ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಗಡಲೆಯಾ? ನನಗೆರಡಿರಲಿ ಎನ್ನುವ ಕನ್ನಡ ಮನೋಧರ್ಮವು !

By Staff
|
Google Oneindia Kannada News

*ಎಸ್ಕೆ. ಶಾಮಸುಂದರ, Email : [email protected]

ಬೆಂಗಳೂರಿನಲ್ಲಿರುವ ವೃತ್ತಿಪರರಿಗೆ ಮೀಸಲಾದ ಒಂದು ಸಂಸ್ಥೆಯಲ್ಲಿ ನಡೆದ ‘ವಿಚಿತ್ರ ಆದರೆ , ಸತ್ಯ’ ಸಂಗತಿ ಇದು :

ಅದೊಂದು ಸಹಕಾರ ಸಂಸ್ಥೆ. ಸಂಘ ಸ್ಥಾಪನೆ ಉದ್ದೇಶದ ಪ್ರಕಾರ ವೃತ್ತಿ ಪರರು ಮಾತ್ರ ಅದಕ್ಕೆ ಸದಸ್ಯರಾಗಬಹುದು. ಆ ವೃತ್ತಿಯಲ್ಲಿ ತೊಡಗಿರುವವರ ಸಂಖ್ಯೆ ಸರಿಸಮಾರು 1600. ಆದರೆ ನೊಂದಾಯಿತರ ಸಂಖ್ಯೆ ಮಾತ್ರ 322 !

ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಚಲನಶೀಲರಷ್ಟೇ ಅಲ್ಲ ಪ್ರಗತಿಪರರೂ ಕೂಡ. ಅವರು ಛಲದಂಕ ಮಲ್ಲರು. ಹೇಗಾದರೂ ಮಾಡಿ potential members ನ ಹುಡುಕಿ ಮನವೊಲಿಸುವುದು ಅವರ ಗುರಿ. ಅಣ್ಣಂದಿರಾ, ಅಕ್ಕಗಳಿರಾ ದಯವಿಟ್ಟು ಸದಸ್ಯರಾಗಿ ಎಂದು ಬೇಡಿಕೊಳ್ಳುವರು. ಭಾವಿ ಸದಸ್ಯರ ಮನೆ, ಆಫೀಸಿಗೆ ಅಂಡಲೆಯುವರು. ಇದರಿಂದ ನಿಮಗೇ ಒಳ್ಳೆಯದಾಗುತ್ತದೆ ಎಲ್ಲರೂ ಸೇರಿದರೆ ಏನಾದರೂ ಸಾಧಿಸಬಹುದು, ತಿಂಗಳ ಚಂದಾ ಕೇವಲ 10 ರೂಪಾಯಿ ಎಂದು ಪರಿಪರಿಯಾಗಿ ವಿವರಿಸುವರು.

ತಿಪ್ಪರಲಾಗ ಹಾಕಿದರೂ ನಮ್ಮ ಜನ ಒಪ್ಪುತ್ತಿಲ್ಲ. ಅಯ್ಯೋ ಬಿಡ್ರಿ, ನಮಗೇನಾಗಬೇಕಾಗಿದೆ ಅದರಿಂದ ಎನ್ನುವ ಅಸಡ್ಡೆಯ ಮಾತು. ಮನರಂಜನೆ ಬೇಕಿದ್ದರೆ ಬೆಂಗಳೂರಿನಲ್ಲಿ ಏನು ಬರವಾ ? ಎಲ್ಲಿ ಬೇಕಾದರೂ ಹೋಗಬಹುದು, ಬೇಕಾದ್ದು ತಿನ್ನಬಹುದು ಎನ್ನುವ ಉದಾಸಿನ.

ಮುಂದೆ ನಿಂತು ಸಂಘದ ಕೆಲಸ ಮಾಡುವವರಿಗೆ ಏನೆನಿಸಬೇಡ. ಬಿಡ್ರೀ ನಮಗ್ಯಾಕೆ , ಊರು ದನ ಕಾದು ದೊಡ್ಡ ಬೋರೇಗೌಡ ಎನಿಸಿಕೊಳ್ಳುವ ಉಸಾಬರಿಯೇ ಬೇಡ ಅಂದುಕೊಂಡು ಕೆಲವು ಪದಾಧಿಕಾರಿಗಳು ಸುಮ್ಮನಾಗಿಬಿಟ್ಟರು. ಆದರೆ ಎಲ್ಲರೂ ಅವರಂತಲ್ಲ ವಲ್ಲ . ಅಲೆ ಇವನ ! ಕೈಯಲ್ಲಾಗಲ್ಲ ಅಂತ ಸುಮ್ಮನಿದ್ದರೆ ಕೆಲಸವಾಗುವುದಾದರೂ ಎಂತು. ಬಡ್ಡೀಮಕ್ಕಳಿಗೆ ಇವತ್ತು ಗೊತ್ತಾಗಲ್ಲ, ಇವರಿಗೆ ಏನು ಮಾಡ್ಬೇಕು ಅಂತ ಗೊತ್ತಿದೆ ತಡಿ ಅಂದವನೇ , ಕಾರ್ಯದರ್ಶಿಯೆಂಬ ಉರುಳನ್ನು ಕೊರಳಿಗೆ ಕಟ್ಟಿಕೊಂಡಿದ್ದ ತಿಮ್ಮೇಶಿ (ಹೆಸರನ್ನು ಕೊಂಚವೇ ಬದಲಾಯಿಸಲಾಗಿದೆ) ಮಾಸ್ಟರ್‌ ಪ್ಲ್ಯಾನ್‌ ಹಾಕಿದ.

ಮಾರನೇ ದಿನ ಕಛೇರಿಗೆ ಬಂದವನೇ ಒಂದು ಸುತ್ತೋಲೆ ಹೊರಡಿಸಿದ. ಹೊಸ ಪ್ಲ್ಯಾನಿನ ಅಂದಾಜು ಹೀಗಿತ್ತು.

  1. xxxx99ÄÍÜ A®ÜÌáÊÝWÜáÊÜÍÑæ ÖæÓÜÝX aÜÍÝÝÝWÜ ŸáÓÜáÊÜÊÜÄWæ PæÆÊÜ" ÄÞ;ÀáWÜÚÊæ. AÜÜÈÉ ÜÅÊÜááSÊÝÜÜá ÜávÜáx. wÓèRÍp… PævÜÇÝWÜáÊÜ"Üá. gÑæWæ ÖÜÑÜá ÊÜÐÜì PæÙÜX®Ü CŸÜá ÊÜáPÜRÚWæ Class worknote book , FREE
  2. ನಾವು ಸರಕಾರದೊಂದಿದೆ ಸಮಾಲೋಚನೆ ನಡೆಸುತ್ತಿದ್ದೇವೆ. ಸಂಘದ ಪ್ರತಿಯಾಬ್ಬ ಸದಸ್ಯರೂ ಒಂದು ನಿವೇಶನ ಹೊಂದಿರಲೇಬೇಕು ಎನ್ನುವುದು ಸಂಘದ ಕಳಕಳಿ. ಸರಕಾರ ಮನಸ್ಸು ಮಾಡಿದರೆ ನೀವು ಸುಲಭವಾಗಿ ನಿವೇಶನದ ಒಡೆಯರಾಗಬಹುದು.
  3. ಕೊನೆಯದು. ಆದರೆ ಅತೀ ಮುಖ್ಯವಾದದ್ದು ಆರೋಗ್ಯ ವಿಮೆ. ವರ್ಷಕ್ಕೆ ನೀವು ಇಂತಿಷ್ಟು ಅಂತ ಕಟ್ಟಿಬಿಟ್ಟರೆ ಮುಗಿಯಿತು. ನೀವು ಹಾಗೂ ನಿಮ್ಮ ಕುಟುಂಬದ ಎಲ್ಲ ರಿಗೆ ಆರೋಗ್ಯ, ಆಸ್ಪತ್ರೆ ಸಮಸ್ಯೆಗಳಿಗೆ ಧನ ಸಹಾಯ ಸಿಗುತ್ತದೆ.
ತಿಮ್ಮೇಶಿಯ ಲೆಕ್ಕಾಚಾರ ಫಲ ಕೊಟ್ಟಿತು. ಸದಸ್ಯರ ಸಂಖ್ಯೆ ಒಂದು ತಿಂಗಳಲ್ಲಿ 322 ರಿಂದ 744 ಕ್ಕೆ ಜಿಗಿಯಿತು.

ನಾನೇಕೆ ಇವತ್ತು ಈ ಉದಾಹರಣೆ ಕೊಡುತ್ತಿದ್ದೇನೆ ಎನ್ನುವುದು ನಿಮಗೆ ಈ ಹೊತ್ತಿಗೆ ಗೊತ್ತಾಗಿರಬಹುದು. ಸಹಕಾರ ಸಂಘವಾಗಲೀ, ನಾಗರಿಕ ವೇದಿಕೆಯಾಗಲೀ, ಕನ್ನಡ ಸಂಘ ಸಂಸ್ಥೆಯಾಗಲೀ ಸೊರಗಿ ಸಾಯುವುದಕ್ಕೆ ನಮ್ಮ ಕನ್ನಡಿಗರ ಮನೋಧರ್ಮ ಮುಖ್ಯ ಕಾರಣ. ಹದಗಡಲೆ ಎಂದರೆ ನನಗೆರಡು ಕೊಡಿ ಅಂದನಂತೆ ಎನ್ನುವುದೊಂದು ಗಾದೆ. ಅಂತೆಯೇ ನಾವು . ಏನಾದರೂ ಸಿಗತ್ತೆ ಅಂದ್ರೆ ನಾನು ಮೊದಲು ಎನ್ನುವವರು. ನನ್ನಿಂದ ಸಂಘಕ್ಕೆ ಏನು ಹೆಲ್ಪ್‌ ಆಯಿತು ಎಂಬ ಪ್ರಶ್ನೆ ಕೇಳಿಕೊಳ್ಳುವುದಕ್ಕೆ ಮರೆತವರು.

ನೀವು ಸರೀನೋ ಅಥವಾ ನಾನೇ ತಪ್ಪೋ ?

ನಾಳೆ ಮತ್ತೆ ಸಿಗುತ್ತೇನೆ

ನಮಸ್ಕಾರ

ಮುಖಪುಟ / ಲೋಕೋಭಿನ್ನರುಚಿ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X