ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಬಾಂಧವ್ಯ ಬೆಸೆಯಲು ಮಹಾ ಸಿಎಂ ಯತ್ನ

By Mahesh
|
Google Oneindia Kannada News

Maha CM Prithviraj wishes to VKS, Belagavi
ಬೆಳಗಾವಿ, ಫೆ.21 : ಬೆಳಗಾವಿ ಗಡಿ ವಿವಾದದಿಂದಾಗಿ ಕನ್ನಡ ಮರಾಠಿಗರ ಭಾಷಾ ವೈಷಮ್ಯ ನಿವಾರಿಸಲು ಮತ್ತು ಭಾಷಾ ಬಾಂಧವ್ಯ ಬೆಸೆಯಲು ಕರ್ನಾಟಕ ಸರ್ಕಾರದೊಂದಿಗಿನ ಮಾತುಕತೆಗೆ ಸಿದ್ಧವಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದಲ್ಲಿ ಏರ್ಪಡಿಸಲಾಗಿರುವ ಜೋಡೆತ್ತಿನ ಶರ್ಯತ್ತು ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಅವರು ಮಾತನಾಡುತ್ತಾ, ಕನ್ನಡ ಮರಾಠಿಗರ ಬಾಂಧವ್ಯ ಬಗ್ಗೆ ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಲಾಲ್‌ಕೃಷ್ಣ ಆಡ್ವಾಣಿ ಅವರು ಬೆಳಗಾವಿಯ ಗಡಿ ವಿವಾದವನ್ನು ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಸುಪ್ರೀಂಕೋರ್ಟ್ ಹೊರಗೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ನೀಡಿದ್ದ ಸಲಹೆ ಸ್ವೀಕರಿಸಿದ್ದು, ಮಾತುಕತೆಗೆ ಸಿದ್ದರಾಗಿದ್ದೇವೆ ಎಂದು ಪೃಥ್ವಿರಾಜ್ ಹೇಳಿದರು.

ವಿಶ್ವಕನ್ನಡ ಸಮ್ಮೇಳನಕ್ಕೆ ಶುಭವಾಗಲಿ: ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಆಶಯ ವ್ಯಕ್ತಪಡಿಸಿದರು. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಕನ್ನಡಿಗರಿಗೆ ಶುಭಾಶಯ ಕೋರಿದರು. ಅಲ್ಲಿಯೇ ಇದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಕೆಲ ಸದಸ್ಯರಿಗೆ ಇರಿಸು ಮುರಿಸುಉಂಟುಮಾಡಿತು.

ಬೆಳಗಾವಿ ಗಡಿ ವಿವಾದ ಈಗಾಗಲೇ ಸುಪ್ರಿಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಆ ಬಗ್ಗೆ ತಾವು ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದರು. ತಾವು ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೂ ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಾನಮಾನ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, ಅದೇ ರೀತಿಯ ಸಂವಿಧಾನ ಬದ್ಧವಾಗಿ ಭಾಷಾ ಅಲ್ಪಸಂಖ್ಯಾತರಿಗೂ ದೊರೆಯಬೇಕಿರುವ ಸವಲತ್ತುಗಳನ್ನು ಕರ್ನಾಟಕ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.

English summary
Maharashtra CM Prithviraj Chavan has offered to hold bilateral talks with Karnataka. Belagavi border disputes and review of the recent Krishna Water Disputes Tribunal verdict and be discussed. He also wished for upcoming Vishwa Kannada Sammelana at Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X