ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಕೊಲೆಗಡುಕನಿಗೆ ಗಲ್ಲು ವಿಧಿಸಿ: ಸರ್ಕಾರದ ಮೇಲ್ಮನವಿ

By Srinath
|
Google Oneindia Kannada News

BPO employee Pratibha Srikanthamurthy
ಬೆಂಗಳೂರು, ಜುಲೈ22: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಕಾಲ್‌ಸೆಂಟರ್ ಉದ್ಯೋಗಿ ಪ್ರತಿಭಾ ಅವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ, ಚಾಲಕ ಶಿವಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

'ಹ್ಯೂಲೆಟ್ ಪ್ಯಾಕಾರ್ಡ್ ಗ್ಲೋಬಲ್ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಅತ್ಯಾಚಾರ, ಕೊಲೆ ಪ್ರಕರಣ ಇದಾಗಿದೆ. ಕಂಪನಿಯ ಕ್ಯಾಬ್‌ನ ಚಾಲಕ ಗೈರುಹಾಜರಿಯಾಗಿದ್ದ ನಿಮಿತ್ತ ಶಿವಕುಮಾರ್ ಚಾಲಕನಾಗಿ ಬಂದಿದ್ದ.

ರಾತ್ರಿಯ ವೇಳೆ ಪ್ರತಿಭಾ ಅವರನ್ನು ಮನೆಯಿಂದ ಕಚೇರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅವರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 10ರಂದು ಸೆಷನ್ಸ್ ಕೋರ್ಟ್ 'ಸಾಯುವವರೆಗೆ ಜೀವಾವಧಿ ಶಿಕ್ಷೆ' ನೀಡಿದೆ.

ಇದನ್ನು ಮರಣದಂಡನೆಗೆ ಪರಿವರ್ತಿಸಬೇಕು ಎನ್ನುವುದು ಸರ್ಕಾರದ ವಾದ. ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಮೂರ್ತಿ ಎನ್. ಆನಂದ ನೇತೃತ್ವದ ವಿಭಾಗೀಯ ಪೀಠ ಶಿವಕುಮಾರ್ ಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ. ತಾನು ನಿರಪರಾಧಿಯಾಗಿದ್ದು ಶಿಕ್ಷೆಯಿಂದ ಖುಲಾಸೆಗೊಳಿಸುವಂತೆ ಕೋರಿ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯೂ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ.

English summary
The state government has filed an appeal before the high court contending that driver Shiva Kumar, convicted in the gruesome murder case of BPO employee Pratibha Srikanthamurthy, be executed. The appeal filed on Thursday (July 21) contended that the sentence awarded in the case by the 11th Fast Track Court was very less for a heinous crime like kidnap, rape and murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X