ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಂಪರ್ಡ್ ಗೋಲು: ಫೀಫಾ ಕ್ಷಮೆಯಾಚನೆ

By Mahesh
|
Google Oneindia Kannada News

FIFA President finally apologises for Lampard 'goal’
ಜೋಹಾನ್ಸ್ ಬರ್ಗ್, ಜೂ.29 : ಜರ್ಮನಿಯ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡಿನ ಫ್ರಾಂಕ್ ಲ್ಯಾಂಪರ್ಡ್ ಹೊಡೆದ ಗೋಲನ್ನು ಗೋಲಲ್ಲವೆಂದು ನಿರಾಕರಿಸಿದ್ದಕ್ಕಾಗಿ ಫೀಫಾ ಅಧ್ಯಕ್ಷ ಸೆಪ್ ಬ್ಲಾಟರ್ ಅವರು ಫುಟ್ಬಾಲ್ ಅಸೋಸಿಯೇಷನ್ ಕ್ಷಮೆ ಯಾಚಿಸಿದ್ದಾರೆ. ಆ ಪಂದ್ಯದಲ್ಲಿ ಇಂಗ್ಲೆಂಡ್ 1-4 ಗೋಲುಗಳಿಂದ ಸೋತಿತ್ತು.

ಫುಟ್ಬಾಲ್ ನಲ್ಲಿ ಕ್ರಿಕೆಟ್, ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ಬಳಸಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿಲ್ಲ. ಇದಕ್ಕಾಗಿ ಎಲ್ಲ ವಲಯಗಳಿಂದ ಫೀಫಾ ಭಾರೀ ಟೀಕೆಗೆ ಒಳಗಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂದಿತು ಎಂಬಂತೆ, ಗೋಲ್ ಲೈನ್ ತಂತ್ರಜ್ಞಾನದ ಬಳಕೆಗೆ ಫೀಫಾ ಯೋಚಿಸುತ್ತಿದೆ.

ಭಾನುವಾರ ನಡೆದ ಅರ್ಜೆಂಟೀನಾ ಮೆಕ್ಸಿಕೋ ಪಂದ್ಯದಲ್ಲಿ ಟೆವೆಜ್ ಹೊಡೆದ ಆಫ್ ಸೈಡ್ ಗೋಲು ಕೂಡಾ ಪ್ರಮಾದ ಎಂದು ಫೀಫಾ ಒಪ್ಪಿಕೊಂಡಿದೆ. ಮಹತ್ವದ ಪಂದ್ಯಗಳಲ್ಲಿ ಈ ರೀತಿ ಪ್ರಮಾದಗಳಾಗಿರುವುದಕ್ಕೆ ಸಾಕಷ್ಟು ಟೀಕೆಗೆ ಒಳಗಾಗಿರುವ ಫೀಫಾ ಅಂತೂ ಇಂತೂ ತಂತ್ರಜ್ಞಾನ ಬಳಕೆಗೆ ಮನಸ್ಸು ಮಾಡಿದೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಜುಲೈ ನಲ್ಲಿ ಎಫ್ ಎ(FA) ಬೋರ್ಡ್ ಮೀಟಿಂಗ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು. ವೈಯಕ್ತಿಕಾಗಿ ಹೇಳುವುದಾದರೆ ರೆಫ್ರಿಗಳು ಕೂಡಾ ಮನುಷ್ಯರು ಎಂಬುದನ್ನು ಮರೆಯಬಾರದು. ಇಂಗ್ಲೆಂಡ್ ಹಾಗೂ ಮೆಕ್ಸಿಕೋ ತಂಡದವರೊಡನೆ ಮಾತುಕತೆ ನಡೆಸಿ ರೆಫ್ರಿ ದೋಷಕ್ಕೆ ಕ್ಷಮೆ ಯಾಚಿಸಿದ್ದೇನೆ ಎಂದು ಬ್ಲಾಟ್ಟರ್ ಹೇಳಿದರು.

ಫೀಫಾಗೆ ಯಾಕೆ ಮಡಿವಂತಿಕೆ?: ಕ್ರಿಕೆಟ್ ನಲ್ಲಿ ಥರ್ಡ್ ಅಂಪೈರ್, ಬೇಸ್ ಬಾಲ್, ಟೆನ್ನಿಸ್ ನಲ್ಲಿ ಹಾಕ್ ಐ ಇದೆ ಆದರೆ ಫುಟ್ಬಾಲ್ ನಲ್ಲಿ ವಿಡಿಯೋ ಟೆಕ್ನಾಲಜಿ ಬಳಸಲು ಫೀಫಾ ಮೀನಮೇಷ ಎಣಿಸುತ್ತಿದೆ.

ಅಡಿಡಾಸ್ ಅಧಿಕೃತವಾಗಿ ಚೆಂಡು ತಯಾರಿಕೆ ಮಾಡುತ್ತಿದ್ದು, ಚೆಂಡಲ್ಲಿ ಕೆಮೆರಾ ಅಳವಡಿಕೆ, ಗೋಲ್ ಪೋಸ್ಟ್ ನ ಇಬ್ಬದಿಯಲ್ಲಿ ಕೆಮೆರಾ ಅಳವಡಿಸಲು ಚಿಂತನೆ ನಡೆಸಲಾಗಿದ್ದರೂ ಯಾವುದೂ ಕಾರ್ಯಗತವಾಗಿಲ್ಲ. ವಿಡಿಯೋ ಟೆಕ್ನಾಲಜಿ ಬಳಸಿ ಫೌಲ್ ಬಗ್ಗೆ ತಿಳಿಯುವುದರಿಂದ ಸಮಯ ವ್ಯರ್ಥವಾಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಫೀಫಾ ಇನ್ನಾದರೂ ಈ ಬಗ್ಗೆ ಗಮನ ಹರಿಸಲಿ. ನಾಲ್ಕನೆ ರೆಫ್ರಿ ಇದ್ದು ಪ್ರಯೋಜನವಿಲ್ಲದಂತಾಗುತ್ತದೆ ಎಂದು ಫುಟ್ಬಾಲ್ ವಿಶ್ಲೇಷಕ ಜೆರ್ರಿ ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಇನ್ನುಮುಂದಾದರೂ ರೆಫ್ರಿ ನಿರ್ಣಯದಲ್ಲಿ ಸಂಶಯ ಕಂಡು ಬಂದರೆ ವಿಡಿಯೋ ತಂತ್ರಜ್ಞಾನದ ಮೊರೆ ಹೋಗುವುದು ಒಳಿತು. ಆದರೆ, ಫುಟ್ಬಾಲ್ ಮೈದಾನದ ಎಲ್ಲೆಡೆ ಕೆಮೆರಾ ಅಳವಡಿಸಿ, ವಿಡಿಯೋ ಗೇಮ್ ನೋಡಿದ ಅನುಭವ ತರುವುದು ಬೇಡ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X