ಹಿರೇಗುಂಟನೂರು ಶ್ರೀ ದ್ಯಾಮಲಾಂಬ ಉತ್ಸವಕ್ಕೆ ಬನ್ನಿ

ಚಿತ್ರದುರ್ಗ,ಏ,10: ಇತಿಹಾಸ ಪ್ರಸಿದ್ದ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬ ಅಮ್ಮನವರ ಜಾತ್ರಾ ಕಾರ್ಯಕ್ರಮವು ಇದೇ ಏಪ್ರಿಲ್ 12 ರಿಂದ 18 ರವರೆಗೆ ನಡೆಯಲಿದೆ. ಜಾತ್ರಾ ಕಾರ್ಯಕ್ರಮದಂತೆ ಏ.12 ರಂದು ಕಲ್ಯಾಣೋತ್ಸವ, ಏ.13 ರಂದು ನವಿಲು ಉತ್ಸವ, ಏ.14 ರಂದು ಅಶ್ವೋತ್ಸವ, ಏ.15 ರಂದು ಮೀಸಲು ಪೂಜೆ ಹಾಗೂ 16 ರಂದು ಬೆಳಿಗ್ಗೆ 7 ಗಂಟೆಗೆ ಗಜೋತ್ಸವ ಪೂಜಾ ಕಾರ್ಯಕ್ರಮ ನಡೆಯಲಿದೆ.

ಏ.16 ರಂದು ಗುರುವಾರ ಸಂಜೆ 4 ಗಂಟೆಗೆ ಶ್ರೀದೇವಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಏ.17 ರಂದು ಶುಕ್ರವಾರ ಸಂಜೆ 5 ಗಂಟೆಗೆ ಶಿಡಿ ಉತ್ಸವ ಹಾಗೂ ಸಂಜೆ 7 ಗಂಟೆಗೆ ಶ್ರೀದೇವಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ. 18 ರಂದು ಶನಿವಾರ ಬೆಳಿಗ್ಗೆ 7 ಗಂಟೆಗೆ ಅವಭೃತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ವ್ಯವಸ್ಥಾಪಕ ಸಮಿತಿಯು ಕೋರಿದೆ.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...