ಜು.31ರಂದು ಹುಬ್ಬಳ್ಳಿಯಲ್ಲಿ 'ಕವಲು ಹೇಗನಿಸಿತು'?

 
Share this on your social network:
   Facebook Twitter Google+ Comments Mail

SL Bhyarappa
ಹುಬ್ಬಳ್ಳಿ, ಜು. 29 : 'ಕವಲು ಹೇಗನಿಸಿತು?' ವಿಚಾರ ಸಂಕಿರಣ ಹಾಗೂ ಕೃತಿಕಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಾಹಿತ್ಯ ಪ್ರಕಾಶನದ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಗೃಹದಲ್ಲಿ ಜುಲೈ 31 ರಂದು ಶನಿವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ. ಜೊತೆಗೆ ಆ. 1 ರಂದು ಶಿರಸಿಯಲ್ಲಿ ಮತ್ತು ಆ.8 ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣಗಳು ನಡೆಯಲಿದೆ.

ಹೆಸರಾಂತ ಕಾದಂಬರಿ ಎಸ್ ಎಲ್ ಭೈರಪ್ಪಅವರ ಕವಲು ಕಾದಂಬರಿ ಬಿಡುಗಡೆಯಾಗಿ ಕೇವಲ 20 ದಿನಗಳಲ್ಲಿ ಆರನೇ ಮುದ್ರಣ ಕಂಡಿದೆ. ಹಾಗಾದರೆ ಅದು ಕಾದಂಬರಿ ಯಶಸ್ಸು ಅಲ್ಲವೇ? ಇಷ್ಟಾಗಿಯೂ ಭೈರಪ್ಪನವರು ತಮ್ಮ ಕಾದಂಬರಿಗಳ ಮೇಲೆ ಸರಿಯಾದ ವಿಮರ್ಶೆ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿರುವುದೇಕೆ? ಕಾದಂಬರಿಯ ಯಶಸ್ವಿನ ಮಾನದಂಡ ಯಾವುದು ? ಅದರ ಮಾರಾಟವೋ, ಓದುಗರಲ್ಲಿ ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿನ ಮೇಲೆ ನಿಲ್ಲುವ ಭಾವುಕ ಕ್ಷಣಗಳೋ, ವಿಮರ್ಶಕರು ಅಳೆದು ತೂಗಿ ಬರೆದ ಮೌಲ್ಯಮಾಪನದ ಮಾತುಗಳೋ? ಹೀಗೆ ಮುಂದುವರಿದಿವೆ ಭೈರಪ್ಪನವರ ಮೇಲೆ ಟೀಕೆಗಳ ವಾಗ್ಬಾಣಗಳು.

ಕವಲು ಕಾದಂಬರಿಗೆ ಉತ್ತಮ ವಿಮರ್ಶೆ ಬಂದಿಲ್ಲ ಎಂದು ಭೈರಪ್ಪನವರೇ ಹೇಳಿದ್ದಾರೆ. ರಾಜ್ಯದ 3 ಕಡೆಗಳಲ್ಲಿ ಏರ್ಪಡಿಸಲಾಗಿರುವ ಕವಲು ಹೇಗನಿಸಿತು ವಿಚಾರಣ ಸಂಕಿರಣ ಸಾಹಿತ್ಯ ಆಸಕ್ತರಿಗೆ ತೀವ್ರ ಕುತೂಹಲವನ್ನಂತೂ ಕೆರಳಿಸಿದೆ. ಬನ್ನಿ ನೀವೂ ಪಾಲ್ಗೊಳ್ಳಿ. ಭೈರಪ್ಪನವರೊಂದಿಗೆ ಸಂವಾದ ನಡೆಸಿ.

Please Wait while comments are loading...

Videos