ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಬ್ಯಾಂಕ್ ಆಫ್ ರಾಜಸ್ಥಾನ ವಿಲೀನ

By Mahesh
|
Google Oneindia Kannada News

Bor-ICICI Merger
ಮುಂಬೈ, ಮೇ.20:ಬ್ಯಾಂಕ್ ಆಫ್ ರಾಜಾಸ್ಥಾನ ದೇಶದ ಅತೀ ದೊಡ್ಡ ಖಾಸಗೀ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ನಲ್ಲಿ ವಿಲೀನಗೊಳ್ಳಲು ಸಿದ್ಧವಾಗಿದೆ. ಎರಡೂ ಬ್ಯಾಂಕ್ ಗಳ ಆಡಳಿತ ಮಂಡಳಿಗಳು ಈ ವಿಲೀನಕ್ಕೆ ಒಪ್ಪಿಗೆ ಸೂಚಿಸಿದ್ದು 118 ಬ್ಯಾಂಕ್ ಆಫ್ ರಾಜಾಸ್ಥಾನದ ಷೇರುಗಳಿಗೆ ಪ್ರತಿಯಾಗಿ ಐಸಿಐಸಿಐ ಬ್ಯಾಂಕ್ 25 ಷೇರುಗಳನ್ನು ನೀಡಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಿಪಿ ಪದ್ಮನಾಭನ್ ಅವರು ಈ ವಿಲೀನಕ್ಕೆ ಎರಡೂ ಬ್ಯಾಂಕುಗಳು ಶೀಘ್ರದಲ್ಲಿ ಸೆಬಿ ಮತ್ತು ರಿಸರ್ವ್ ಬ್ಯಾಂಕಿನ ಅನುಮತಿಗಾಗಿ ಅರ್ಜಿ ಸಲ್ಲಿಸಲಿವೆ ಎಂದು ಹೇಳಿದರು. ಬ್ಯಾಂಕ್ ಆಫ್ ರಾಜಾಸ್ಥಾನದ ಮಾರುಕಟ್ಟೆ ಬಂಡವಾಳ 1600 ಕೋಟಿ ರುಪಾಯಿಗಳಾಗಿದ್ದು ಡಿಸೆಂಬರ್ 2009ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 344 ಕೋಟಿ ರುಪಾಯಿಗಳ ಆದಾಯ ಹಾಗೂ 44.7 ಕೋಟಿ ರುಪಾಯಿಗಳ ನಿವ್ವಳ ನಷ್ಟ ಅನುಭವಿಸಿದೆ.

ಐಸಿಐಸಿಐ ಬ್ಯಾಂಕಿನ ಮಾರುಕಟ್ಟೆ ಬಂಡವಾಳ 99,000 ಕೋಟಿ ರುಪಾಯಿಗಳಾಗಿದ್ದು ಇದು ಬ್ಯಾಂಕ್ ಆಫ್ ರಾಜಾಸ್ಥಾನಕ್ಕಿಂತ 25 ಪಟ್ಟು ದೊಡ್ಡದಾಗಿದೆ. ಬ್ಯಾಂಕ್ ಆಫ್ ರಾಜಾಸ್ಥಾನ 463 ಶಾಖೆಗಳನ್ನು ಹೊಂದಿದ್ದು ಇದು ಐಸಿಐಸಿಐನ ಶಾಖೆಗಳ ನಾಲ್ಕನೇ ಒಂದರಷ್ಟಾಗಿದೆ. ಬ್ಯಾಂಕ್ ಆಫ್ ರಾಜಾಸ್ಥಾನ ಉತ್ತರ ಭಾರತದಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದರಿಂದ ಐಸಿಐಸಿಐಗೆ ಈ ಪ್ರದೇಶಗಳಲ್ಲಿ ಹೆಚ್ಚಿನ ವಹಿವಾಟು ಆಗಲಿದೆ ಎನ್ನಲಾಗಿದೆ.

ಐಸಿಐಸಿಐ ಬ್ಯಾಂಕ್ ಬ್ಯಾಂಕ್ ಆಫ್ ರಾಜಾಸ್ಥಾನದ ಮುಂಬೈ ಷೇರು ಪೇಟೆ(ಬಿಎಸ್ ಇ)ಯ ಮುಕ್ತಾಯ ಬೆಲೆ (ರು.99.50೦)ಗಿಂತ ಶೇ.90 ರಷ್ಟು ಪ್ರೀಮಿಯಂ ದರ ನೀಡಲಿದೆ . ಬ್ಯಾಂಕ್ ಆಫ್ ರಾಜಾಸ್ಥಾನದ ಶೇರುಗಳು ಮಂಗಳವಾರ ಶೇ.20ಏರಿಕೆ ದಾಖಲಿಸಿ 52 ವಾರಗಳ ಗರಿಷ್ಟ ಮಟ್ಟ ತಲುಪಿದ್ದರೆ ಐಸಿಐಸಿಐ ಶೇರು ಶೇ 1.45 ರಷ್ಟು ಕುಸಿತ ದಾಖಲಿಸಿದೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X