ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ವಾರದ ವಹಿವಾಟು 12 ಕೋಟಿ

By Mahesh
|
Google Oneindia Kannada News

Valentine's Week Assocham report
ಪ್ರೇಮಿಗಳ ದಿನ ಆಚರಣೆಯ ಹಿನ್ನೆಲೆಯಲ್ಲಿ ಫೆ.7ರಿಂದ ಫೆ.14 ರ ವರೆಗೆ ಒಂದು ವಾರ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆದಿದೆ. ಸುಮಾರು ರೂ 12 ಸಾವಿರ ಕೋಟಿಗಳಷ್ಟು ವ್ಯಾಪಾರ ನಡೆದಿರುವ ಸಾಧ್ಯತೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ರಸ್ತೆ ಬದಿಯಲ್ಲಿ ಹೂ ಮಾರುವ ವ್ಯಾಪಾರಿಯಿಂದ ಹಿಡಿದು, ದೂರವಾಣಿ ಕಂಪೆನಿಗಳು, ಹೋಟೆಲ್, ರೆಸ್ಟೋರೆಂಟ್‌ಗಳು, ಉಡುಗೊರೆ ಮಳಿಗೆಗಳು, ಚಿನ್ನಾಭರಣ ಅಂಗಡಿಗಳು, ಪುಷ್ಪೋದ್ಯಮಿಗಳು ಎಲ್ಲರಿಗೂ ಪ್ರೇಮಿಗಳ ವಾರ ಭರ್ಜರಿ ವ್ಯಾಪಾರವನ್ನು ಒದಗಿಸಿದೆ. ಮುದ್ದಾದ ಗೊಂಬೆಗಳು, ಚಿನ್ನ, ವಜ್ರಾಭರಣಗಳು, ಮೊಬೈಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹೀಗೆ ಕಣ್ಣಿಗೆ ಕಂಡಿದ್ದೆಲ್ಲವೂ ಈ ದಿನ ಗಿಫ್ಟ್ ಪ್ಯಾಕ್ ಆಗುತ್ತಿದೆ.

ದೇಶದ 10 ಪ್ರಮುಖ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, ಯುವ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ ಎಂಬುದು ದೃಢಪಟ್ಟಿದೆ. ಪ್ರಿಯತಮೆಯನ್ನು ಮೆಚ್ಚಿಸಲು ದುಬಾರಿ ಉಡುಗೊರೆಗಳನ್ನು ನೀಡುವುದರ ಮೂಲಕ ಈ ದಿನವನ್ನು ನೆನಪಿನಲ್ಲಿ ಸದಾ ಉಳಿಯುವಂತೆ ನೋಡಿಕೊಳ್ಳುತ್ತಾರೆ.

ಫೆಬ್ರವರಿ 7 ರಂದು ರೋಸ್ ಡೆ, ಫೆ.8 ರಂದು ಪ್ರಪೊಸಲ್ ಡೇ, ಫೆ. 9ರಂದು ಚಾಕ್ಲೇಟ್ ಡೇ, ಫೆ.10ರಂದು ಟೆಡ್ಡಿ ಡೇ, ಫೆ.11 ರಂದು ಪ್ರಾಮೀಸ್ ಡೇ, ಫೆ.12ರಂದು ಕಿಸ್ ಡೇ, ಫೆ.13ರಂದು ಹಗ್ ಡೇ, ಕೊನೆ ಹಾಗೂ ಮುಖ್ಯವಾಗಿ ಫೆ.14ರಂದು ವ್ಯಾಲಂಟೈನ್ಸ್ ಡೇ ದಿನ ವ್ಯಾಪಾರ ಜೋರಾಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನರ ಆರ್ಥಿಕ ಮಟ್ಟ ಹೆಚ್ಚಿರುವುದರಿಂದ ಶೇ 120ರಷ್ಟು ವ್ಯಾಪಾರ ಹೆಚ್ಚಲಿದೆ.

ಸಹಜತೆಗೆ ಕೃತಕತೆ ಪೆಟ್ಟು: ಚೀನಾದಿಂದ ಗರಿಗರಿಯಾದ ಕೃತಕ ಗುಲಾಬಿ ಭಾರತಕ್ಕೆ ಬಂದಿಳಿದಿವೆ. ಥಾಯ್ಲೆಂಡ್‌ನಿಂದ ಲಿಲ್ಲಿ ಹೂವು ಸೇರಿದಂತೆ ಅನೇಕ ವೈವಿಧ್ಯಮಯ ಪುಷ್ಪಗಳು ಮಾರುಕಟ್ಟೆಗೆ ಬಂದಿವೆ. ಗುಲಾಬಿ ರಫ್ತು ವಹಿವಾಟು 1.70 ಕೋಟಿಯನ್ನು ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. ಆದರೆ, ಕೃತಕ ಗುಲಾಬಿ ಆಮದು ಇಲ್ಲಿ ಬೆಳೆದ ಗುಲಾಬಿಗೆ ಪೈಪೋಟಿ ನೀಡತೊಡಗಿರುವುದು ಶುಭ ಸೂಚನೆ ಎನ್ನುವಂತಿಲ್ಲ. ಯಾವುದೇ ಗಿಫ್ಟ್ ಇದ್ದರೂ, ಜೊತೆಗೆ ಕೆಂಪು ಗುಲಾಬಿ ಕಡ್ಡಾಯವಾಗಿ ವ್ಯಾಪಾರವಾಗಿದೆ.

English summary
According to Associated Chambers of Commerce and Industry of India (Assocham),Valentine's Week has brought business around 12,000 Crore. Study included road side Florist, telecom operator, restaurant, gift shop earnings come from the staple greeting cards, followed by flowers, chocolates, toys, and diamond rings, bracelets, electronic gadgets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X