ಕನ್ನಡ ಫಲಕಕ್ಕೆ ಕೈ ಹಾಕಿದ ಎಂಇಎಸ್‌: ಖಾನಪುರ ಉದ್ರಿಕ್ತ

 
Share this on your social network:
   Facebook Twitter Google+    Comments Mail


ಬೆಳಗಾವಿ : ಎಂಇಎಸ್‌ ಕಾರ್ಯಕರ್ತರು ಕನ್ನಡ ಫಲಕಗಳನ್ನು ತೆಗೆಯಲು ಮುಂದಾದ ಕಾರಣ, ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಉದ್ರಿಕ್ತ ಸ್ಥಿತಿ ಶುಕ್ರವಾರ ನೆಲೆಸಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯ ಯುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಲವು ಯುವಕರು, ಗುರುವಾರ ಕನ್ನಡ ನಾಮಫಲಕಗಳಿಗೆ ಕೈ ಹಾಕಿದಾಗ, ಪೊಲೀಸರು ವಿರೋಧಿಸಿದರು. ಆ ಯುವಕರ ಗುಂಪು ಕಲ್ಲು ತೂರಾಟ ನಡೆಸಿದಾಗ, ಲಘು ಲಾಠಿ ಪ್ರಹಾರ ಮತ್ತು ಅಶ್ರುವಾಯು ಶೆಲ್‌ ಸಿಡಿಸಿ, ಪೊಲೀಸರು ಗುಂಪನ್ನು ಚದುರಿಸಿದರು.

ಈ ಸಂದರ್ಭದ ಗಲಭೆಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೊಲೀಸ್‌ ಜೀಪು ಮತ್ತಿತರ ಹತ್ತಾರು ವಾಹನಗಳು ಜಖಂಗೊಂಡಿವೆ.

ಎಂಇಎಸ್‌ ಎಚ್ಚರಿಕೆ : ಖಾನಾಪುರದ ಯುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ವಿಧಾನಸಭೆ ಪ್ರತಿಪಕ್ಷದ ನಾಯಕ ರಾಮದಾಸ ಕದಂ, ಮರಾಠಿಗರ ಮೇಲಿನ ದೌರ್ಜನ್ಯ ನಿಲ್ಲಬೇಕು. ಮಹಾರಾಷ್ಟ್ರದಲ್ಲೂ ಕನ್ನಡಿಗರಿದ್ದಾರೆ.. ಅವರಿಗೆ ಅಪಾಯವಾಗಬಹುದು ಎಂಬುದನ್ನು ಕನ್ನಡಿಗರು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Write a Comment

Videos