ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅನಕ್ಷರತೆಯಂತೆ ತರ್ಕ ಹೀನತೆಯೂ ರೋಗಿಷ್ಠ ಅವಸ್ಥೆ....'

By ಸ್ವಾತಿ
|
Google Oneindia Kannada News

ನಟರಾಜ ಬೂದಾಳು ಅವರ 'ನಾಗಾರ್ಜುನನ ನುಡಿ ಕತೆಗಳು' ಪುಸ್ತಕದ ಪೀಠಿಕಾ ಭಾಗದ ಸಾಲು ಇದು.

ಈ ಪುಸ್ತಕದಲ್ಲಿ ಒಟ್ಟು 24 ಪುಟಾಣಿ ಕಥೆಗಳಿವೆ. ಎಲ್ಲ ಕಥೆಗಳನ್ನೂ ನಿನ್ನೆ ಒಂದೇ ಬಾರಿಗೆ ಓದಿದೆ. ಹಾರುವ ಕುದುರೆ, ಮಾತನಾಡುವ ಆಮೆ, ಮೋಸ ಮಾಡುವ ಬೆಕ್ಕು, ಮಾತು ತಪ್ಪುವ ಗೂಬೆ, ಸಮುದ್ರಾದಾಚೆಯ ಸುಂದರಿಯರು... ಯಾರಿಗೆ ಇಷ್ಟವಾಗಲ್ಲ ಹೇಳಿ?

ತಿಳಿಗೇಡಿ ಹೆಂಗಸು ಮತ್ತು ನರಿಯ ಕತೆ, ಕಲಂದಕನೆಂಬ ಪಕ್ಷಿಯ ಕತೆ, ಕೂರೆಗಳು ಮತ್ತು ಯೋಗಿಯ ಕತೆ, ಜಗಳಗಂಟ ಕೋತಿ ಮತ್ತು ಹಕ್ಕಿಯ ಕತೆ...ಹೀಗೆ ಒಂದಕ್ಕಿಂತ ಒಂದು ಚಂದದ ಕತೆಗಳು ಪುಸ್ತಕದಲ್ಲಿವೆ.[ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು]

'Nagarjunana nudi kathegalu' best book gift for all age groups

ಮೇಲ್ನೋಟಕ್ಕೆ ಅತಿ ಸರಳ ಎನಿಸುವ ಈ ಕತೆಗಳಲ್ಲಿ ಜಿಜ್ಞಾಸುಗಳು ಬಯಸುವ ತತ್ವಶಾಸ್ತ್ರ, ಪುಟಪುಟದಲ್ಲೂ ಸುಭಾಷಿತಗಳ ಸಾರ, ಲೌಕಿಕರಿಗೆ ಬೇಕಾದ ಮ್ಯಾನೇಜ್ಮೆಂಟ್ ತತ್ವ, ವ್ಯಕ್ತಿತ್ವ ವಿಕಸನದ ಸೂತ್ರಗಳು ಮಿಳಿತಗೊಂಡಿವೆ. ಪಾಂಡಿತ್ಯದ ಭಾರವಿಲ್ಲದ ಸರಳ ನಿರೂಪಣೆ ಬೂದಾಳು ಅವರ ದೇಸಿ ಕಸುವಿಗೆ ಸಾಕ್ಷಿ.[ಬೊಳುವಾರು ಮಹಮ್ಮದ್ ಕುಂಞ ಅವರ 'ಓದಿರಿ' ವಿಮರ್ಶೆ]

ಬೌದ್ಧ ಧರ್ಮದ ತಿರುಳು ಅರಿಯಲು ಇಚ್ಛಿಸುವವರಿಗೆ ಇದು ಉತ್ತಮ ಪ್ರವೇಶ ಆಗಬಲ್ಲದು. ಕತೆ ಹೇಳೆಂದು ಪೀಡಿಸುವ ಮಕ್ಕಳಿರುವ ಮನೆಗಳಿಗೆ ಖಂಡಿತಾ ಸೂಕ್ತ. ನನ್ನ ಪ್ರಕಾರ ಹುಟ್ಟುಹಬ್ಬದ ಸಂದರ್ಭ ಯಾವುದೇ ವಯಸ್ಸಿನವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್ ಈ ಪುಸ್ತಕ.[ಕನ್ನಡ ಕಲಿತು ಕುಮಾರವ್ಯಾಸ ಭಾರತ ಮರಾಠಿಗೆ ಅನುವಾದಿಸಿದ ಪ್ರೊಫೆಸರ್]

ಪುಸ್ತಕ: ನಾಗಾರ್ಜುನನ ನುಡಿಕತೆಗಳು, ಲೇಖಕರು: ಎಸ್.ನಟರಾಜ ಬೂದಾಳು (9844387175), ಪ್ರಕಾಶಕರು: ಉಜ್ಜಜ್ಜಿ ರಾಜಣ್ಣ (9448747360), ಬೆಲೆ: 120. ಪುಟಗಳು: 80+25.

English summary
'Nagarjunana nudi kathegalu' book written by S.Nataraja budal, reviewed by swathi. It suits for all age groups, childrens definitely enjoy these stories, said by her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X