ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷೆಯಂತೆ ಉಪ ಲೋಕಾಯುಕ್ತ ನ್ಯಾ.ಗುರುರಾಜನ್‌ ರಾಜೀನಾಮೆ

By Srinath
|
Google Oneindia Kannada News

upa-lokayukta-justice-retd-r-gururajan-resigns
ಬೆಂಗಳೂರು, ಅ. 13: ನಿಯಮಬಾಹಿರವಾಗಿ ನಿವೇಶನ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 2ನೇ ಉಪ ಲೋಕಾಯುಕ್ತ ನ್ಯಾ.ಆರ್‌. ಗುರುರಾಜನ್‌ ಬುಧವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.

ನ್ಯಾ. ಶಿವರಾಜ್‌ ವಿ ಪಾಟೀಲ್‌ ಅವರು ಗೃಹ ನಿರ್ಮಾಣ ಸಂಘದಿಂದ ನಿಯಮಬಾಹಿರ ನಿವೇಶನ ಪಡೆದುಕೊಂಡಿರುವ ಆರೋಪದ ಮೇಲೆ ಲೋಕಾಯುಕ್ತ ಸ್ಥಾನಕ್ಕೆರಾಜೀನಾಮೆ ನೀಡಿದ ಬೆನ್ನಲ್ಲೇ ಅಂತಹುದೇ ಆರೋಪದಲ್ಲಿ 2ನೇ ಉಪ ಲೋಕಾಯುಕ್ತ ನ್ಯಾ. ಗುರುರಾಜನ್‌ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು 'ಕನ್ನಡವನ್ಇಂಡಿಯಾ' ಅಂದೇ ಸಾರಿತ್ತು.

ಗಮನಾರ್ಹವೆಂದರೆ ಎರಡು ತಿಂಗಳ ಹಿಂದಷ್ಟೇ ರಾಜ್ಯದ ಎರಡನೇ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾ. ಗುರುರಾಜನ್‌ ಅವರು ತಮ್ಮ ಮೇಲೆ ಗುರುತರ ಆರೋಪವಿದ್ದರೂ ರಾಜೀನಾಮೆ ನೀಡುವುದಕ್ಕೆ ಇಷ್ಟು ತಡಮಾಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಆದಾಗ್ಯೂ, ಬುಧವಾರ ಯಾವುದೇ ಮುನ್ಸೂಚನೆಗಳಿಲ್ಲದೆ, ಮಾಧ್ಯಮಗಳಿಗೂ ತಿಳಿಸದೆ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ.

English summary
Karnataka Upa Lokayukta Justice (retd) R Gururajan has quit the post. Land scam is the definite root cause for the act says insiders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X