ತೇಜಸ್ವಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

Subscribe to Oneindia Kannada

Seminar on Poornachandra Tejaswi
ಬೆಂಗಳೂರು, ಏ. 8 : ಲೇಖಕ ಹಾಗೂ ಚಿಂತಕ ಕೆ ಪಿ ಪೂರ್ಣಚಂದ್ರ ತೇಜಸ್ವಿ ಕುರಿತಂತೆ ಸಾಹಿತ್ಯ ಸಂಸ್ಕೃತಿ ಚಿಂತನೆ ಸಂಸ್ಥೆ ವತಿಯಿಂದ ಜಯನಗರದ ಬಿಇಎಸ್ ಕಾಲೇಜಿನ ಸಭಾಂಗಣದಲ್ಲಿ ಏಪ್ರಿಲ್ 9 ರಂದು ರಾಜ್ಯ ಸಂಕಿರಣವನ್ನು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆ ಖ್ಯಾತ ವಿಮರ್ಶಕ ಪ್ರೊ.ಜಿ ಎಸ್ ನಾಯಕ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಚಿಂತಕರು ಆಗಿರುವ ಎ ಜೆ ಸದಾಶಿವ, ರಾಜೇಶ್ವರಿ ತೇಜಸ್ವಿ, ಭಾರತ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ ಎಂ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ. ವಿ ವೆಂಕಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 12 ಗಂಟೆ ಮೊದಲ ಗೋಷ್ಠಿ ನಡೆಯಲಿದೆ. ವಿಮರ್ಶಕ ನಟರಾಜ್ ಹುಳಿಯಾರ್ ಅಧ್ಯಕ್ಷತೆ ವಹಿಸುವರು. ತೇಜಸ್ವಿ ಕೃತಿಗಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳ ನಿರ್ವಹಣೆ ವಿಷಯದ ಮೇಲೆ ಡಾ ಕೆ ಪುಟ್ಟಸ್ವಾಮಿ ಮಂಡಿಸಲಿದ್ದಾರೆ. ತೇಜಸ್ವಿಯವರ ಮಿಲೇನಿಯಂ ಸರಣಿಯ ಓದು ಕುರಿತು ಡಾ ಕೆ ಶಿವಾರೆಡ್ಡಿ, ಕುವೆಂಪು ತೇಜಸ್ವಿ ತಾತ್ವಿಕ ಮಾದರಿಗಳು ಕುರಿತು ಡಾ ಎಂ ಎಸ್ ಆಶಾದೇವಿ ವಿಚಾರ ಹಂಚಿಕೊಳ್ಳಲಿದ್ದಾರೆ.

ಎರಡನೇ ಗೋಷ್ಠಿ ಮಧ್ಯಾಹ್ನ 2.15ಕ್ಕೆ ಆರಂಭವಾಗಲಿದ್ದು, ವಿಮರ್ಶಕ ರಾಜೇಂದ್ರ ಚೆನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ. ತೇಜಸ್ವಿ ಬರಹಗಳಲ್ಲಿ ಮಾಯೆ ಮತ್ತು ಲೋಕ ಸಂಬಂಧ, ತೇಜಸ್ವಿ ಸಾಹಿತ್ ಮತ್ತು ನನ್ನ ಚಿಂತನೆ ಕುರಿತು ಡಾ ರಹಮತ್ ತರೀಕೆರೆ, ತೇಜಸ್ವಿಯವರ ಕಥನ ಸಾಹಿತ್ಯ ರಂಗ ರೂಪಕಗಳು ಕುರಿತು ಸಿ ಬಸವಲಿಂಗಯ್ಯ ವಿಚಾರ ಮಂಡಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸಮಾಜವಾದಿ ಚಿಂತಕ ಕಡಿದಾಳ್ ಶಾಮಣ್ಣ ಸಮಾರೋಪ ಭಾಷಣ ಮಾಡುವರು. ಪ್ರೊ ಟಿ ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ: ಮೂಡಿಗೆರೆ ಮಾಯವಿ ತೇಜಸ್ವಿ ನಾಡಿನಲ್ಲಿ ಚಾರಣ

Please Wait while comments are loading...