ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಯವಾದ ಮಾತಿಗೆ ಬಗ್ಗದ ಪೊಲೀಸರು ಕವನಕ್ಕೆ ಬಗ್ಗುವರೆ?

By ಎನ್ಎಸ್ ಮೇಘರಿಕ್, ಪೊಲೀಸ್ ಆಯುಕ್ತ, ಬೆಂಗಳೂರು
|
Google Oneindia Kannada News

ಖಾಕಿ ತೊಟ್ಟು ಲಾಠಿ ಹಿಡಿವ ಕೈ ಲೇಖನಿಯನ್ನೂ ಹಿಡಿಯಬಲ್ಲದು. ಕಾನೂನು ಸುವ್ಯವಸ್ಥೆ ಕಾಪಾಡಬಲ್ಲ ಕಟು ಹೃದಯದ ನಡುವೆ ಸೃಜನಶೀಲತೆಯೂ ಗುಬ್ಬಚ್ಚಿಯಂತೆ ಬೆಚ್ಚಗೆ ಕೂತಿರುತ್ತದೆ. ಇದಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಎನ್ಎಸ್ ಮೇಘರಿಕ್ ಅವರ ಹೃದಯಕ್ಕೆ ನಾಟುವ ಈ ಕವನವೇ ಸಾಕ್ಷಿ. ಪೊಲೀಸ್ ಬಂಧುಗಳೇ ಮುಷ್ಕರ ಹೂಡಬೇಡಿ, ಅಶಿಸ್ತು ತೋರಬೇಡಿ ಎಂದು ಸಂದೇಶ ನೀಡಿದ್ದಾರೆ. ಮುಷ್ಕರ ನಿರತ ಪೊಲೀಸರಿಗೆ ಈ ಕೂಗು ಕೇಳುವುದಾ?

Dear police, please don't spoil your name and fame

ದೇಗುಲಕ್ಕೊಂದು ದೇವರು

ಸಮವಸ್ತ್ರಕ್ಕೆ ಶಿಸ್ತೇ ಉಸಿರು!
ಶಿಸ್ತಿಗೆ ಮತ್ತೊಂದು ಹೆಸರೇ ಪೊಲೀಸರು!
ಅವರ ಒಗ್ಗಟ್ಟು ಒಡೆದು ಕೆಡಿಸದಿರಿ ಹೆಸರು!
ಶಿಸ್ತೇ ಅವರ ಉಸಿರು! [ಪ್ರತಿಭಟನೆಗೆ ಮುಂದಾಗಿರುವ ಪೊಲೀಸರಿಂದ ಬಲವಂತದ ಮುಚ್ಚಳಿಕೆ?]

ಪೋಲಿಸ ಬಂಧುಗಳೇ,
ಶಿಸ್ತಿಗೆ ತೋರಿದರೆ ಅಸಹಕಾರ!
ಕಳೆದುಕೊಳ್ಳುತ್ತಿರಿ ಸಾರ್ವಜನಿಕರ ಮಮಕಾರ! [ಮರೆಯಲಾದಿತೇ ಪೊಲೀಸಪ್ಪನವರ ಜೊತೆಗಿನ ನನ್ನ ಒಡನಾಟ?]

ಪೋಲಿಸ ಬಂಧುಗಳೇ,
ಪೋಲೀಸರ ಮುಷ್ಕರ!
ಗಂಭೀರವಾಗಿ ಪರಿಗಣಿಸಿದೆ ಸರ್ಕಾರ!
ಮೊದಲು ಶಿಸ್ತು ಪಾಲನೆ!
ನಂತರವಷ್ಟೇ ನಿವೇದನೆ..! [ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು]

ಪೋಲಿಸ ಬಂಧುಗಳೇ,
ಸಮವಸ್ತ್ರ ತೊಟ್ಟವರಿಗಷ್ಟೇ ಗೊತ್ತು ಅದರ ಬೆಲೆ!
ಸಮವಸ್ತ್ರ ಬಿಚ್ಚಿದರೆ ನಮಗಿಲ್ಲ ನೆಲೆ!
ಪ್ರಚೋದನೆಗೆ ಯಾಕಾಗಬೇಕು ಶಿಸ್ತಿನ ಕೊಲೆ? [ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

ಶಿಸ್ತಿಗೆ ಮತ್ತೊಂದು ಹೆಸರೇ ಪೊಲೀಸರು!
ಅವರ ಒಗ್ಗಟ್ಟು ಒಡೆದು ಕೆಡಿಸದಿರಿ ಹೆಸರು!
ಶಿಸ್ತೇ ಅವರ ಉಸಿರು!

English summary
Bengaluru police, please don't spoil your name and fame. A Kannada poem by Bangalore Police Commission N.S. Megharakh. He has requested the police who are resorting to protest for their demand to drop their protest for the sake of dignity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X