ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಂತೀಯ ಭಾಷಾ ಇಂಟರ್ನೆಟ್ ಬಳಕೆದಾರರಲ್ಲಿ ಹೆಚ್ಚಳ

By Super
|
Google Oneindia Kannada News

India online
ಬೆಂಗಳೂರು, ಜೂ. 02 : ಇಂಟರ್ನೆಟ್ ಬಳಕೆಯಿಂದಾಗಿ ಇಡೀ ಜಗತ್ತೇ ಒಂದು ಪುಟ್ಟ ಗ್ರಾಮವಾಗಿ ಮಾರ್ಪಾಡಾಗಿದೆ. ಅದರಲ್ಲೂ ಭಾರತದಲ್ಲಿ, ಬ್ರಾಡ್‌ಬ್ಯಾಂಡ್ ಕ್ರಾಂತಿಯಿಂದಾಗಿ ನಗರ ಮತ್ತು ಹಳ್ಳಿಗಳಲ್ಲಿ ಜನ ಅಂತರ್ಜಾಲ ತಾಣದ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಂಗ್ಲಿಷಿಗಿಂತ ಪ್ರಾಂತೀಯ ಭಾಷೆಯಲ್ಲಿ ಬಳಸುವವರ ಸಂಖ್ಯೆ ಹೆಚ್ಚಿರುವುದು ಗ್ರಾಮೀಣ ಜನತೆಯ ಇಂಟರ್ನೆಟ್ ಒಲವಿಗೆ ಹಿಡಿದ ಕನ್ನಡಿಯಂತಿದೆ.

ಜಕ್ಸ್ಟ್‌ಕನ್ಸಲ್ಟ್‌ನ ಇಂಡಿಯಾ ಆನ್‌ಲೈನ್ ಇಂಟರ್ನೆಟ್ ಬಳಕೆಗೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಹೊಮ್ಮಿದೆ. ಇಂಡಿಯಾ ಆನ್‌ಲೈನ್ ನಡೆಸಿದ ವಿಸ್ತೃತ ಅಧ್ಯಯನ ಇಂಟರ್ನೆಟ್ ಬಳಕೆದಾರರ ವರ್ತನೆ, ಅವರ ಬೇಕುಬೇಡಗಳ ಬಗ್ಗೆ ಅತ್ಯಂತ ನಿಖರವಾಗಿ ವಿವರ ನೀಡಿದೆ.

ಸಮೀಕ್ಷೆಯ ಕೆಲ ಪ್ರಮುಖ ಅಂಶಗಳು ಈ ಕೆಳಗಿನಂತಿವೆ :

* ಭಾರತದಲ್ಲಿ 4 ಕೋಟಿ 90 ಲಕ್ಷ ಇಂಟರ್ನೆಟ್ ಬಳಕೆದಾರರಿದ್ದಾರೆ. ಅವರಲ್ಲಿ 4 ಕೋಟಿ ನಗರದವರು ಮತ್ತು 90 ಲಕ್ಷ ಗ್ರಾಮಿಣ ಪ್ರದೇಶದವರು.
* ಕಳೆದ ಒಂದು ವರ್ಷದಲ್ಲಿ ಶೇ. 33ರಷ್ಟು ನಗರ ಬಳಕೆದಾರರ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.
* ಇವರಲ್ಲಿ 'ನಿತ್ಯ' ಬಳಕೆದಾರರು 3 ಕೋಟಿ 50 ಲಕ್ಷದಷ್ಟಿದ್ದಾರೆ. 3 ಕೋಟಿ ನಗರಿಗರು, 50 ಲಕ್ಷ ಹಳ್ಳಿ ವಾಸಿಗಳು. ('ನಿತ್ಯ' ಬಳಕೆದಾರರು ಅಂದರೆ ವರ್ಷಕ್ಕೊಮ್ಮೆಯಾದರೂ ಇಂಟರ್ನೆಟ್ ಬಳಸುವವರು.)
* ಕಳೆದ ಒಂದು ವರ್ಷದಲ್ಲಿ 'ನಿತ್ಯ' ಬಳಕೆದಾರರ ಸಂಖ್ಯೆ ಶೇ.19ರಷ್ಟು ಜಾಸ್ತಿಯಾಗಿದೆ.
* ಪ್ರತಿದಿನ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ 2 ಕೋಟಿ 25 ಲಕ್ಷ.

ಯುವಜನತೆ, ಉಪನಗರಗಳಲ್ಲಿ ವಾಸಿಸುವವರು, ಗೃಹಿಣಿಯರು, ನೌಕರಿಯಲ್ಲಿರುವವರು, ಇಂಗ್ಲಿಷ್ ಭಾಷೆ ಬರಲಿ ಬಿಡಲಿ ಇಂಟರ್ನೆಟ್ಟನ್ನು ಅವ್ಯಾಹತವಾಗಿ ದೇಶದಾದ್ಯಂತ ಬಳಸುತ್ತಿರುವುದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಪ್ರಾಂತೀಯ ಭಾಷೆಯಲ್ಲಿಯೇ ಅಂತರ್ಜಾಲದ ಮಾಹಿತಿಯನ್ನು ಓದುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಶೇ 77ರಷ್ಟು 19ರಿಂದ 35ರ ವಯದೊಳಗಿನ ಯುವಜನತೆ ಇಂಟರ್ನೆಟ್ ದಾಸರಾಗಿದ್ದಾರೆ. ಒಟ್ಟಾರೆ ಬಳಕೆದಾರರಲ್ಲಿ ಶೇ. 70ರಷ್ಟು ಮಂದಿ ಎ,ಬಿ,ಸಿ ನಗರಗಳಲ್ಲಿ ವಾಸಿಸುವರು. ಶೇ.51ರಷ್ಟು ಜನ ನೌಕರಿಯಲ್ಲಿರುವವರು, ಶೇ. 63ರಷ್ಟು ಜನ ವಾಹನ ಬಳಸುತ್ತಾರೆ. ಇವರಲ್ಲಿ ಇಂಗ್ಲಿಷಿನಲ್ಲಿ ಮಾಹಿತಿ ಓದುವವರ ಸಂಖ್ಯೆ ಕೇವಲ 28ರಷ್ಟಿದೆಯೆಂದರೆ ಪ್ರಾಂತೀಯ ಭಾಷೆಯಲ್ಲಿ ಇಂಟರ್ನೆಟ್ ಓದುವವರ ಸಂಖ್ಯೆ ಎಷ್ಟಿದೆಯೆಂದು ಗಮನಕ್ಕೆ ಬರುತ್ತದೆ. ಕಳೆದ ವರ್ಷ ಶೇ.12ರಷ್ಟಿದ್ದ ಪ್ರಾಂತೀಯ ಭಾಷಾಬಳಕೆದಾರರ ಸಂಖ್ಯೆ ಈ ವರ್ಷ ಶೇ.34ಕ್ಕೇರಿದೆ.

ಮಾಹಿತಿ ಸಂಗ್ರಹಿಸುವುದಿರಲಿ, ಟಿಕೆಟ್ ಬುಕ್ ಮಾಡುವುದಿರಲಿ, ಬ್ಲಾಗಿಸುವುದಕ್ಕಿರಲಿ ಒಟ್ಟಾರೆಯಾಗಿ 15 ಇಂಟರ್ನೆಟ್ ಚಟುವಟಿಕೆಗಳಲ್ಲಿ ಬಳಕೆದಾರ ಭಾಗಿಯಾಗಿರುತ್ತಾನೆ. ಅವುಗಳಲ್ಲಿ ಮುಕ್ಕಾಲು ಭಾಗ ಸ್ವಂತದ ಕೆಲಸಕಾರ್ಯಗಳಿಗೇ ಮೀಸಲಾಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಇಂಟರ್ನೆಟ್ ಎಷ್ಟು ಹಾಸುಹೊಕ್ಕಾಗಿದೆಯೆಂದರೆ, ಇಂಟರ್ನೆಟ್ ಜೀವನ ಧಾಟಿಯನ್ನೇ ಬದಲಿಸಿಬಿಟ್ಟಿದೆ.

* ಶೇ 41ರಷ್ಟು ಮಂದಿ ಮನೆಯಲ್ಲಿಯೇ ಕುಳಿತು ಇಂಟರ್ನೆಟ್ ಬಳಸಲು ಇಚ್ಛಿಸುತ್ತಾರೆ.
* ಹತ್ತರಲ್ಲಿ ಒಂಬತ್ತು ಜನ ಮನೆಯಲ್ಲಿ ಅಥವ ಕಚೇರಿಯಲ್ಲಿ ಇಂಟರ್ನೆಟ್ ತಪ್ಪದೇ ಬಳಸುತ್ತಾರೆ.
* ಮನೆಯಲ್ಲಿ 2 ಗಂಟೆಗಳಿಂತಲೂ ಹೆಚ್ಚು ಸಮಯ ಅಂತರ್ಜಾಲವನ್ನು ಜಾಲಾಡುತ್ತಾರೆ.
* ಎರಡುಗಂಟೆಗಿಂತಲೂ ಹೆಚ್ಚು ಸಮಯ ಇಂಟರ್ನೆಟ್ ಬಳಸುವವರ ಸಂಖ್ಯೆ ಶೇ.36.
* ಎರಡುಗಂಟೆಗಿಂತಲೂ ಹೆಚ್ಚು ಸಮಯ ಟಿವಿ ನೋಡುವವರ ಸಂಖ್ಯೆ ಶೇ.14.
* ಎರಡುಗಂಟೆಗಿಂತಲೂ ಹೆಚ್ಚು ಸಮಯ ವೃತ್ತಪತ್ರಿಕೆ ಓದುವವರು ಶೇ.2ರಷ್ಟಿದ್ದಾರೆ.
* ಎರಡುಗಂಟೆಗಿಂತಲೂ ಹೆಚ್ಚು ಸಮಯ ರೇಡಿಯೋ ಕೇಳುಗರು ಶೇ.10ರಷ್ಟಿದ್ದಾರೆ.
* ಬಳಕೆದಾರರಲ್ಲಿ ಶೇ. 81ರಷ್ಟು ನೆಟ್ಟಿಗರು ಚಾಟಿಂಗ್, ಸೋಷಿಯಲ್ ನೆಟ್ವರ್ಕಿಂಗ್, ಆನ್‌ಲೈನ್ ಕಮ್ಯುನಿಟಿ, ಬ್ಲಾಗ್‌ಗಳಲ್ಲಿ ಬರೆಯುವ, ಓದುವ ಮುಖಾಂತರ ವಿಷಯ ವಿನಿಮಯ ಮಾಡಿಕೊಳ್ಳುತ್ತಾರೆ.

ಆನ್‌ಲೈನ್ ಶಾಪಿಂಗ್‌ನಲ್ಲಿ ಗಣನೀಯ ಏರಿಕೆ :

* ಶೇ.80ರಷ್ಟು ಜನ ಶಾಪಿಂಗ್ ತಾಣಗಳಲ್ಲಿ ವಿಹರಿಸುತ್ತಾರೆ. ಹುಡುಕಲು ಮತ್ತು ಕೊಳ್ಳಲು ಹೆಚ್ಚು ಸಮಯ ವ್ಯಯಮಾಡುತ್ತಿದ್ದಾರೆ.
* ಕಳೆದ 6 ತಿಂಗಳಲ್ಲಿ ಶೇ. 23ರಷ್ಟು ಜನ ಇಂಟರ್ನೆಟ್‌ನಲ್ಲಿ ಕೊಳ್ಳುವಿಕೆಯಲ್ಲಿ ನಿರತಗಾಗಿದ್ದಾರೆ. 80 ಲಕ್ಷದಷ್ಟು ಜನ ನಿರಂತರವಾಗಿ ಶಾಪಿಂಗ್ ಮಾಡುತ್ತಿದ್ದಾರೆ.
* ಇವರಲ್ಲಿ ಶೇ.92ರಷ್ಟು ಬಳಕೆದಾರರು ಪ್ರವಾಸಕ್ಕೆ ಸಂಬಂಧಿಸಿದಂತೆ ಮತ್ತು ಶೇ. 52ರಷ್ಟು ಜನ ಪ್ರವಾಸೇತರ ಕೊಳ್ಳುವಿಕೆಯಲ್ಲಿ ಭಾಗಿಯಾಗಿದ್ದಾರೆ.
* ಆನ್‌ಲೈನ್ ಟಿಕೆಟ್ ಕೊಳ್ಳುವವರಲ್ಲಿ ಶೇ. 80ರಷ್ಟು ಮಂದಿ ರೈಲು ಟಿಕೆಟ್ ಕೊಂಡರೆ, ಶೇ.52ರಷ್ಟು ಮಂದಿ ವಿಮಾನ ಟಿಕೆಟ್ ಕೊಂಡಿದ್ದಾರೆ.
* ಪ್ರವಾಸ ಹೊರತುಪಡಿಸಿದರೆ, ಪುಸ್ತಕ, ಬಟ್ಟೆ, ಸಿಡಿ, ಡಿವಿಡಿಗಳನ್ನು ಕೊಳ್ಳುವವರೇ ಜಾಸ್ತಿ. ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪನ್ನಗಳನ್ನು ಹುಡುಕುವವರೇ ಹೆಚ್ಚು.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬಳಕೆದಾರರ ಮನಸ್ಸನ್ನು ಅರಿಯಲು ಸಮೀಕ್ಷೆ ಕೈಗೊಳ್ಳಲಾಗಿದೆ. ಒಟ್ಟು 40 ನಗರಗಳಲ್ಲಿ ಹನ್ನೆರಡೂವರೆ ಸಾವಿರ ಮತ್ತು 160 ಹಳ್ಳಿಗಳಲ್ಲಿ 4 ಸಾವಿರ ಎಲ್ಲಾ ಸ್ತರದ ಇಂಟರ್ನೆಟ್ ಬಳಕೆದಾರರಿಂದ ಮಾಹಿತಿ ಸಂಗ್ರಹಿಸಲಾಗಿದೆ.

(ಒನ್‌ಇಂಡಿಯಾ ವಾರ್ತೆ)

English summary
India online is the annual syndicated research on Internet usage in India from JuxtConsult. The research offers insightful, comprehensive and up to date understanding of net usage behavior and online preferences of regular internet users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X