ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕಾಡೆಮಿ ಪುರಸ್ಕೃತ ಕರ್ನಾಟಕ ಹೆಮ್ಮೆಯ ಕಲಾವಿದೆಯರು

By ಅಶ್ವಿನಿ ಸತೀಶ್, ಸಿಂಗಪುರ
|
Google Oneindia Kannada News

ಮದ್ರಾಸ್ ಮ್ಯೂಸಿಕ್ ಅಕಾಡೆಮಿ ದಕ್ಷಿಣ ಭಾರತದ ಬಹು ಪ್ರತಿಷ್ಠಿತ ಹಾಗು ಪ್ರಾಚೀನವಾದ ಸಂಗೀತಸಭೆಗಳಲ್ಲಿ ಒಂದು. 1927ರಿಂದಲೂ ಪ್ರತಿವರ್ಷ ಪ್ರತಿಭಾನ್ವಿತ ಹಾಗು ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಅಸಾಧಾರಣ ಕಲಾವಿದರಿಗೆ ಬಿರುದುಗಳನ್ನೂ ನೀಡಿ ಗೌರವಿಸುತ್ತ ಬಂದಿರುವ ಒಂದು ಅಪೂರ್ವ ಸಂಸ್ಥೆ.

ಅಕಾಡೆಮಿಯು ನೀಡುವ "ಸಂಗೀತ ಕಲಾನಿಧಿ" ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅತಿ ಉನ್ನತವಾದ ಬಿರುದು. ಕ್ಷೇತ್ರದ ಹಲವು ಖ್ಯಾತ ಹಾಗು ಹಿರಿಯ ಕಲಾವಿದರು ಈವರಗೆ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ಪಟ್ಟಿಯಲ್ಲಿ ಹರಿಕೇಶ ನೆಲ್ಲೂರ್ ಮುತ್ತಯ್ಯ ಭಾಗವತರು, ಟೈಗರ್ ವರದಾಚಾರ್ಯರು, ಡಾ. ದೊರೆಸ್ವಾಮಿ ಅಯ್ಯ೦ಗಾರ್, ಪದ್ಮಭೂಷಣ ಆರ್. ಕೆ. ಶ್ರೀಕಂಠನ್ ಅವರಂಥವರು ಇರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಈ ವರ್ಷದ ಸಂಗೀತ ಕಲಾನಿಧಿ ಪುರಸ್ಕಾರ ಖ್ಯಾತ ಚಿತ್ರವೀಣಾ ಕಲಾವಿದ ಎನ್. ರವಿಕಿರಣ್ ಅವರಿಗೆ ಸಲ್ಲುತ್ತಿದೆ.

Madras music academy awards to Karnataka artists

ಸಂಗೀತದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿರುವ ಅಪ್ರತಿಮ ಕಲಾವಿದರುಗಳನ್ನು ಗುರುತಿಸಿ ಇನ್ನಿತರ ಬಿರುದುಗಳನ್ನೂಈ ಸಂದರ್ಭದಲ್ಲಿ ನೀಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಹಾಗು ಸಂಗೀತಾಭಿಮಾನಿಯಾಗಿದ್ದ ಟಿ.ಟಿ. ಕೃಷ್ಣಮಾಚಾರಿ ಅವರ ಹೆಸರಿನಲ್ಲಿ ನೀಡುವ ಟಿಟಿಕೆ ಪ್ರಶಸ್ತಿಯು ಘಟಂ ವಾದಕಿ, ಅಪರೂಪದ ಕಲಾವಿದೆ ವಿದುಷಿ ಸುಕನ್ಯಾ ರಾಂಗೋಪಾಲ್ ಅವರಿಗೆ ಈ ಬಾರಿ ದೊರಕಲಿದೆ.

Madras music academy awards to Karnataka artists

ಸಂಗೀತಜ್ಞರಿಗೆ ನೀಡುವ ಮ್ಯುಸಿಕಾಲಜಿಸ್ಟ್ ಪ್ರಶಸ್ತಿಯು ಲಕ್ಷ್ಯ -ಲಕ್ಷಣಗಳೆರಡರಲ್ಲಿಯೂ ಪ್ರಾವೀಣ್ಯತೆಯನ್ನು ಸಾಧಿಸಿರುವ ಡಾ . ಟಿ. ಎಸ್. ಸತ್ಯವತಿ ಅವರಗೆ ಸೇರಲಿದೆ. ಈ ಈರ್ವರು ಮಹಿಳಾ ಪುರಸ್ಕೃತರು ನಮ್ಮ ರಾಜ್ಯದವರು ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಇವರಿಬ್ಬರ ಸಾಧನೆಗಳ ಬಗೆಗಿನ ಸ್ಥೂಲ ಪರಿಚಯ ಈ ಲೇಖನ.

English summary
Madras Music Academy awards to Karnataka classical singer Dr T.S. Sathyavathi and ghatam player Sukanya Ramgopal. Both are from Karnataka. Madras Music Academy is one of the earliest established music academies in South India. A write up on awardees by Ashwini Satish, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X