ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಮೇಣದ ಪ್ರತಿಮೆ ಅನಾವರಣ

By Staff
|
Google Oneindia Kannada News

 Eloquent wax has Sachin spellbound
ಮುಂಬೈ, ಏ. 14 : ಭಾರತೀಯ ಕ್ರಿಕೆಟ್‌ಗೆ ಅಮೋಘ ಸೇವೆ ಸಲ್ಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ವಿಶೇಷ ಗೌರವ ದಕ್ಕಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್‌ಗೆ ಏಪ್ರಿಲ್ 24ರಂದು ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯ ತದ್ರೂಪು ಪ್ರತಿಕೃತಿ ನಿರ್ಮಿಸುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಲಿದೆ.

ಲಂಡನ್‌ನ ಮೇಣದ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ ಹೊಂದಿದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಚಿನ್ ಪಾತ್ರರಾಗಲಿದ್ದಾರೆ. ಮೇಣದ ಪ್ರತಿಕೃತಿ ಸಚಿನ್ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಅನಾವರಣಗೊಳ್ಳಲಿದೆ. ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್‌ಖಾನ್, ಐಶ್ವರ್ಯ ರೈ ಮತ್ತು ಸಲ್ಮಾನ್‌ಖಾನ್ ಅವರ ಪ್ರತಿಮೆ ಹೊರತುಪಡಿಸಿದರೆ, ದೇಶದ ಕ್ರೀಡಾಪಟುವೊಬ್ಬನಿಗೆ ದೊರೆತ ಮೊದಲ ಗೌರವ ಇದಾಗಿದೆ.

ಟೆಸ್ಟ್‌ನಲ್ಲಿ ಶತಕ ಬಾರಿಸಿದ ಸಂಭ್ರಮ ವ್ಯಕ್ತಪಡಿಸುತ್ತಿರುವ ಮಾದರಿಯಲ್ಲಿರುವ ಸಚಿನ್ ಪ್ರತಿಕೃತಿ ರಚಿಸಲು ಮೂರು ತಿಂಗಳು ತೆಗೆದುಕೊಳ್ಳಲಾಗಿದೆ. ತಮಗೆ ದೊರೆತ ಅಪರೂಪದ ಗೌರವಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್, ನನ್ನ ಪ್ರತಿರೂಪವನ್ನು ವಿಶ್ವದ ಮಹಾನ್ ಗಣ್ಯರೊಂದಿಗೆ ನೋಡುವ ಅವಕಾಶ ದೊರೆತಾಗ ಹೆಮ್ಮೆ ಎನಿಸುತ್ತದೆ ಎಂದರು. ಮುಂದೆ ಈ ಗೌರವ ಯಾರಿಗೆ ಸಿಗುತ್ತದೆ ಎಂದು ಹೇಳಲಾಗದು. ಆದರೆ ಯಾರಿಗೆ ದೊರೆತರೂ ಇದೊಂದು ಅಪರೂಪದ ಗೌರವ ಎಂದು ಮಾತ್ರ ಹೇಳಬಲ್ಲೆ. ಸದ್ಯಕ್ಕೆ ನನ್ನ ಪ್ರತಿಕೃತಿ ಅಲ್ಲಿರು ವುದರಿಂದ ಸಂತಸವಾಗಿದೆ ಎಂದು ಸಚಿನ್ ವಿವರಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ನಂತರ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದು, ವಸ್ತು ಸಂಗ್ರಹಾಲಯದಲ್ಲಿ ನನ್ನ ಪ್ರತಿಕೃತಿ ವೀಕ್ಷಿಸಲಿದ್ದೇನೆ. ಕಳೆದ 15 ವರ್ಷಗಳಲ್ಲಿ ಮೇಡಂ ಟುಸಾಡ್ಸ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲು ಬಯಸಿದ್ದೆ. ಆದರೆ ಸಾಧ್ಯವಾಗಿರಲಿಲ್ಲ ಎಂದು ಸಚಿನ್ ಹೇಳಿದರು. ಕ್ರಿಕೆಟಿಗನಾಗಿ ಹಲವಾರು ದಾಖಲೆಗಳನ್ನು ಮಾಡಿರಬಹುದು. ಆದರೆ ದೇಶಕ್ಕಾಗಿ ವಿಶ್ವ ಕಪ್ ಗೆಲ್ಲುವುದು ನನ್ನ ಕನಸು ಎಂದು ಸಚಿನ್ ವಿವರಿಸಿದರು.

(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X