ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಕುಶಿಮಾ ಅಣು ಸ್ಥಾವರ ಧ್ವಂಸ, ಪರಿಸ್ಥಿತಿ ಗಂಭೀರ

By Mahesh
|
Google Oneindia Kannada News

Japan Tsunami 2011
ಟೊಕಿಯೋ, ಮಾ,12: ಕರಾಳ ಶುಕ್ರವಾರ ಅಪ್ಪಳಿಸಿರುವ ಸುನಾಮಿ ಒನಗಾವಾದಲ್ಲಿನ ಅಣುಸ್ಥಾವರ ಧ್ವಂಸಗೊಳಿಸಿದ ಬಳಿಕ ಜ ಪಾನಿನಲ್ಲಿ ಅಣುಶಕ್ತಿ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಇಂದು ಫುಕುಶಿಮಾದಲ್ಲಿರುವ ಮತ್ತೊಂದು ಪರಮಾಣು ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಒನಗಾವಾದಲ್ಲಿ ನಾಲ್ಕು ಸ್ಥಾವರಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಗಿತಗೊಳಿಸಲಾಗಿದೆ. ಅಣುಶಕ್ತಿ ಉತ್ಪಾದನಾ ಕೇಂದ್ರದ 11 ಸ್ಥಾವರಗಳನ್ನು ಸ್ವಯಂನಿಯಂತ್ರಣದಲ್ಲಿ ಮುಚ್ಚಲಾಗಿದೆ. ಆದರೆ, ಫುಕುಶಿಮಾ ಸುತ್ತಮುತ್ತಲಿನ ಪ್ರದೇಶದ ಸೇರಿದಂತೆ ಅನೇಕ ಕಡೆ ಸುರಕ್ಷಿತ ಸ್ಥಳ ಹುಡುಕಿಕೊಂಡು ಜನರು ಅಲೆದಾಡುತ್ತಿರುವ ದೃಶ್ಯ ಮನಕಲಕುವಂತಿದೆ.

ಟೊಕಿಯೋದಿಂದ 150 ಮೈಲಿ ದೂರದಲ್ಲಿರುವ ಫುಕಶಿಮಾದಿಂದ ಆರು ಮೈಲಿ ವಿಸ್ತೀರ್ಣದಲ್ಲಿರುವ ಸುಮಾರು 50 ಸಾವಿರ ಜನಕ್ಕೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚನೆ ನೀಡಲಾಗಿದೆ. ಪರಮಾಣು ಸ್ಥಾವರದಲ್ಲಿ ಭಾರಿ ಸದ್ದು ಕೇಳಿ ಬಂದರೂ ರಿಯಾಕ್ಟರ್ ಗಳಿಗೆ ಬೆಂಕಿ ಬಿದ್ದಿಲ್ಲ, ಅಣು ವಿಕಿರಣ ಸೋರಿಕೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ಜಪಾನ್ ನ ಪರಮಾಣು ಸುರಕ್ಷಿತ ಏಜೆನ್ಸಿ ಹೇಳಿದೆ.

ವಿಡಿಯೋಗಳು: ಸುನಾಮಿ ಅಲೆಗಳ ರೌದ್ರ ನರ್ತನ ಚಿತ್ರಗಳು | ಸುನಾಮಿ ಅಲೆಗಳ ದಾಳಿಗೆ ಕುಬ್ಜವಾದ ಜಪಾನ್

ಆದರೆ, ಪರಮಾಣು ಸ್ಥಾವರ ಸ್ಫೋಟದ ಪರಿಣಾಮ ಸೀಸೀಯಂ ಇಂಧನ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಪರಮಾಣು ಕೇಂದ್ರ ದೈಚಿ ಹಾಗೂ ದೈನಿ ಎಂಬ ಸ್ಥಾವರಗಳನ್ನು ಟೊಕಿಯೋದ ಎಲೆಕ್ಟ್ರಿಕ್ ಪವರ್ ನಿಯಂತ್ರಿಸುತ್ತಿತ್ತು. ಕೂಲಿಂಗ್ ವ್ಯವಸ್ಥೆ ಕೈಕೊಟ್ಟಿದ್ದರಿಂದ ಬಹಳಷ್ಟು ರಿಯಾಕ್ಟರ್ ಗಳ ಕಾರ್ಯವನ್ನು ಈ ಮೊದಲೇ ನಿಲ್ಲಿಸಲಾಗಿತ್ತು. ಅಣುಸ್ಥಾವರ ಸ್ಫೋಟದ ಪರಿಣಾಮ ಅನೇಕ ಮಂದಿ ಗಾಯಗೊಂಡಿದ್ದಾರೆ.

ಅಧಿಕೃತ ಮಾಹಿತಿಯಂತೆ ಸುಮಾರು 1,200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನರುಳ್ಳ ರಕ್ಷಣಾ ಪಡೆ ಜನರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ರಷ್ಯಾ, ತೈವಾನ್, ಫಿಲಪ್ಪೀನ್ಸ್, ಇಂಡೋನೇಷ್ಯಾ, ಪಪುವಾ ನ್ಯೂ ಗಿನಿ, ಫಿಜಿ, ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಕೋಸ್ಟರಿಕಾ ಸೇರಿದಂತೆ 20 ದೇಶಗಳು ಸುನಾಮಿ ಭೀತಿಯನ್ನು ಎದುರಿಸುತ್ತಿವೆ.

English summary
Japan Tsunami 2011: A powerful explosion has occurred in the Fukushima nuclear plant in Japan. The plant had undergone damages following the deadly earthquake that struck Japan a day back. Japan's Nuclear Safety Agency said no signs of radioactivity to leakage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X