೇನೆಂದು ಹೇಳಿದ್ದರು. ಆದರೆ ಸೋಮವಾರ ನಡೆಯಬೇಕಾಗಿದ್ದ ಈ ಅಹವಾಲು ಸಭೆಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದು ರೈತಸಂಘದವರನ್ನು ಕೆರಳಿಸಿ ಪ್ರತಿಭಟನೆಗೆ ಮುಂದಾಗಲು ಕಾರಣವಾಯಿತು.

ಊಟದ ತಟ್ಟೆ, ರಾಸಾಯನಿಕ ಮಿಶ್ರಿತಗೊಂಡ ಕಲುಷಿತ ನೀರು, ರೋಗಪೀಡಿತ ಜನ, ಪ್ರಾಣಿಗಳ ಚಿತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಶುದ್ಧ ಗಾಳಿ, ನೀರು ಇಲ್ಲದೆ ನಾವು ಪರಿತಪಿಸುತ್ತಿದ್ದೇವೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಪ್ರತಿಭಟನಾ ನಿರತರ ಮನವೊಲಿಸಿದರೂ ಡಿಸಿ ರೆಜು ಅವರೇ ಬಂದು ನಮಗೆ ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನಾಕಾರರು ತಮ್ಮ ಶರ್ಟುಗಳನ್ನು ಕಳಚಿಕೊಂಡು ಅರೆಬೆತ್ತಲೆಯಾಗಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಘೋಷಣೆ ಕೂಗಿ ಧರಣಿ ಕುಳಿತರು. ಪ್ರತಿಭಟನಾಕಾರರು ಅರೆಬೆತ್ತಲೆಯಲ್ಲಿಯೇ ಡಿಸಿ ಕಚೇರಿಯೊಳಗೆ ಪ್ರವೇಶಿಸಿ ಮಾತುಕತೆ ನಡೆಸಿದರು.

ಬೇರೆಬೇರೆ ಕಾರಣಗಳಿಂದಾಗಿ ಪರಿಣತ ಸಮಿತಿ ಸದಸ್ಯರು ಸಭೆಗೆ ಹಾಜರಾಗದ ಕಾರಣ ಅಹವಾಲು ಸ್ವೀಕರಿಸಲು ಆಗಲಿಲ್ಲ. ಶೀಘ್ರವೇ ಯುಪಿಸಿಎಲ್‌ ತಜ್ಞರ ಸಮಿತಿಯ ಸಭೆ ಕರೆದು ತಿಂಗಳಾಂತ್ಯದೊಳಗೆ ಸಾರ್ವಜನಿಕ ಅಹವಾಲು ಸಭೆಗೆ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

English summary
Farmers protest against Udupi Power Corporation Limited by removing their shirt in Udupi. They are demanding closure of power plant which is causing health hazards in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X