ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರ ಮಾರ್ಗದರ್ಶಿ ಕೊಡಕ್ಕಲ್ ಶಿವಪ್ರಸಾದ್

By Staff
|
Google Oneindia Kannada News

Kodakkal Shivaprasad
ಬೆಂಗಳೂರು, ನ. 18 : ಕೇಂದ್ರ ಸರಕಾರದ ಪ್ರತಿಯೊಂದು ಇಲಾಖೆಗಳಲ್ಲೂ ಪ್ರತ್ಯೇಕ ಅಂಗವಿಕಲರ ವಿಭಾಗ ಇರಬೇಕು. ಆ ವಿಭಾಗಕ್ಕೆ ಒಬ್ಬ ಅಧಿಕೃತ ಅಧಿಕಾರಿಯನ್ನು ಇಲಾಖೆ ನೇಮಿಸಿ ಆದೇಶ ಹೊರಡಿಸಬೇಕು ಎಂದು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಆದೇಶಿಸಿದೆ.

ಸರಕಾರದ ನಾನಾ ಕ್ಷೇತ್ರಗಳಲ್ಲಿ ಹಲವಾರು ಮಂದಿ ಅಂಗವಿಕಲರು ದುಡಿಯುತ್ತಿದ್ದು ಅವರ ಕ್ಷೇಮ ಅಭಿವೃದ್ಧಿ ಮತ್ತು ಸೇವಾ ನಿಯಮಗಳನ್ನು ಸಮಪರ್ಕವಾಗಿ ನಿರ್ವಹಿಸಲು ಅನುವಾಗುವಂತೆ ಆ ವಿಭಾಗ ಕಾರ್ಯಪ್ರವೃತ್ತವಾಗಬೇಕು ಎಂದು ಸರಕಾರ ಬಯಸಿದೆ. ಈ ನಿಟ್ಟಿನಲ್ಲಿ ನಾನಾ ಇಲಾಖೆಗಳ ನಡುವೆ ಸಮರ್ಪಕ ಸಂವಹನ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕನ್ನಡಿಗ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಕೇಂದ್ರ ಅಂಗವಿಕಲ ಸಂವಹನ ಅಧಿಕಾರಿಯಾಗಿ (Laison Officer)ನೇಮಿಸಿ ಆದೇಶ ಹೊರಡಿಸಿದೆ.

ಅಂಗವಿಕಲ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕಿನಲ್ಲಿ ಕೊಡಕ್ಕಲ್ ಶಿವಪ್ರಸಾದ್ ಅಧಿಕಾರಿಯಾಗಿ ಸೇವೆಯಲ್ಲಿದ್ದಾರೆ. ಅಂಗವಿಕಲರ ಜೀವನ ಶೈಲಿ, ಉದ್ಯೋಗ, ಮತ್ತು ನಮ್ಮ ಸಮಾಜ ವಿಕಲ ಚೇತನರಿಗೆ ರೂಪಿಸಿರುವ ನಾನಾ ಕಾನೂನುಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿರುವ ಅವರು ಸ್ವತಃ ಓರ್ವ ಅಂಗವಿಕಲ.

ಅಂಗವಿಕಲರಿಗೆ ಮೀಸಲಾದ ಕಾನೂನುಗಳ ಬಗೆಗೆ ಅಂತರ್ ಜಾಲದಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವುದು ಶಿವಪ್ರಸಾದ್ ಅವರ ಆಸಕ್ತಿಯ ಕ್ಷೇತ್ರ. ಕೊಡಕ್ಕಲ್ ಶಿವಪ್ರಸಾದರು ಈಗಾಗಲೇ ಇದೇ ಇಲಾಖೆಯಿಂದ ಹಲವಾರು ಹುದ್ದೆಗಳಿಗೆ ಆಯ್ಕೆಗೊಂಡಿದ್ದನ್ನು ಸ್ಮರಿಸಬಹುದಲ್ಲದೆ ಹೆಚ್ಚಿನ ವಿವರಗಳನ್ನು ಅವರ ಸಾಮಾಜಿಕ ತಾಣವಾದ www.kodakkal.ning.com ನಿಂದ ಪಡೆಯಬಹುದು.

ಕೊಡಕ್ಕಲ್ ಶಿವಪ್ರಸಾದ್, ಇಮೇಲ್ : [email protected]
ವಿಳಾಸ : ಶಿವನಾಗ, ಮೊದಲನೆ ತಿರುವು, ಗುಂಡುಪ್ಪ ಶೆಡ್, ಶಿವಮೊಗ್ಗ 577 201 ದೂರವಾಣಿ : 92433 14402

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X