ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಕುಮಾರಸ್ವಾಮಿ-ಜಂತಕಲ್‌ ಮೈನಿಂಗ್ಸ್ ನಂಟು ?

By Srinath
|
Google Oneindia Kannada News

HD Kumaraswamy - Janthakal Mining Enterprises link,
ಬೆಂಗಳೂರು, ಆಗಸ್ಟ್ 08: ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ಸಾಗಿಸಿ ಕಪ್ಪು ಪಟ್ಟಿಯಲ್ಲಿದ್ದ ವಿನೋದ್‌ ಗೋಯಲ್‌ ಮಾಲೀಕತ್ವದ ಕಂಪನಿಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗಣಿ ಗುತ್ತಿಗೆ ಮಂಜೂರು ಮಾಡಿ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್‌ ಗೋಯಲ್‌ ಮಾಲೀಕತ್ವದ ಜಂತಕಲ್‌ ಎಂಟರ್ ಪ್ರೈಸಸ್‌ಗೆ ಅನುಮತಿ ನೀಡಿರುವ ಪ್ರಕರಣದಲ್ಲಿ ಕುಮಾರಸ್ವಾಮಿ ನೇರವಾಗಿ ಭಾಗಿಯಾಗಿದ್ದಾರೆ.

ಅದೇ ರೀತಿ ಬಳ್ಳಾರಿಯ ಸಂಡೂರಿನಲ್ಲಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ನೀಡುವಲ್ಲಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದು, ಈ ಎರಡು ಕಂಪನಿಗಳು ನಡೆಸಿದ ಅಕ್ರಮಗಳಿಂದ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

2006-07ನೇ ಸಾಲಿನಲ್ಲಿ ಪಾಕಿಸ್ತಾನದ ಕಂಪನಿಯೊಂದಕ್ಕೆ ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ 32 ಸಾವಿರ ಮೆಟ್ರಿಕ್‌ ಟನ್‌ ಅದಿರು ರಫ್ತು ಮಾಡಿದ್ದ ವಿನೋದ್‌ ಗೋಯಲ್‌ ಕಂಪನಿಯನ್ನು ಕೇಂದ್ರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ ಕುಮಾರಸ್ವಾಮಿ ಇದನ್ನು ನಿರ್ಲಕ್ಷಿಸಿ ಚಿತ್ರದುರ್ಗದ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಜಂತಕಲ್‌ ಎಂಟರ್ ಪ್ರೈಸಸ್‌ಗೆ ಕೇವಲ 12 ಗಂಟೆ ಅವಧಿಯೊಳಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದರು.

ಕುಮಾರಸ್ವಾಮಿ ಅವರೇ ನೇರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಶಿಫಾರಸು ಪತ್ರ ಬರೆದು ಜಂತಕಲ್‌ ಎಂಟರ್ ಪ್ರೈಸಸ್‌ಗೆ ತಕ್ಷಣ ಪರವಾನಗಿ ಮಂಜೂರು ಮಾಡಿಸಿದ್ದಾರೆ. ಅದೇ ರೀತಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳಿದ್ದರೂ ಬಳ್ಳಾರಿಯ ಸಂಡೂರು ವಲಯದಲ್ಲಿ 200 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ಕೊಡಿಸುವಲ್ಲಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ.

English summary
Who moved my Cheese? : Two days before former chief minister, HD Kumaraswamy demitted office, Kumaraswamy granted mining lease to Sai Venkateshwara Minerals, violating rules and regulations. In turn, he got Rs167 crore in kickbacks from the mining company for his (Kumaraswamy) brother’s BSK trading company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X