ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪಕ್ಷಿಧಾಮಗಳ ಕಥೆ - ವ್ಯಥೆ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದ ಸುಂದರ ಪರಿಸರ ಹಾಗೂ ಹವಾಗುಣ ವಿದೇಶೀ ಪ್ರವಾಸಿಗರನ್ನಷ್ಟೇ ಅಲ್ಲದೆ, ದೇಶ ವಿದೇಶಗಳ ಹಕ್ಕಿ - ಪಕ್ಷಿಗಳನ್ನೂ ಆಕರ್ಷಿಸಿದೆ. ಪ್ರತಿವರ್ಷವೂ ದೂರದ ಊರುಗಳಿಂದ ಆಗಮಿಸುವ ನಾನಾ ಬಗೆಯ ಪಕ್ಷಿಗಳು ಕರ್ನಾಟಕದ ರಂಗನತಿಟ್ಟು, ಮಂದಗದ್ದೆ, ಕಗ್ಗಲಡು, ಧಾರವಾಡ ಬಳಿಯ ಬೇಲೂರು, ಗುಡವಿಯೇ ಮೊದಲಾದ ಪಕ್ಷಿಧಾಮಗಳಿಗೆ ಆಗಮಿಸಿ, ಸಂತಾನೋತ್ಪತ್ತಿಯ ಬಳಿಕ ತಮ್ಮ ತವರಿಗೆ ಮರಳುತ್ತವೆ.

ಪಕ್ಷಿಧಾಮಗಳ ತವರು ಎನಿಸಿರುವ ಕರ್ನಾಟಕದಲ್ಲಿ ಪ್ರಖ್ಯಾತ ರಂಗನತಿಟ್ಟೊಂದನ್ನು ಹೊರತು ಪಡಿಸಿ, ಬಹುತೇಕ ಎಲ್ಲ ಪಕ್ಷಿಧಾಮಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆಲವು ಪಕ್ಷಿಧಾಮಗಳು ಪ್ರೇಕ್ಷಕರ ಕೊರತೆಯಿಂದ ನಲುಗುತ್ತಿದ್ದರೆ, ಮತ್ತೆ ಕೆಲವು ಪಕ್ಷಿಧಾಮಗಳು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪಕ್ಷಿಗಳನ್ನು ಕೊಂದು ತಿನ್ನುವವರ ಹಾವಳಿಯೂ ಅತಿಯಾಗಿದೆ.

ಈ ಪಟ್ಟಿಯಲ್ಲಿ ಸುರಪರ ತಾಲೂಕಿನ ಬೋನ್ಹಾಳ ಕೆರೆ ಪಕ್ಷಿಧಾಮ ಹಾಗೂ ತುಮಕೂರು ಬಳಿಯ ಕಗ್ಗಲಡು ಸೇರಿದೆ. ಉತ್ತರ ಕರ್ನಾಟಕದ ರಂಗನತಿಟ್ಟು ಎಂದೇ ಖ್ಯಾತವಾಗಿರುವ ಬೋನ್ಹಾಳ ಕೆರೆ ಪಕ್ಷಿಧಾಮ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅವಸಾನದ ಅಂಚಿನಲ್ಲಿದೆ. ಹಲವು ವರ್ಷಗಳಿಂದ ದೇಶ - ವಿದೇಶಗಳ ನೂರಾರು ಪಕ್ಷಿಗಳು ಇಲ್ಲಿಗೆ ಚಳಿಗಾಲದಲ್ಲಿ ಆಗಮಿಸುತ್ತಿದ್ದವು. ಆದರೆ, ಈಗ ಕೆರೆಯೇ ಹಾಳಾಗಿದ್ದು, ಕೆಲವರು ಪಕ್ಷಿಗಳನ್ನು ಭೇಟಿ ಆಡಿ ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ.

ಪಕ್ಷಿಗಳ ಕೊಲೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಂಡೂ ಕಾಣದಂತಿದೆ. ಆದರೆ, ಬೋನ್ಹಾಳ ಗ್ರಾಮಸ್ಥರು ಈ ಪಕ್ಷಿಧಾಮ ಉಳಿಸಿಕೊಳ್ಳಲು ಹೋರಾಟವನ್ನೇ ನಡೆಸಲು ನಿರ್ಧರಿಸಿದ್ದಾರೆ. ಸಾರ್ವಜನಿಕರಲ್ಲಿ ಪಕ್ಷಿಧಾಮದ ಮಹತ್ವ ತಿಳಿಸುವ ಬಗ್ಗೆಯೂ ಕೆಲವು ಪಕ್ಷಿ ಪ್ರೇಮಿಗಳು ಮುಂದಾಗಿದ್ದಾರೆ. ಪಕ್ಷಿಗಳನ್ನು ನಾಶ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಪ್ರಾಂತದ ಈ ಪಕ್ಷಿಧಾಮವನ್ನು ಉಳಿಸಲು ಎಲ್ಲ ನಾಗರಿಕರೂ ಹೋರಾಡ ಬೇಕು ಎಂಬುದು ಗ್ರಾಮಸ್ಥರ ಅಂಬೋಣ.

ಕಗ್ಗಲಡು : ಬೊನ್ಹಾಳ ಕೆರೆ ಪಕ್ಷಿಧಾಮದ ಸ್ಥಿತಿ ಹೀಗಾದರೆ, ತುಮಕೂರು ಜಿಲ್ಲೆಯ ಶಿರಾಗೆ ಕೇವಲ 8 ಕಿ.ಮೀಟರ್‌ ದೂರದಲ್ಲಿರುವ ಕಗ್ಗಲಡುವಿನ ಕಥೆಯೇ ಬೇರೆ. ಇಲ್ಲಿ ನೀರಿಗೂ ಬರ. ನೀರಿಲ್ಲದ ಈ ತಾಣದಲ್ಲಿ ವಲಸೆ ಪಕ್ಷಿಗಳಿಗೆ ಆಹಾರವೇ ದೊರಕದ ಸ್ಥಿತಿ ಬಂದೊದಗಿದೆ. ನೀರಿನ ಬರದಿಂದ ಪಕ್ಷಿಗಳಿಗೆ ಮೀನು, ಸೀಗಡಿ, ಕಪ್ಪೆಯೇ ಮೊದಲಾದ ಜಲಚರಗಳು ದೊರಕದೆ ಈ ಪಕ್ಷಿಗಳು ದೂರದ ಕಳ್ಳಂಬೆಳ್ಳ, ಲಕ್ಷ್ಮೀ ಸಾಗರ, ಬೆಳ್ಳೂರು ಮತ್ತಿತರ ಕಡೆಗಳಿಗೆ ಆಹಾರ ಹುಡುಕಿ ಅಲೆಯುತ್ತಿವೆ.

ತಮ್ಮ ಮರಿಗಳಿಗಾಗಿ ದೂರದಿಂದ ಮೀನಿನ ಮರಿಗಳನ್ನು ಹೊತ್ತು ತರುತ್ತಿವೆ. ನೀರಿನ ಕೊರತೆಯಿಂದ ವಲಸೆ ಪಕ್ಷಿಗಳು ನಲುಗಿವೆ. ಪಕ್ಷಿಗಳನ್ನು ಕೊಂದು ತಿನ್ನುವವರ ಸಂಖ್ಯೆ ಇಲ್ಲೂ ಕಡಿಮೆ ಇಲ್ಲ. ಕಗ್ಗಲಡು ಪಕ್ಷಿಧಾಮಕ್ಕೆ ದಿನವೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲ ಮೂಲಭೂತ ಸೌಕರ್ಯದ ಕೊರತೆ. ಸರಕಾರ ಇತ್ತ ಗಮನ ಹರಿಸಲಿದ್ದರೆ, ಕಗ್ಗಲಡು ಪಕ್ಷಿಧಾಮ ಬರಿದಾಗಿ, ಬರಡಾಗುವ ಕಾಲ ದೂರವಿಲ್ಲ ಎನ್ನುವ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಿಡಿ ಮಿಡಿಗೊಳ್ಳುತ್ತಾರೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X