ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ದಾನ ಮಾಡಿದ ಕಲಿಯುಗದ ಕರ್ಣ ಕೊಲಾಕೊ

By Prasad
|
Google Oneindia Kannada News

philanthropist Ronald Colaco
ಬೆಂಗಳೂರು, ಸೆ. 16 : ಮಳೆ ನೀರು ಹರಿಸುವ ಚರಂಡಿ ಇರುವ, ರಸ್ತೆ ಅಗಿಯದೆ ವಿದ್ಯುತ್ ತಂತಿಗಳನ್ನು ಎಳೆಯಬಲ್ಲಂಥ, ರಸ್ತೆ ವಿಭಜಕಗಳು ಇರುವಂಥ, ನೂರಾರು ಕುಟುಂಬಗಳಿಗೆ ಅನುಕೂಲ ಕಲ್ಪಿಸಬಲ್ಲಂಥ, 4.4 ಕೋಟಿ ರು. ಬೆಲೆಬಾಳುವಂಥ, 2.2 ಕಿ.ಮೀ. ಉದ್ದದ ರಸ್ತೆಯನ್ನು ಎನ್ಆರ್ಐ ಉದ್ಯಮಿ, ದಾನಿಯೊಬ್ಬರು ಕರ್ನಾಟಕ ಸರಕಾರಕ್ಕೆ ದಾನ ಮಾಡಿದ್ದಾರೆ.

ಇಂತಹ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀರ ಹತ್ತಿರದಲ್ಲಿರುವ ರಸ್ತೆಯನ್ನು ರಾಜ್ಯಕ್ಕೆ ಅರ್ಪಿಸಿದವರು ಮಂಗಳೂರಿನ ಮೂಲದ ರೊನಾಲ್ಡ್ ಕೊಲಾಕೊ ಎಂಬ ಕರ್ಣ. ಈ ರಸ್ತೆಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಉದ್ಘಾಟಿಸಿ, ರೊನಾಲ್ಡ್ ಅವರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

"ಇಂದಿನ ಕಾಲದಲ್ಲಿ ಅನ್ಯರ ತಲೆಯ ಮೇಲೆ ಹೊಡೆದಾದರೂ ಭೂ ಕಬಳಿಸುವವರೇ ತುಂಬಿಕೊಂಡಿದ್ದಾರೆ. ಅಂಥದರಲ್ಲಿ ತಾವೇ ಅಭಿವೃದ್ಧಿಪಡಿಸಿ, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಚಿಂತಿಸುವಂತಹ ರೊನಾಲ್ಡ್ ಅಂಥವರು ಸಿಗುವುದು ಅಪರೂಪ. ಸರಕಾರದ ಕೆಲಸವನ್ನು ಉಳಿಸಿ ಅನ್ಯರಿಗೆ ಉತ್ತಮ ಹಾದಿ ಹಾಕಿಕೊಟ್ಟಿದ್ದಾರೆ" ಎಂದು ಡಿವಿಎಸ್ ಕೊಲಾಕೊ ಅವರನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೊಲಾಕೊ ಅವರು, "ನಾನು ನೀಡಿದ ಅತ್ಯಲ್ಪ ಕಾಣಿಕೆಗೆ ಹಾರ ಹಾಕಿ, ಪೇಟ ತೊಡಿಸಿ ಗೌರವಿಸಿದ್ದು ತುಂಬಾ ಸಂಸತ ನೀಡುತ್ತಿದೆ. ಇದೇ ರೀತಿ ಬೇರೆಯವರು ಕೂಡ ಜನರಿಗೆ ಅನುಕೂಲವಾಗುವಂತೆ ಸೇವೆ ಮಾಡಲು ಮುಂದೆ ಬಂದರೆ ಇದಕ್ಕಿಂತ ಹೆಚ್ಚಿನ ಸಂತೋಷವಾಗುತ್ತದೆ" ಎಂದರು.

ಈ ರಸ್ತೆ ಸಾದಹಳ್ಳಿ, ನವರತ್ನ ಅಗ್ರಹಾರ, ಬೋವಿಪಾಳ್ಯ ಗ್ರಾಮ ಮತ್ತು ಹಾಲಿವುಡ್ ರೆಸಿಡೆನ್ಶಿಯಲ್ ಟೌನ್ ಶಿಪ್, ಸ್ವಿಸ್ ಟೌನ್ ಶಿಪ್ ಗಳನ್ನು ಜೋಡಿಸುತ್ತದೆ. ಇಲ್ಲಿ ಏನಿಲ್ಲವೆಂದರೂ ಸಾವಿರ ಕುಟುಂಬಗಳಿಗೆ ಈ ರಸ್ತೆ ಅನುಕೂಲವಾಗಿ ಪರಿಣಮಿಸಿದೆ.

English summary
Chief Minister Sadananda Gowda Inaugurates State-of-the-Art Road donated by NRI businessman and philanthropist Ronald Colaco, who undertook the project near Bangalore International airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X