ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದಿನಿಂದ ಇಂದಿನವರೆಗೂ ಭೀಕರ ಬಾಂಬ್ ಸ್ಫೋಟ ಪಟ್ಟಿ

By Mahesh
|
Google Oneindia Kannada News

ಮುಂಬೈ ಜು 14: 26/11 ಬಾಂಬ್ ದಾಳಿ ಪ್ರಮುಖ ಆರೋಪಿ ಉಗ್ರ ಅಜ್ಮಲ್ ಕಸಬ್ ಹುಟ್ಟುಹಬ್ಬದಂದು ಮುಂಬೈನ ಮೂರು ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವಂತೆ ಮಾಡಿ, ಕಸಬ್ ಗೆ ಬರ್ಥಡೇ ತೋಫಾ ನೀಡಲಾಗಿದೆ. ದಾವೂದ್ ಇಬ್ರಾಹಿಂ ಬಣ 1993ರಲ್ಲಿ 13 ಬಾಂಬ್ ಸ್ಫೋಟಗಳು ಸಂಭವಿಸಿತ್ತು. ಸುಮಾರು 250 ಜನರನ್ನು ಬಲಿ ತೆಗೆದುಕೊಂಡು 700 ಜನರನ್ನು ಗಾಯಗೊಳಿಸಿದಾಗ ಉಂಟಾಗಿದ್ದ ತಲ್ಲಣ ಇನ್ನೂ ನಿಂತಿಲ್ಲ.

2005 ರಿಂದ 2010 ರ ಕಾಲಾವಧಿಯಲ್ಲಿ ನಡೆದ ಉಗ್ರರ ಬಾಂಬ್ ದಾಳಿಯ ಕಾಲನುಕ್ರಮ ಪಟ್ಟಿಯನ್ನು ಗಮನಿಸಿದರೆ, ನವ ದೆಹಲಿ, ಮುಂಬೈ ಪ್ರಮುಖ ಟಾರ್ಗೆಟ್ ಗಳಾಗಿದ್ದು, ನಂತರದ ಸ್ಥಾನದಲ್ಲಿ ಜೈಪುರ, ಅಹಮದಾಬಾದ್, ಬೆಂಗಳೂರು ಮುಂತಾದ ನಗರಗಳು ಬಂದು ನಿಲ್ಲುತ್ತವೆ.

* ವಾರಣಾಸಿ, ಡಿ.7, 2010: ಎರಡು ವರ್ಷದ ಹುಡುಗಿ ಸಾವು ಹಾಗೂ 25 ಜನರಿಗೆ ಗಾಯ. ಗಂಗಾ ನದಿ ತಟದ ಶಿಟ್ಲಾ ಘಾಟ್ ಹಾಗೂ ದಶಾಶ್ವಮೇಧ್ ನಡುವೆ ಸಂಭವಿಸಿತ್ತು.
* ಪುಣೆ ಫೆ.13, 2010: 17 ಜನರ ಸಾವು ಹಾಗೂ 60 ಜನರಿಗೆ ಗಾಯ. ನಗರದ ಪ್ರಸಿದ್ಧ ಜನನಿಬಿಡ ಜರ್ಮನ್ ಬೇಕರಿ ಟಾರ್ಗೆಟ್.
* ಮುಂಬೈ, ನ.26, 2008: 166 ಜನರ ಭೀಕರ ಸಾವು, ಸಿಎಸ್ ಟಿ ರೈಲ್ವೇ ನಿಲ್ದಾಣ ಹಾಗೂ ಪ್ರಮುಖ ಸ್ಟಾರ್ ಹೋಟೆಲ್ ಗಳಾದ ಒಬೆರಾಯ್ ಮತ್ತು ತಾಜ್ ಮೇಲೆ ಉಗ್ರರದಾಳಿ. 26/11 ದುರ್ಘಟನೆ ಎಂದೇ ಕುಖ್ಯಾತಿ. ಅಜ್ಮಲ್ ಕಸಬ್(ಹುಟ್ಟಿದ ದಿನಾಂಕ ಜುಲೈ 13, 1987) ಇದರ ಪ್ರಮುಖ ರುವಾರಿ.
* ಅಸ್ಸಾಂ, ಅ.30 2008: 77ಕ್ಕೂ ಅಧಿಕ ಜನ ಸಾವು ಹಾಗೂ 100ಕ್ಕೂ ಹೆಚ್ಚು ಜನರಿಗೆ ಗಾಯ. ಸುಮಾರು 18 ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು.
* ಇಂಫಾಲ ಅ.21, 2008: 17 ಜನರ ಸಾವು, ಮಣಿಪುರದ ಪೊಲೀಸ್ ಕಮಾಂಡೋ ಕಾಂಪ್ಲೆಕ್ಸ್ ಮೇಲೆ ದಾಳಿ.
* ಮಲೇಗಾಂವ್, ಮಹಾರಾಷ್ಟ್ರ ಸೆ29, 2008: 5 ಜನರ ಸಾವು, ಮಾರುಕಟ್ಟೆ ಪ್ರದೇಶದಲ್ಲಿ ಮೋಟರ್ ಬೈಕಿನಲ್ಲಿದ್ದ ಬಾಂಬ್ ಸ್ಫೋಟ.
* ಮೊದಸಾ, ಗುಜರಾತ್, ಸೆ.29, 2008: 3 ಜನರ ಸಾವು, ಹಲವರಿಗೆ ಗಾಯ. ಕಡಿಮೆ ಸಾಮರ್ಥ್ಯದ ಬಾಂಬ್ ಮಸೀದಿ ಬಳಿ ಸ್ಫೋಟ.
* ನವದೆಹಲಿ, ಸೆ.27, 2008: 3 ಜನರ ಸಾವು, ಮೆಹ್ರೂಲಿಯ ಮಾರುಕಟ್ಟೆ ಪ್ರದೇಶದಲ್ಲಿ ನಾಡಬಾಂಬ್ ಎಸೆತದಿಂದ ಸ್ಫೋಟ.

ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|

* ನವದೆಹಲಿ, ಸೆ.13, 2008: ಆರು ಕಡೆ ಸ್ಫೋಟದಲ್ಲಿ ಸುಮಾರು 26 ಜನರ ಸಾವು,
* ಅಹಮದಾಬಾದ್, ಜು.26, 2008: 57 ಜನರ ಸಾವು, ಎರಡು ಗಂಟೆಗಳಲ್ಲಿ ಸುಮಾರು 20ಕ್ಕೂ ಅಧಿಕ ಸಂಯೋಜಿತ ಬಾಂಬ್ ಗಲ ಸ್ಫೋಟ.
* ಬೆಂಗಳೂರು ಜು 25, 2008: ಒಬ್ಬನ ಸಾವು, ಹಲವರಿಗೆ ಗಾಯ, ಮೂರು ಕಡೆ ಸರಣಿ ಸ್ಫೋಟ.
* ಜೈಪುರ ಮೇ 13,2008: ಸರಣಿ ಸ್ಫೋಟಕ್ಕೆ 68 ಜನರ ಬಲಿ.
* ರಾಮ್ ಪುರ್ ಜನವರಿ 2008: ಸಿಆರ್ ಫಿಎಫ್ ಕ್ಯಾಂಪ್ ಮೇಲೆ ಉಗ್ರರ ಬಾಂಬ್ ದಾಳಿ, 8 ಜನ ಯೋಧರ ಸಾವು.
* ಅಜ್ಮೇರ್ , ಅಕ್ಟೋಬರ್ 2007: ರಂಜಾನ್ ಸಂದರ್ಭದಲ್ಲಿ ರಾಜಸ್ತಾನದ ಅಜ್ಮೇರ್ ಶರೀಫ್ ಮಸೀದಿಯಲ್ಲಿ ಸ್ಫೋಟ. ಇಬ್ಬರ ಸಾವು
* ಹೈದರಾಬಾದ್ ಅಗಸ್ಟ್ 2007: 30 ಜನರ ಸಾವು, 60 ಜನರಿಗೆ ಗಾಯ
* ಹೈದರಾಬಾದ್ ಮೇ 2007:ಮೆಕ್ಕಾ ಮಸೀದಿ ಬಳಿ ಸ್ಫೋಟ, 11 ಜನ ಸಾವು
* ಫೆ 19, 2007: ಭಾರತ ಹಾಗೂ ಪಾಕಿಸ್ತಾನ ನಡುವಿನ ರೈಲಿನಲ್ಲಿ ಎರಡು ಬಾಂಬ್ ಸ್ಫೋಟ, ಬರ್ನಿಂಗ್ ಟ್ರೈನ್ ನಲ್ಲಿ 66 ಜನರು ಸುಟ್ಟು ಭಸ್ಮ. ಸತ್ತವರಲ್ಲಿ ಪಾಕಿಸ್ತಾನಿಗಳೇ ಅಧಿಕ.
* ಮಲೇಗಾಂವ್ ಸೆ. 2006: ಅವಳಿ ಬಾಂಬ್ ಗಳ ಸ್ಫೋಟಕ್ಕೆ 30 ಜನ ಬಲಿ. 100 ಜನರಿಗೆ ಗಾಯ. ಮಸೀದಿ ಟಾರ್ಗೆಟ್.
* ಮುಂಬೈ ಜು.2006: ಮುಂಬೈ ರೈಲಿನ ಮೇಲೆ ಉಗ್ರರ ಬಾಂಬ್ ದಾಳಿ 200 ಸಾವು, 700ಕ್ಕೂ ಅಧಿಕ ಜನರಿಗೆ ಗಾಯ
* ವಾರಣಾಸಿ ಮಾ.2006: ರೈಲಿನಲ್ಲಿ ಅವಳಿ ಬಾಂಬ್ ಸ್ಫೋಟ.30 ಜನ ಸಾವು
* ನವದೆಹಲಿ ಅಕ್ಟೋಬರ್ 2005: ದೀಪಾವಳಿ ಹಿಂದಿನ ದಿನ ದೆಹಲಿಯ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ, 62 ಜನರ ಸಾವು, ನೂರಾರು ಜನರಿಗೆ ಗಾಯ.

;
English summary
Here is list of major bomb blasts in Chronological order that occurred during 2005-2010 the country. New Delhi and Mumbai being the main target of terror groups. Pune, Ahmedabad, Malegaon, Bangalore, Jaipur also listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X