ಸುರಳಿ ಸುತ್ತಿದ ಆ ಕೇಶರಾಶಿ, ಮೇನಕೆಗಿಂತ ಇವಳೇ ವಾಸಿ!

Written by: ಮಂಜುನಾಥ್ ಸಿಎಂ
Subscribe to Oneindia Kannada

ಇವಳ ರಚಿಸಿದ ರಚನೆಕಾರ
ಓ ! ಬ್ರಹ್ಮ ನಿನಗೆ ನನ್ನ ನಮಸ್ಕಾರ
ರಚಿಸಿದಿಯಾ ತುಂಬಾ ಪುರುಸೋತ್ತಿನಲ್ಲಿ
ಅದಕ್ಕೆ ಯಾವ್ದೇ ಕೊಂಕಿಲ್ಲ ಇವಳ ಚೆಲುವಿನಲಿ

ಸುರಳಿ ಸುತ್ತಿದ ಆ ಕೇಶರಾಶಿ
ಅನಿಸಿತು ಮೇನಕೆಗಿಂತ ಇವಳೇ ವಾಸಿ
ಹೇರ್ ಓಪನ್ ಬಿಟ್ಟು ಬರುತ್ತಿದ್ದರೆ
ಮರೆತೇ ಹೋಯ್ತು ಈ ಸುಖದ ಧರೆ

ಆ ಸುಂದರ ಕಮಲದಂತ ಕಂಗಳು
ಮರೆಸಿವೆ ಇರುವ ನೂರಾರು ಚಿಂತೆಗಳು
ಆ ಕಂಗಳು ಹೆಚ್ಚಿಸಿವೆ ಈಕೆಯ ಚೆಲುವು
ಆ ಕಣ್ಣಲ್ಲೇ ಕಂಡೆ ನಾ ಎಲ್ಲಾ ಗೆಲುವು

Girl - What a beautiful creation by Brahma

ಆ ಸಂಪಿಗೆಗಿಂತ ಸುಂದರ ಈ ನಾಸಿಕ
ಇವಳ ಅರಾಧಿಸುವುದೇ ನನಗಾಗಿದೆ ಕಾಯಕ
ಹೇಗೆ ವರ್ಣಿಸಲಿ ಆ ನೀಳ ನಾಸಿಕ
ಪದಗಳಿಲ್ಲದೆ ನಾನದೆ ಮೂಕ

ಆ ತೊಂಡೆಯಂತ ತುಟಿಗಳು
ಇವಳ ಅಂದವ ಹೆಚ್ಚಿಸಿವೆ ಹಗಲು ಇರಳು
ಮಾತಾನಾಡುವಾಗ ಆ ತುಟಿಗಳ ನರ್ತನ
ನೋಡುತ್ತಾ ಮರೆತೇ ಈ ಜಗವ ನಾ

ಆ ಕೆನ್ನೆಗಳ ನುಣುಪು
ಹೆಚ್ಚಿಸಿದೆ ಈಕೆಯ ಹೊಳಪು
ಕೆನ್ನೆಯ ಗಿಂಡಲು ಹೋದ ಕೈಗಳು
ಸುಮ್ಮನಾಯ್ತು ಮೂಡಿ ನೋವಬಹುದೆಂಬ ದಿಗಿಲು

ಈ ಹಲ್ಗಳ ಮುಂದೆ ಯಾವ ಲೆಕ್ಕ ದಾಳಿಂಬೆ
ಇವಳೇ ನಾ ಕಂಡ ಚಂದನಂದ ಗೊಂಬೆ
ಎಷ್ಟು ನೀಟಾಗಿ ಜೋಡಿಸಲ್ಪಟ್ಟಿವೆ
ನೋಡುತ್ತಾ ನಿಂತವಗೆ ಇಲ್ಲ ಬೇರೆ ಗೊಡವೆ

ಇವಳ ಅತ್ಯದ್ಭುತ ಗಲ್ಲ
ಅದ ಮುಟ್ಟುವನಾರೋ? ಯಾರು ಬಲ್ಲ
ಆ ಗಲ್ಲ ನೋಡುವುದೊಂದು ಭಾಗ್ಯ
ನೋಡಲು ನಾ ಪೂರ್ವದಲ್ಲಿ ಮಾಡಿದ್ದೆ ಪುಣ್ಯ

ಆ ಸುಂದರ ಜಿಂಕೆಯಂತ ಕತ್ತು
ನೋಡುತಾ ಮರೆತೇ ನಾ ತಿನ್ನಲು ತುತ್ತು
ಆ ಸುಂದರ ಮೊಗವ ಹಿಡಿದ ಕೊರಳು
ಮಾಡಲು ಸಹಕರಿಸಿದೆ ಇವಳ ಅಪ್ರತಿಮಳು

ಮುಂದೆ ಏನಾದರು ಹೇಳಿದರೆ
ನಾ ಕೊಲೆ ಆಗುತ್ತೇನೆ ಖರೆ
ಇಲ್ಲೇ ನಿಲ್ಲಿಸಲು ಮನಸಿಲ್ಲ
ಆದರೆ ನಿಲ್ಲಿಸದೇ ಬೇರೆ ವಿಧಿಯಿಲ್ಲ

English summary
Kannada poem by Manjunath CM on girl, beautiful creation by lord Brahma.
Please Wait while comments are loading...