ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಾಕ್ಷಿ, ಸೊಂಟವೇ ವೈಕುಂಠ, ಕಾಯಕವೇ ಕೈಲಾಸ!

By ವಿದ್ಯಾಶಂಕರ್ ಹರಪನಹಳ್ಳಿ
|
Google Oneindia Kannada News

ಈ ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ 'ಸೂತ್ರ'ವಿದೆ. ಈ ಸೂತ್ರ ಎಷ್ಟು ತರ್ಕಬದ್ಧವಾಗಿದೆಯೆಂದರೆ, ಕಣ್ಮುಚ್ಚಿ ಬಾಣ ಬಿಟ್ಟರೂ ತಲುಪಬೇಕಾದ ಗಮ್ಯ ತಲುಪಿರುತ್ತದೆ. ಮೇಲೆ ನೋಡಿದ್ರಾ, ಮೋಡ ಕಪ್ಪುಹೆಪ್ಪುಗಟ್ಟಿದೆ, ಅದೋ ನೋಡಿ ಹಿತವಾದ ತಂಗಾಳಿ ಬೀಸುತ್ತಿದೆ. ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ ಬಲವಾಗಿ ಅಪ್ಪಿಕೊಳ್ಳಿ. ವೈಕುಂಠಕ್ಕೆ ತೃಪ್ತಿಪಡುತ್ತೀರೋ, ಕೈಲಾಸವೇ ವಾಸಿ ಅಂತೀರೋ, ನಿಮಗೆ ಬಿಟ್ಟಿದ್ದು. [ಓಹೋಹೋ ಗೊತ್ತಾಯ್ತು ಗೊತ್ತಾಯ್ತು ಬಿಡಿ!]

Kamasutra : Kannada poem by Vidyashankar Harapanahalli

ನಾನು ನಿನ್ನೊಳಗೆ
ನೀನು ನನ್ನೊಳಗೆ
ಬೆರೆತು ಘಮಘಮಿಸಿ
ಕರ್ಪೂರದಂತೆ ಉರಿದು
ಶೂನ್ಯವಾಗುವ ಕ್ರಿಯೆಗೆ
ಸೂತ್ರವುಂಟೆಂದರೆ
ನಂಬುವೆಯಾ?
~
ನಿನ್ನ ಧಗಧಗಿಸುವ
ಕಣ್ಣಗಳಲಿ
ಉರಿದು ಹೋಗುವ
ಪತಂಗ ನಾನು
ದಿಟ್ಟಿಸಬೇಡ!
ಕಣ್ಮುಚ್ಚಿ ಪ್ರೇಮಿಸು ಕಾಮಾಕ್ಷಿ! [ಏನ್ ಮಾಡೋದು? ಮನೆಗೆ ವಾಪಸ್ ಹೋಗ್ತೀವಿ!]
~
ದೇಹದಲ್ಲಲ್ಲ
ಮಿದುಳಿನ ಮಡತೆಯಲ್ಲಿ
ಅಡಗಿದೆಯಂತೆ ಕಾಮ
ಥೂ..!
ಎಂತಹ ಬೇಸರದ ವಿಷಯ
~
ನೀ ನುಡಿವ
ಒಲವಿನ ಸೊಲ್ಲಿಗೆ
ಆಕಾಶಕ್ಕೇರಿದರು
ಮತ್ತೆ ಬಿದ್ದಿರುವೆ
ನಿನ್ನ ಮಡಿಲಿಗೆ
ಒಪ್ಪಿಕೋ
ಎದೆಗಪ್ಪಿಕೋ
ಹಾಂ ಹಾಂ.. ಮೆಲ್ಲಗೆ
ನಾ ಆಕಾಶ ಮಲ್ಲಿಗೆ
~
ಒಲಿದಾಗ ಹಾಡು
ಎನ್ನುವವರು
ಹವ್ಯಾಸಿ ಕಲಾವಿದರು ಮಾತ್ರ
~
ಪ್ರೇಮಿಸುವುದ ಬಲ್ಲವರು
ನುಡಿಯುವವರು
ಸೊಂಟವೇ ವೈಕುಂಠ
ಕಾಯವೇ ಕೈಲಾಸ! [ನನ್ನ ಹೆಂಡ್ತಿ ಎರಡು ಗಂಟೆ ಕಿರುಚಾಡುವಂತೆ ಮಾಡಿದೆ!]

English summary
Kamasutra : Kannada poem by Vidyashankar Harapanahalli. The Kama Sutra is not intended to be used merely as an instrument for satisfying our desires.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X