ಕೆ.ಪಿ.ಪೂರ್ಣಚಂದ್ರ ತೇಜಸ್ವಿಅವರಿಗೆ ಭಾವಪೂರ್ಣ ವಿದಾಯ

Subscribe to Oneindia Kannada


K P Poornachandra Tejasvi (A file photo)ಶಿವಮೊಗ್ಗ : ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಂತ್ಯಸಂಸ್ಕಾರ, ತೀರ್ಥಹಳ್ಳಿ ತ್ಲಾಲೂಕಿನ ಕುಪ್ಪಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.

ತೇಜಸ್ವಿಯವರ ತಂದೆ, ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕವಿರುವ ಕವಿಶೈಲದ ಮುಂದಿನ ಸಂದೇಶವನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತೇಜಸ್ವಿಯವರ ಪುತ್ರಿಯರಾದ ಸುಸ್ಮಿತಾ, ಈಶಾನ್ಯೆ ಅಳಿಯಂದಿರಾದ ಜ್ಞಾನೇಶ್ವರ್‌, ದೀಪಕ್‌ ಮಧ್ಯಾಹ್ನ 3.30ರ ಸುಮಾರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ತೇಜಸ್ವಿಯವರ ಪತ್ನಿ ರಾಜೇಶ್ವರಿ, ಸೋದರಿ ತಾರಿಣಿ, ಭಾವ ಚಿದಾನಂದಗೌಡ, ಸೋದರಮಾವ ರತ್ನಾಕರಗೌಡ ಸೇರಿದಂತೆ ಅನೇಕ ಬಂಧುಗಳು, ಸುತ್ತಮುತ್ತಲಿನ ಗ್ರಾಮಗಳ ಜನತೆ, ವಿವಿಧ ಕ್ಷೇತ್ರಗಳ ನಾಯಕರುಗಳು, ಅಭಿಮಾನಿಗಳು, ಮಿತ್ರರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಭಾವಪೂರ್ಣ ವಿದಾಯ ಹೇಳಿದರು.

ತೇಜಸ್ವಿಯವರಿಗೆ ಸಂಪ್ರದಾಯಗಳ ಕಟ್ಟುಪಾಡುಗಳಿರಲಿಲ್ಲ ಎಂಬ ಕಾರಣಕ್ಕೆ ಯಾವುದೇ ಸಾಂಪ್ರದಾಯಿಕ ಆಚರಣೆಗಳಿಲ್ಲದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿಗಳ ಪ್ರತಿನಿಧಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

(ಏಜನ್ಸೀಸ್‌)

Please Wait while comments are loading...