ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನಶಂಕರಿಯ ಇಬ್ಬರು ಟೆಕ್ಕಿಗಳು ಗೋಕರ್ಣ ಓಂ ಬೀಚಿನಲ್ಲಿ ಸಮುದ್ರ ಪಾಲು

By Srinath
|
Google Oneindia Kannada News

bangalore-techies-die-in-gokarna-om-beach
ಭಟ್ಕಳ, ಅ 17: ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರ 13 ಉದ್ಯೋಗಿಗಳಲ್ಲಿ ಇಬ್ಬರು ಗೋಕರ್ಣದ ಓಂ ಬೀಚ್ ಸಮುದ್ರದಲ್ಲಿ ಭಾನುವಾರ ಸಂಜೆ 4-30ರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಬೆಂಗಳೂರು ಬನಶಂಕರಿಯ ಸಾಫ್ಟ್‌ವೇರ್ ಉದ್ಯೋಗಿಗಳಾದ ಎನ್ ಸಿ ಕಾರ್ತಿಕ್ (23) ಹಾಗೂ ವಿಜಯಕುಮಾರ್ (26) ಎಂದು ಗುರುತಿಸಲಾಗಿದೆ.

Cognizant Technology Solutions (CTS) ಕಂಪನಿಯ 13 ಜನರ ಟೆಕ್ಕಿಗಳ ತಂಡ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿತ್ತು. ಮಂಗಳೂರು, ಮಲ್ಪೆ, ಮುರುಡೇಶ್ವರ ಮುಂತಾದ ಸ್ಥಳಗಳನ್ನು ನೋಡಿಕೊಂಡು ಇಂದು ಮಧ್ಯಾಹ್ನ ಸುಮಾರು 2.30ಕ್ಕೆ ಗೋಕರ್ಣ ತಲುಪಿದರು ಎಂದು ಹೇಳಲಾಗಿದೆ.

ಅವರಲ್ಲಿ 8 ಮಂದಿ ಸಮುದ್ರ ಸ್ನಾನಕ್ಕೆಂದು ನೀರಿನಲ್ಲಿ ಈಜಲು ಅಣಿಯಾದರು ಎನ್ನಲಾಗಿದೆ. ಸಮುದ್ರದಲ್ಲಿ ಈಜುತ್ತಾ ಮುಂದೆ ಸಾಗಿದ ಕಾರ್ತಿಕ್ ಹಾಗೂ ವಿಯಜಕುಮಾರ್ ಅಲೆಗಳ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿರುವುದ್ದಾಗಿ ಗೋಕರ್ಣ ಪಿಎಸ್ಸೈ ಬಾಲಾಜಿ ಬಾಬು ತಿಳಿಸಿದ್ದಾರೆ.

ಇದೇ ವೇಳೆ ಸಮುದ್ರಕ್ಕೆ ಬಿದ್ದಿದ್ದ ಮತ್ತಿಬ್ಬರನ್ನು ವಿದೇಶಿ ಪ್ರವಾಸಿಗರ ಸಹಾಯದಿಂದ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೃತರ ಶವಗಳನ್ನು ಗೋಕರ್ಣ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ಅವರ ಪಾಲಕರಿಗೆ ಸುದ್ದಿಯನ್ನು ಮುಟ್ಟಿಸಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two young software engineers from Banashankari in Bangalore drowned in the sea off Om beach in Gokarna on Sunday evening (Ovt 16). They were in Gokarna on a tour. The victims are Kartik S C (23) and Vijay Kumar Murthy (26) working with Cognizant Technology Solutions (CTS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X