ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಲ್ಲಿ ಭೀತಿ ಹುಟ್ಟಿಸುವ ಸಚಿವೆ ಶೋಭಾ

By Mahesh
|
Google Oneindia Kannada News

Minister Shobha Karandlaje
ಮಂಗಳೂರು, ಅ.18: ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿದ್ಯುತ್ ಹೆಸರಲ್ಲಿ ಕರ್ನಾಟಕದ ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ಅಪಾಯ ತಂದೊಡ್ಡಿದ್ದಾರೆ. ಇದರ ವಿರುದ್ಧ ಜನಾಂದೋಲನ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಶಾಸಕರಾದ ರಮಾನಾಥ್ ರೈ ಮತ್ತು ಯು ಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.

"ಈ ವಿಚಾರವನ್ನು ತಾವು ದಿಲ್ಲಿ ನಾಯಕರ ಜೊತೆ ಚರ್ಚಿಸಲಿದ್ದೇವೆ ಎಂದಿರುವ ಅವರು, ಸಚಿವೆ ಶೋಭಾ ರಾಜ್ಯದ ಜನತೆ ದಾರಿ ತಪ್ಪಿಸುತ್ತಿರುವುದಲ್ಲದೆ ವಿದ್ಯುತ್ ಆಂತಕ ಸೃಷ್ಟಿಗೂ ಕಾರಣರಾಗಿದ್ದಾರೆ" ಎಂದು ಆರೋಪಿಸಿದ್ದಾರೆ.

"ಬಿಜೆಪಿ ಆಕೆಗೆ ಸಾಕಷ್ಟು ಅಧಿಕಾರ ಮತ್ತು ಸ್ವಾಯತ್ತತೆ ನೀಡಿದ್ದರೂ ಇಂಧನ ವಿಲೇವಾರಿ ವಿಷಯದಲ್ಲಿ ಅಸಮರ್ಥರಾಗಿದ್ದಾರೆ. ಕರ್ನಾಟಕದ ಮಂದಿಗೆ ಆಕೆ ಭೀತಿ ಹುಟ್ಟಿಸುತ್ತಿದ್ದಾರೆ.

ಇದುವರೆಗಿನ ಯಾವುದೇ ಇಂಧನ ಸಚಿವರು ರಾಜ್ಯದ ಜನತೆಯ ಇಂಧನ ಭದ್ರತೆ ಕಸಿದುಕೊಳ್ಳುವ ಪ್ರಯತ್ನ ನಡೆಸಿಲ್ಲ. ಆದರೆ ಶೋಭಾ ಅವರು ಆ ಕೆಲಸ ಮಾಡುತ್ತಿದ್ದಾರೆ ಎಂದು ರೈಹೇಳಿದ್ದಾರೆ.

"ಶೋಭಾಗೆ ಮಹತ್ವದ ಖಾತೆ ನೀಡಲಾಗಿದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಂಧನ ವಿಷಯದಲ್ಲಿ ಅಂತರ್ -ರಾಜ್ಯ ಸಂಬಂಧದ ದುರಾಡಳಿತದಿಂದ ಎಲ್‌ಪಿಜಿ ಗೊಂದಲ ಉಂಟಾಗಿದೆ" ಎಂದು ರೈ ಹೇಳಿದ್ದಾರೆ.

"ಎಲ್‌ಪಿಜಿ ಸಂಪರ್ಕ ಕಸಿದುಕೊಳ್ಳಲು ಪ್ರಯತ್ನ ಮುಂದುವರಿಸಿರುವ ಶೋಭಾ, ಇದೀಗ ಬೆಂಗಳೂರಿಗೆ ದಿನಪೂರ್ತಿ ವಿದ್ಯುತ್ ಘೋಷಿಸಿ, ಇತರ ಮಹಾನಗರಗಳಿಗೆ ವಿದ್ಯುತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದಾರೆ" ಎಂದು ಖಾದರ್ ಟೀಕಿಸಿದ್ದಾರೆ.

ಸಾಮಾನ್ಯ ಜನತೆಯ ಬಗ್ಗೆ ಕಾಳಜಿ ಇಲ್ಲದ ಆಕೆ, ದಂತದ ಅರಮನೆಯಲ್ಲಿ ಕುಳಿತು ವಿದ್ಯುತ್ ನೀತಿ ರೂಪಿಸುತ್ತಿದ್ದಾರೆ. ಆಕೆ ಒಮ್ಮೆ ಹಳ್ಳಿಗೆ ಬಂದು ಪರಿಸ್ಥಿತಿಯ ಅವಲೋಕನ ಮಾಡಲಿ ಎಂದು ಯುಟಿ ಖಾದರ್ ಸವಾಲು ಹಾಕಿದ್ದಾರೆ.

English summary
Congress MLAs in Dakshina Kannada, Ramanatha Rai and UT Khader condemned Minister Shobha Karandlaje policies towards Power generation and Load shedding. DK congress decided to take up a ‘shadow campaign’ against energy minister Shobha Karandlaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X