ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಎಲ್ಲಿದೆ ಗೊತ್ತಾ?

By Prasad
|
Google Oneindia Kannada News

Freedom park Bangalore
ಬೆಂಗಳೂರು, ಆ. 20 : ಪ್ರತಿಭಟನೆಗಳೆಂದೇ ಮೀಸಲಾಗಿರುವ ಫ್ರೀಡಂ ಪಾರ್ಕ್ ಅಥವಾ ಸ್ವಾತಂತ್ರ್ಯ ಉದ್ಯಾನ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದಾಗಿ ಸುದ್ದಿ, ಆಕರ್ಷಣೆ ಮತ್ತು ಶಕ್ತಿಯ ಕೇಂದ್ರಬಿಂದುವಾಗಿದೆ. ಫ್ರೀಡಂ ಪಾರ್ಕ್ ಎಂದರೆ ಏನು, ಎಲ್ಲಿದೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳದಿದ್ದ ಜನರನೇಕರು ಈಗ ಅದು ಎಲ್ಲಿದೆ ಎಂದು ಹುಡುಕುಡುಕಿ ಬರುತ್ತಿದ್ದಾರೆ.

ಕೃಷ್ಣ ರಾಜೇಂದ್ರ ವೃತ್ತದ ಬಳಿಯಿರುವ ಮಹಾರಾಣಿ ಕಾಲೇಜಿನ ಎದುರಿನಲ್ಲಿರುವ ಫ್ರೀಡಂ ಪಾರ್ಕ್ ನಿರ್ಮಾಣವಾಗಿದ್ದು 2008ರಲ್ಲಿ. ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆಯಾದ ನಂತರ ಶೇಷಾದ್ರಿ ರಸ್ತೆಯಲ್ಲಿರುವ ಮಾಜಿ ಕಾರಾಗೃಹವನ್ನು ಸ್ವಾತಂತ್ರ್ಯ ಉದ್ಯಾನವನ್ನಾಗಿ ಮಾರ್ಪಡಿಸಲಾಯಿತು.

ಸದ್ಯಕ್ಕಂತೂ ಪ್ರವೇಶ ದರ ಉಚಿತವಿರುವ 16 ಎಕರೆಗಳಲ್ಲಿ ವಿಸ್ತರಿಸಿಕೊಂಡಿರುವ ಉದ್ಯಾನ ಹಳೆಯ ಪ್ರವೇಶದ್ವಾರ, ಕೈದಿಗಳ ಸಾಲುಮನೆ, ಸಮಾನಾಂತರ ಗೋಡೆಗಳನ್ನು ಹಿಂದಿದ್ದಂತೆ ಉಳಿಸಿಕೊಂಡಿದೆ. ಹೊಸದಾಗಿ ಕಾರಾಗೃಹ ಸಂಗ್ರಹಾಲಯ, ಕಾರಂಜಿ, ಶಿಲ್ಪಕಲೆ ಅಂಗಳ, ಇಂಟರ್ಯಾಕ್ಟೀವ್ ಜಲಕಾರಂಜಿ, ಸಾಹಿತ್ಯ ಅಂಗಳಗಳನ್ನು ನಿರ್ಮಿಸಲಾಗಿದೆ.

ಈ ಕಾರಾಗೃಹ ವಿನ್ಯಾಸಕ್ಕಾಗಿಯೇ ಬಿಬಿಎಂಪಿ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅದರಲ್ಲಿ ವಿಜೇತರಾದ ಸೌಮಿತ್ರೊ ಘೋಷ್ ಮತ್ತು ನಿಷಾ ಮ್ಯಾಥ್ಯೂ ಘೋಷ್ ಅವರ ಪರಿಕಲ್ಪನೆಯ ಉದ್ಯಾನವನ್ನು 17.35 ಕೋಟಿ ರು.ಗಳಲ್ಲಿ ನಿರ್ಮಿಸಲಾಯಿತು. ಲಂಡನ್ನಿನ ಹೈಡ್ ಉದ್ಯಾನದ ಮಾದರಿಯಲ್ಲಿ 6 ಎಕರೆಯನ್ನು ಪ್ರತಿಭಟನೆಗಾಗಿಯೇ ಮೀಸಲಿಡಲಾಗಿದೆ.

ಹಳೆ ಕೇಂದ್ರ ಕಾರಾಗೃಹ ನಿರ್ಮಾಣವಾದದ್ದು 1865-66ರಲ್ಲಿ. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಮರ ಮುಗಿದ ನಂತರ ಚಳವಳಿಗೆ ಧುಮುಕುತ್ತಿದ್ದ ಭಾರೀ ಸಂಖ್ಯೆಯ ಭಾರತೀಯರನ್ನು ತುಂಬಲು ಅಗತ್ಯವಿದ್ದ ಕಾರಣ ಈ ಕಾರಾಗೃಹವನ್ನು ನಿರ್ಮಿಸಲಾಗಿತ್ತು. ಅತ್ಯಾಧುನಿಕ ಟಚ್ ಪಡೆದಿರುವ ಫ್ರೀಡಂ ಪಾರ್ಕ್ ನಲ್ಲಿ ಹಳೆ ಪಳಿಯುಳಿಕೆಗಳನ್ನು ಇಂದಿಗೂ ಇಲ್ಲಿ ನೋಡಬಹುದಾಗಿದೆ.

English summary
Freedom Park which was built in 2008 in the place old central jail has become landmark place in Bangalore. Situated opposite Maharani girls college on Sheshadri road near KR circle, freedom park is allotted for protests. Presently Bangaloreans have gathered here in support of Anna Hazare to fight against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X