ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈದಿಗಳಿಗೆ ಬ್ಯಾಂಕ್‌ನ ಕೆಲಸ ಹೊರಗುತ್ತಿಗೆ

By Mahesh
|
Google Oneindia Kannada News

Radiant Call Centre to hire Indian Prisoners
ಹೈದರಾಬಾದ್, ಮೇ.14:ಹೊರಗುತ್ತಿಗೆ ಕಂಪೆನಿ ರೇಡಿಯಂಟ್ ಇನ್ಫೋ ಸಿಸ್ಟಮ್ಸ್ ಕಾರಾಗೃಹದಲ್ಲಿರುವ ಕೈದಿಗಳಿಗೆ ಬ್ಯಾಂಕ್ ನ ಹೊರಗುತ್ತಿಗೆ ಕೆಲಸ ನೀಡಲು ಮುಂದಾಗಿದೆ ಹೈದರಾಬಾದ್ ನ ಚೆರ್ಲಪಲ್ಲಿಯ ಕಾರಾಗೃಹದ ಕೈದಿಗಳಿಂದ ಬ್ಯಾಂಕ್ ನ ಕೆಲಸ ಮಾಡಿಸಲು ಮುಂದಾಗಿದೆ. ಲಂಡನ್ ನ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಹಾಗೂ ಸ್ಪೆಂಸರ್ಸ್ ಮುಂತಾದ ಸಂಸ್ಥೆಗಳಿಗೆ ರೇಡಿಯಂಟ್ ಇನ್ಫೋ ಸಿಸ್ಟಮ್ಸ್ ಸೇವೆ ಒದಗಿಸುತ್ತಿದೆ.

ಈ ಕಾರಾಗೃಹದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮತ್ತು ವಿಚಾರಣಾಧೀನ 250 ಕೈದಿಗಳಿಗೆ ಕಂಪ್ಯೂಟರ್ ನ ತರಬೇತಿ ನೀಡಿ ಭಾರತೀಯ ಬ್ಯಾಂಕ್ ಹಾಗೂ ವಿಮಾ ಕಂಪೆನಿಗಳ ಕೆಲಸ ಮಾಡಿಸಲು ಕಂಪೆನಿ ಯೋಜನೆ ಹಾಕಿಕೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೊರಗುತ್ತಿಗೆ ಕಂಪೆನಿ ರೇಡಿಯಂಟ್ ಇನ್ಫೋ ಸಿಸ್ಟಮ್ಸ್ ನ ನಿರ್ದೇಶಕ ಸಿ ನಾರಾಯಣಾಚಾರಿಲು ಅವರು, ಚೆರ್ಲಪಲ್ಲಿ ಜೈಲಿನಲ್ಲಿರುವ 200 ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ಜ್ಞಾನವಿದೆ ಎಂದರು.

ಕಂಪೆನಿಯ ಈ ಕಾರ್ಯಕ್ಕೆ ಸಹಮತ ನೀಡಿರುವ ಜೈಲು ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಪಿ ನರಸಿಂಹ ರೆಡ್ಡಿ ಅವರು ನಂಬಲರ್ಹ ಕೈದಿಗಳಿಗೆ ಮಾತ್ರ ಹೊರಗುತ್ತಿಗೆ ಕೆಲಸ ವಹಿಸಲು ನಿರ್ಧರಿಸಲಾಗಿದ್ದು, ಬ್ಯಾಂಕ್ ನ ಗ್ರಾಹಕರೊಂದಿಗೆ ಮಾತನಾಡಲು ಅಥವಾ ದೂರವಾಣಿಯಲ್ಲಿ ಮಾತನಾಡಲು ಕೈದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈ ಪ್ರಸ್ತಾವನೆಯಲ್ಲಿ ಭದ್ರತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು ಈ ಹೊರಗುತ್ತಿಗೆಯಿಂದ ಕಂಪೆನಿಗಳಿಗೆ ಅಗ್ಗದ ದರದಲ್ಲಿ ಕೆಲಸಗಾರರು ಲಭ್ಯವಾದಂತಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X