ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಟೆಕ್ಕಿ ನಾಪತ್ತೆ; ಆತಂಕದಲ್ಲಿ ಪೋಷಕರು

By Staff
|
Google Oneindia Kannada News

ಬೆಂಗಳೂರು, ಡಿ.22: ತರಬೇತಿಗೆಂದು ಹೈದರಾಬಾದಿಗೆ ಹೋದ ಮಗ ಇನ್ನೂ ಮನೆಗೆ ಬಂದಿಲ್ಲ, ಏನಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಕಳವಳದಿಂದ ಹೇಳುತ್ತಾರೆ ಟೆಕ್ಕಿ ಮಹಮದ್ ಮುಬಾಸಿರ್ ಅವರ ತಂದೆ ಮಹಮದ್ ಇನಾಯತುಲ್ಲಾ.

ನಗರದ ಇನ್ಫೋಸಿಸ್ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಮುಬಾಸಿರ್ ಸೆ. 24 ರಂದು ಮನೆ ಬಿಟ್ಟಿದ್ದಾರೆ. ಕಂಪೆನಿಯ ತರಬೇತಿಗೆಂದು ಹೈದರಾಬಾದಿಗೆ ತೆರಳುತ್ತಿರುವುದಾಗಿ ಮನೆಯಲ್ಲಿ ಹೇಳಿದ್ದಾರೆ. ಆದರೆ ಈ ವರೆಗೂ ಪತ್ತೆ ಆಗಿಲ್ಲ.

ಈ ಬಗ್ಗೆ ಇನ್ಫೋಸಿಸ್ ಸಂಸ್ಥೆಯನ್ನು ಕೇಳಿದಾಗ ಮುಬಾಸಿರ್ ಕಂಪೆನಿಗೆ ರಾಜೀನಾಮೆ ಕೊಟ್ಟು ಆರು ತಿಂಗಳಾಗಿದೆ ನಮಗೇನೂ ತಿಳಿದಿಲ್ಲ ಎಂದರು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಡಿ.16 ರಂದು ದೂರು ನೀಡಿದ್ದೇನೆ ಆದರೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನುತ್ತಾರೆ ಟೆಕ್ಕಿಯ ತಂದೆ ಇನಯಾತುಲ್ಲಾ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X