ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆರೆಮನೆಯಲ್ಲಿ ಸುರತ ನ್ಯಾಯಸಮ್ಮತ

|
Google Oneindia Kannada News

Try to allow prisoners to have sex with wives: HC
ಮುಂಬೈ, ಜ. 15 : ಜೈಲಿನಲ್ಲಿರುವ ಕೈದಿಗಳಿಗೆ ತಿಂಗಳಲ್ಲಿ ಒಂದು ಸಾರಿ ಅವರ ಪತ್ನಿಯರೊಂದಿಗೆ ಲೈಂಗಿಕತೆ ಅನುಭವಿಸಲು ಏಕೆ ಅವಕಾಶ ಕೊಡಬಾರದು? ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಎಚ್ಐವಿಯಂತಹ ಮಾರಕ ಕಾಯಿಲೆಗಳನ್ನು ತಡೆಯಲು ಸಾಧ್ಯವಿದೆಯಲ್ಲವೇ? ಬಾಂಬೈ ಹೈಕೋರ್ಟ್ ಮಹಾರಾಷ್ಟ್ರ ಸರಕಾರದ ಮುಂದಿಟ್ಟ ಪ್ರಶ್ನೆಯಿದು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ನ ನ್ಯಾಯಮೂರ್ತಿ ಪಿ ಬಿ ಮುಜಂದಾರ್ ಮತ್ತು ಆರ್ ಜಿ ಕೆಟ್ಕರ್ ಅವರನ್ನೊಳಗೊಂಡ ಪೀಠ ಇಂದು ಮಹಾರಾಷ್ಟ್ರದ ಸರಕಾರದ ಮುಂದೆ ಗಂಭೀರ ವಿಷಯವೊಂದನ್ನು ಮಂಡಿಸಿದೆ. ಎರಡು ಮೂರು ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಕೈದಿಗಳಿಗೆ ತಿಂಗಳಿಗೆ ಒಂದೆರಡು ಸಲ ಅವರ ಪತ್ನಿಯೊಂದಿಗೆ ಲೈಂಗಿಕತೆಗೆ ಏಕೆ ಅವಕಾಶ ಮಾಡಕೊಡಬಾರದು? ಲೈಂಗಿಕತೆ ಎನ್ನುವುದು ಮನುಷ್ಯನ ನೈಸರ್ಗಿಕ ವಿಧಾನ. ಅದನ್ನು ತಡೆಕೊಳ್ಳುವುದು ಎಂತಹವರಿಂದಲೂ ಸಾಧ್ಯವಿಲ್ಲ. ಹೀಗಾಗಿ ಕೈದಿಗಳಿಗೆ ಅವರ ಪತ್ನಿಯೊಂದಿಗೆ ಲೈಂಗಿಕತೆ ಅನುಭವಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯ ಆಭಿಪ್ರಾಯಪಟ್ಟಿದೆ.

ಸರಕಾರಗಳು ಕೈದಿಗಳಿಗೆ ಈ ಅವಕಾಶ ಮಾಡಿಕೊಟ್ಟರೆ ಏಡ್ಸ್ ಎಂಬ ಮಾರಕ ರೋಗವನ್ನು ತಡೆಗಟ್ಟಬಹುದು. ಏಡ್ಸ್ ತಡೆಗಟ್ಟಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಜೈಲಿನಲ್ಲಿರುವ ಕೈದಿಗಳಿಗೂ ಇದರ ಅವಕಾಶ ಒದಗಿಸಿದರೆ ಏಡ್ಸ್ ನ್ನು ತಡೆಗಟ್ಟಬಹುದಲ್ಲವೇ? ಇದನ್ನು ಸರಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ಈಗಾಗಲೇ ಪಾಶ್ಚಿಮಾತ್ಯ ದೇಶಗಳ ಜೈಲಿನಲ್ಲಿರುವ ಕೈದಿಗಳಿಗೆ ಇಂತಹ ಅವಕಾಶವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X