ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ವಶಕ್ಕೆ ಗಾಂಧೀಜಿ ಪರಿಕರಗಳು

By Staff
|
Google Oneindia Kannada News

Mallya saves Bapu s legacy, buys belongings for Rs 9 cr
ನ್ಯೂಯಾರ್ಕ್, ಮಾ. 6 : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದು, ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಅಮೇರಿಕಾದಲ್ಲಿ ಹರಾಜಿಗಿದ್ದ ಗಾಂಧೀಜಿಯವರ ಕನ್ನಡಕ, ಚಪ್ಪಲಿ, ತಟ್ಟೆಯನ್ನು ಖರೀದಿಸುವ ಮೂಲಕ ಭಾರತೀಯರಲ್ಲಿ ಸಂತಸ ಮೂಡಿಸಿದ್ದಾರೆ.

ಅಂತಿಮ ಕ್ಷಣದವರೆಗೂ ಗುಟ್ಟು ಬಿಟ್ಟು ಕೊಡದ ಮಲ್ಯ, ಸುಮಾರು 9 ಕೋಟಿ ರೂಪಾಯಿಗಳ ( 18 ಲಕ್ಷ ಅಮೆರಿಕನ್ ಡಾಲರ್) ಭಾರಿ ಹಣಕ್ಕೆ ಗಾಂಧೀಜಿಯವರ ಸ್ಮರಣಿಕೆಗಳನ್ನು ಖರೀದಿಸಿದ್ದಾರೆ. ಇನ್ನು ಎರಡು ವಾರಗಳಲ್ಲಿ ಇವುಗಳು ಮಲ್ಯ ಅವರ ವಶವಾಗಲಿವೆ.

ಆ೦ಟಿಕೋರಮ ಎಂಬ ಹರಾಜು ಸಂಸ್ಥೆ ಹರಾಜನ್ನು ಆಯೋಜಿಸಿತ್ತು. ಅಮೇರಿಕಾದ ಜೇಮ್ಸ್ ಒಟಿಸ್ ತನ್ನಲ್ಲಿದ್ದ ಈ ವಸ್ತುಗಳನ್ನು ಹರಾಜಿಗಿಡುತ್ತೇನೆ ಎಂದು ಭಾರತವನ್ನು ಕೆಲದಿನಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ. ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲು ಭಾರತ ಸರ್ಕಾರ ಶತಾಯುಗತಾಯು ಪ್ರಯತ್ನ ನಡೆಸಿತ್ತು. ಆದರೆ ಅದು ಫಲಕಾರಿಯಾಗದೆ ಗುರುವಾರ ಹರಾಜು ಪ್ರಕ್ರಿಯೆ ನಡೆದು ಭಾರತೀಯ ಮೂಲದ ಉದ್ಯಮಿ ವಿಜಯ್ ಮಲ್ಯ ಖರೀದಿಸಿರುವುದು ಸಂತಸದ ಸಂಗತಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X