ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪಿಎಂ ಆಗ್ಬೇಕು : ಎಸ್ ಎಂ ಕೃಷ್ಣ

|
Google Oneindia Kannada News

ಬೆಂಗಳೂರು, ಅ. 13 : ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ದೇಶದ ಯುವಕರ ಕಣ್ಮಣಿ. ಅವರ ದೂರದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಕಳೆದ ಲೋಕಸಭೆ ಚುನಾವಣೆ ಅಭೂತಪೂರ್ವ ಜಯಗಳಿಸಿತು. ಮುಂದೆಂದೂ ದಿನ ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗಲಿದ್ದಾರೆ. ಇದು ನನ್ನ ವೈಯಕ್ತಿಕ ಆಸೆಯೂ ಹೌದು. ಪಕ್ಷದ ಅಭಿಲಾಷೆಯೂ ಹೌದು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರ ವಿಶ್ವಾಸದಿಂದ ಹೇಳಿದ್ದಾರೆ. ಅರುಣಾಚಲ ಪ್ರದೇಶ ನಮ್ಮ ಅವಿಭಾಜ್ಯ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಟಿವಿ 9 ವಾಹಿನಿಯ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡುತ್ತಿದ್ದರು. ದೇಶದಲ್ಲಿ 107 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ ಸುಮಾರು 60 ಕೋಟಿ ಮಂದಿ ಯುವಕರಿದ್ದು. ಅವರೆಲ್ಲರ ಆಸೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಮಂತ್ರಿಯಾಗಬೇಕು ಎಂಬುದಾಗಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಕೂಡಾ ಅದೇ ಆಗಿದ್ದು, ಪ್ರಧಾನಮಂತ್ರಿ ಸ್ಥಾನವನ್ನು ಯಾವಾಗ ಅಲಂಕರಿಸಬೇಕು ಎಂಬುದನ್ನು ರಾಹುಲ್ ಗಾಂಧಿ ನಿರ್ಧರಿಸಬೇಕಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವಂತಾಯಿತು. ಚುನಾವಣೆ ನಂತರವೂ ಅವರು ಮಾಡುತ್ತಿರುವ ಕೆಲಸ. ಗ್ರಾಮ ವಾಸ್ತವ್ಯಗಳು ಅತ್ಯಂತ ಶ್ಲಾಘನೀಯ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಯುವಕರ ಗಮನ ಸೆಳೆದಿದ್ದಾರೆ.

ಕೇಂದ್ರ ವಿದೇಶಾಂಗ ಖಾತೆ ಸಚಿವನಾಗುವೆ ಎಂದು ಕನಸು ಕಂಡಿರಲಿಲ್ಲ. ಇದೊಂದು ಆಕಸ್ಮಿಕ. ಇಂತಹ ಹಲವಾರು ಆಕಸ್ಮಿಕಗಳು ನನ್ನ ಜೀವನದಲ್ಲಿ ನಡೆದಿವೆ. ರಾಜ್ಯಪಾಲನಾಗಿದ್ದು ಕೂಡಾ ಅನಿರೀಕ್ಷಿತವೇ. ನಾನು ಎಂದಿಗೂ ಅಧಿಕಾರದ ಕನಸನ್ನು ಕಂಡವನಲ್ಲ. ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಸಿರುವೆ, ನಿಭಾಯಿಸುತ್ತಿರುವೆ ಎಂದು ಕೃಷ್ಣ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X