ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಬೇಡವಾದ ವರುಣ್ ಗಾಂಧಿ

By Staff
|
Google Oneindia Kannada News

ನವದೆಹಲಿ, ಮಾ. 20 : ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿರುವ ವರುಣ್ ಗಾಂಧಿಗೂ ಪಕ್ಷಕ್ಕೂ ತಳಕು ಹಾಕುವ ಸರಿಯಲ್ಲ. ವರುಣ್ ಗಾಂಧಿ ಅವರ ಹೇಳಿಕೆ ವೈಯಕ್ತಿಕವಾದುದ್ದು, ಇದನ್ನು ಪಕ್ಷ ಕೂಡಾ ವಿರೋಧಿಸಿದೆ. ಹೀಗಿದ್ದರೂ ಕೇಂದ್ರ ಚುನಾವಣೆ ಆಯೋಗ ಉತ್ತರ ಪ್ರದೇಶ ಬಿಜೆಪಿ ಘಟಕಕ್ಕೆ ನೋಟಿಸ್ ಜಾರಿ ಮಾಡಿರುವುದು ಏಕೆ ? ಬಿಜೆಪಿ ಪಕ್ಷಕ್ಕೆ ಜಾರಿ ಮಾಡಿರುವ ನೋಟಿಸ್ ನನ್ನು ಕೂಡಲೇ ಹಿಂಪಡೆಯುವಂತೆ ಆಯೋಗವನ್ನು ಬಿಜೆಪಿ ಒತ್ತಾಯಿಸಿದೆ.

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಬಿಜೆಪಿ ಪಕ್ಷ, ನಮಗೆ ಸಂಬಂಧವೇ ಇರದ ಘಟನೆಯಲ್ಲಿ ನಮ್ಮನ್ನು ವಿನಾಕಾರಣ ಸಿಕ್ಕಿಹಾಕಿಸುತ್ತಿದೆ. ಈಗಾಗಲೇ ನಾವು ಸ್ಪಷ್ಟಪಡಿಸಿದ್ದೇವೆ. ವರುಣ್ ಗಾಂಧಿ ಹೇಳಿಕೆಗೂ ಪಕ್ಷಕ್ಕೂ ಯಾವು ಸಂಬಂಧವೂ ಇಲ್ಲ. ಇದಕ್ಕೆ ನಮ್ಮ ಬೆಂಬಲವೂ ಇಲ್ಲ. ಆದರೂ ನೋಟಿಸ್ ನೀಡಿರುವುದು ಏಕೆ ಎಂದು ಪತ್ರದಲ್ಲಿ ಪ್ರಶ್ನಿಸಿದೆ.

ಸಿಡಿಯಲ್ಲಿರುವ ಧ್ವನಿ ನನ್ನದಲ್ಲ, ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಕೆಲ ರಾಜಕೀಯ ಶಕ್ತಿಗಳು ವ್ಯವಸ್ಥಿತವಾಗಿ ನನ್ನು ತುಳಿಯಲು ಇದನ್ನು ಸೃಷ್ಟಿಸಿವೆ ಎಂದು ವರುಣ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಇಂದು ದೆಹಲಿ ಹೈಕೋರ್ಟ್ ವರುಣ್ ಗಾಂಧಿ ಅವರಿಗೆ ಭದ್ರತಾ ಠೇವಣಿ ಇರಿಸಿಕೊಂಡು ನಿರೀಕ್ಷಣಾ ಜಾಮೀನು ನೀಡಿದೆ. ಕಾಂಗ್ರೆಸ್ ವರುಣ್ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದೆ.

(ದಟ್ಸ್ ಕನ್ನಡ ವಾರ್ತೆ)
ನಿರೀಕ್ಷಣಾ ಜಾಮೀನು ಪಡೆದ ವರುಣ್ ಗಾಂಧಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X