ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ನಲ್ಲಿ ಬಯಲಾದ ನ್ಯಾಯಮೂರ್ತಿಗಳ ಆಸ್ತಿ

|
Google Oneindia Kannada News

Justice KG Balakrishnan, CJI
ನವದೆಹಲಿ, ನ. 3 : ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ಇತರ 20 ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಅವರ ಆಸ್ತಿವಿವರಗಳನ್ನು ಸಾರ್ವಜನಿಕರು ನ್ಯಾಯಾಯಲದ ವೆಬ್ ತಾಣ http://www.supremecourtofindia.nic.in/assets.htm ದಲ್ಲಿ ನೋಡಬಹುದು. ಈ ವಿವರಗಳನ್ನು ನವಂಬರ್ 2ರ ಸೋಮವಾರ ವೆಬ್ಬಿಗೆ ಹಾಕಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀವು ಮತ್ತು ನಿಮ್ಮ ನ್ಯಾಯಾಲಯದ ನ್ಯಾಯಾಧೀಶರುಗಳು ಆಸ್ತಿ ವಿವರಗಳನ್ನು ಬಹಿರಂಗ ಮಾಡಬೇಕು ಎಂದು ದೆಹಲಿ ಉಚ್ಚ ನ್ಯಾಯಾಲಯ ಕೆಜಿ ಬಾಲಕೃಷ್ಣ ಅವರಿಗೆ ಸೆಪ್ಟೆಂಬರ್ 2, 2009ರಂದು ಸೂಚಿಸಿತ್ತು. ಆ ಪ್ರಕಾರ ಇಂದಿನಿಂದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಆಸ್ತಿ ವಿವರಗಳು ವೆಬ್ ತಾಣದಲ್ಲಿ ಲಭ್ಯವಾದವು.

ಪರಿಸ್ಥಿತಿ ಬದಲಾಗಿರುವುದರ ಹಿನ್ನೆಲೆಯಲ್ಲಿ ನಾವು ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಕೊಡುತ್ತಿಲ್ಲ, ಆದರೆ, ವಿವರಗಳು ಅಂತರ್ಜಾಲದಲ್ಲಿ ಸಿಗುತ್ತವೆ ಎಂದು ಕೆಜಿ ಬಾಲಕೃಷ್ಣನ್ ಹೇಳಿದರು. ಈ ಮೂಲಕ ನ್ಯಾಯಾಧೀಶರುಗಳ ಸ್ಥಿರಾಸ್ತಿ, ಬಂಡವಾಳ ಹೂಡಿಕೆ ವಿವರಗಳು ಜಗಜ್ಜಾಹೀರಾಗಿವೆ. ನ್ಯಾಯಾಧೀಶರು ತಮ್ಮ ಬಂಧುಬಳಗದ ಹೆಸರಲ್ಲಿ ಮಾಡಿರುವ ಆಸ್ತಿ ವಿವರಗಳನ್ನೂ ಪ್ರಕಟಿಸಲಾಗಿದೆ ಎಂದು ಕೆಜಿಬಿ ಹೇಳಿದ್ದಾರೆ.

ಎರ್ನಾಕುಲಂ ನಲ್ಲಿರುವ ಎರಡು ಮಲಗುವ ಕೋಣೆ ಫ್ಲ್ಯಾಟ್ ಸೇರಿದಂತೆ (ಮೌಲ್ಯ 5.75 ಲಕ್ಷ ರೂ) ಪ್ರಕಟವಾಗಿರುವ ನ್ಯಾ.ಬಾಲಕೃಷ್ಣನ್ ಅವರ ಆಸ್ತಿ ಸುಮಾರು 18 ಲಕ್ಷ ರುಪಾಯಿ. ಅವರಿಗೆ ಫರೀದಾಬಾದ್ ನಲ್ಲಿ ಒಂದು ಖಾಲಿ ಇರುವ ನಿವೇಶನವಿದೆ. ತವರೂರು ಕೇರಳದ ತ್ರಿಕ್ಕಕಾರದಲ್ಲಿರುವ ಮನೆಯ ಮೌಲ್ಯವೂ ಇದರಲ್ಲಿ ಸೇರಿದೆ. ಇದಲ್ಲದೆ, ಕೇರಳದಲ್ಲಿರುವ ಮೂರೂವರೆ, ನಾಕೂವರೆ ಲಕ್ಷ ಬೆಲೆಹಾಳುವ ನಿವೇಶನಗಳ ವಿವರ ಮತ್ತು ಅವರ ಹೆಂಡತಿ ಬಳಿಯಿರುವ 20 ಸಾವರಿನ್ ಬಂಗಾರ ಹಾಗೂ 2000 ಇಸವಿ ಮಾಡೆಲ್ಲಿನ ಒಂದು ಹಳೆ ಸ್ಯಾನ್ ಟ್ರೋ ಕಾರಿನ ಮಾರುಕಟ್ಟೆ ಬೆಲೆಯನ್ನು ನ್ಯಾ.ಬಾಲಕೃಷ್ಣನ್ ವೆಬ್ ನಲ್ಲಿ ಬಿಡಿಬಿಡಿಸಿ ಇಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X