ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್?

By ದಿಲಾವರ್ ರಾಮದುರ್ಗ
|
Google Oneindia Kannada News

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿನಂತೆ ಊಟದ ವ್ಯವಸ್ಥೆ ಬಗ್ಗೆ ಚರ್ಚೆ ಶುರುವಾಗಿದೆ. ಕೊಡಗಿನಲ್ಲಿ ಬಹುತೇಕ ಮಾಂಸಾಹಾರಿಗಳಿರುವುದರಿಂದ ಕೊಡಗಿನ ವಿಶೇಷ 'ಪಂದಿ ಕರಿ' ಏಕೆ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ನೀಡಬಾರದು ಎಂದು ಅನೇಕರು ಪ್ರಶ್ನಿಸಿದ್ದಾರೆ. ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್?ಎಂದು ದಿಲಾವರ್ ರಾಮದುರ್ಗ ಅವರು ಪ್ರಶ್ನಿಸಿದ್ದಾರೆ. ಇದು ಅವಧಿ.ಕಾಂ ನಿಂದ ಎರವಲು ಪಡೆದ ಲೇಖನ.

ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್? ನಾನ್ ವೆಜ್ಜೀ ಗಳಿಗೆ ಸಾಹಿತ್ಯಾಭಿರುಚಿ ಇರೋದೇ ಇಲ್ಲವೆಂದೋ? ವೆಜ್ಜೀಗಳು ಮಾತ್ರ ಅಂಥ ಅಭಿರುಚಿ ಹೊಂದಿರುತ್ತಾರೆಂದೋ?

ಕುವೆಂಪು ನಾನ್ ವೆಜ್ ತಿನ್ನುತ್ತಿದ್ದರಾ? ನನಗೆ ಗೊತ್ತಿಲ್ಲ. ಕುತೂಹಲ ಅಷ್ಟೇ. ಅವರ ಪುತ್ರ ಪೂಚಂತೇ ಮಾತ್ರ ತಿನ್ನಬಹುದಾದ ಎಲ್ಲ ಮಾಂಸವನ್ನು ತಿಂದವರು ಎಂದು ಕೇಳಿದ್ದೇನೆ. ಬೇಂದ್ರೆ, ಅಡಿಗರ ಬಗ್ಗೆ ಗೊತ್ತಿಲ್ಲ. ಲಂಕೇಶ್, ಅನಂತಮೂರ್ತಿ ಬರಿಯ ವೆಜ್ಜೀಗಳಾ (?). ಮಹಾದೇವ, ಸಿದ್ದಲಿಂಗಯ್ಯ. ನಿಸಾರ್ ಅಹಮದ್, ಎಲ್. ಹನುಮಂತಯ್ಯ, ಎಸ್.ಜಿ. ಸಿದ್ದರಾಮಯ್ಯ, ಚಂಪಾ, ಬರಗೂರು, ಬಂಜಗೆರೆ, ಸುಬ್ಬು ಹೊಲೆಯಾರ್, ವಿಎಮ್ಮೆಮ್, ಕಾರ್ಪೆಂಟರ್, ಮಂಜುನಾಥ್... ಇವರೆಲ್ಲ ಬರಿಯ ವೆಜ್ಜೀಗಳಾ? ಇವರಲ್ಲಿ ಬಹುತೇಕರು ನಾನ್ ವೆಜ್ಜೀಗಳು ಅಂದುಕೊಂಡಿದ್ದೇನೆ.

Why Kannada Sahitya Sammelana's restrict Non Vegetarian food

* * *
ಬ್ರಾಹ್ಮಣ ಹೊಟೇಲುಗಳ ಪುಳಿಚಾರು ಮತ್ತು ಲಿಂಗಾಯತರ ಸಿದ್ದೇಶ್ವರ/ಬಸಪ್ಪ/ಮಹಾಲಿಂಗೇಶ್ವರ/ಬಸವೇಶ್ವರ ಖಾನಾವಳಿ ಊಟ ಜತೆಗೆ ಆಯಾ ಪ್ರದೇಶದ ಸಿಹಿ (ಉದಾ: ಹೋಳಿಗೆ, ಕಡಬು, ಕಜ್ಜಾಯ ವಗೈರೆ). ಇವಷ್ಟೇ ಸಾಹಿತ್ಯ ಜಾತ್ರೆಗಳಲ್ಲಿ ಊಟದ ಅಧಿಕೃತ ಮೆನ್ಯು.

ವಿಜಾಪುರದಲ್ಲಿ ಲಿಂಗಾಯತ ಖಾನಾವಳಿಗಿಂತ ಬಿರಿಯಾನಿ, ಕಬಾಬ್ ಊಟ ಹೆಚ್ಚು ಜನಪ್ರಿಯ. ಅಲ್ಲಿ ಬಿರಿಯಾನಿ ಏನು ಕನಿಷ್ಠ ಒಂದು ಮೊಟ್ಟೆ ಕೂಡ ಅಧಿಕೃತ ಮೆನ್ಯು ನಲ್ಲಿ ಸೇರಿಕೊಂಡಿರಲಿಲ್ಲ. ಅಲ್ಲಿನ ಮುಸಲ್ಮಾನರಿಗೇನು ಸಾಹಿತ್ಯದ ಗಂಧ ಎನ್ನುವ ತಾತ್ಸಾರವೋ? ನಾನ್ ವೆಜ್ಜೀಗಳಿಗೆ ಯಾವ ಟೇಸ್ಟ್? ಎನ್ನುವ ಉಡಾಫೆಯೋ?
* * *
ಕೊಡವ ನಾಡಿನಲ್ಲಿ ನಡೆಯಲಿರುವ ಸಾಹಿತ್ಯ ಜಾತ್ರೆಗೂ ಇದೇ ಪರಿಸ್ಥಿತಿ. ಅಲ್ಲಿನವರ ಅತ್ಯಂತ ಸಹಜ ಖಾದ್ಯ ಪೋರ್ಕ್ ಅರ್ಥಾತ್ ಹಂದಿ ಊಟ, ಬಾಡೂಟ. ಇದು ಜಾತ್ರೆಯ ಅಧಿಕೃತ ಮೆನ್ಯು ನಲ್ಲಿ ಇರದು ಅಂದುಕೊಂಡಿದ್ದೇನೆ.[ಸಮ್ಮೇಳನ ಅಧ್ಯಕ್ಷರಾಗಿ ನಾ ಡಿಸೋಜ]

ನನ್ನ ಪ್ರಮುಖ ಪ್ರಶ್ನೆ. ಊಟ ಸಂಸ್ಕೃತಿಯ ಭಾಗ ಅಲ್ಲವೇನು? ಬರಿಯ ಅಕ್ಷರಗಳು, ಪದಗಳು, ಕಾವ್ಯ, ಗದ್ಯ, ಪದ್ಯ, ಗಪದ್ಯ, ಛಂದಸ್ಸು, ಷಟ್ಪದಿ ಇದೇ ಕನ್ನಡ ಸಂಸ್ಕೃತಿಯೋ?

ಕನ್ನಡ ಸಾಹಿತ್ಯದಲ್ಲಿ ಜೈನರು, ಬ್ರಾಹ್ಮರು ಮುಂಚೂಣಿ ಪೋಷಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅವರದೇ ಊಟ, ಆಚಾರ, ವಿಚಾರ ಆಯಾ ಭಾಷೆ ಮತ್ತು ಪ್ರಾಂತದ ಅಧಿಕೃತ ಸಂಸ್ಕೃತಿಯಾಗಬೇಕೇನು? ಅಥವಾ ಸಂಸ್ಕೃತಿ ಅಂದರೇನೇ ವೆಜ್ ಸಂಸ್ಕೃತಿಯೋ?

ಬಹುಸಂಖ್ಯೆಯ ಒಕ್ಕಲಿಗರು, ಕುರುಬರು, ಬೇಡರು, ಮುಸಲ್ಮಾನರು, ಕ್ರೈಸ್ತರು, ದಲಿತರು ಇತ್ಯಾದಿ ನಾನ್ ವೆಜ್ಜೀಗಳಿರುವ ಈ ನಾಡಿನಲ್ಲಿ ಅವರ ಊಟ, ಆಚಾರ, ವಿಚಾರ ಕನ್ನಡ ಸಂಸ್ಕೃತಿಯ ಭಾಗವೇ ಅಲ್ಲವೇನು?

English summary
Kodagu Sahitya Sammelana : Why Sahithya Sammelana's restrict Non Vegetarian food. Are Non Veggies are not literature lovers? Does Veggies have better literature knowledge questions Dilawar Ramadurga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X