ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ದಿನ ಬಂದ್ ಬೇಕೆಂದು ಬಯಸುವರು ಇದ್ದಾರೆ!

|
Google Oneindia Kannada News

ಬೆಂಗಳೂರು, ಏ. 18: ಜಯನಗರದಿಂದ -ಮೆಜೆಸ್ಟಿಕ್ ಗೆ ತೆರಳಲು ಎಷ್ಟು ಸಮಯ ಬೇಕು? ಇದಕ್ಕೆ ಉತ್ತರ ಹೇಳುವುದು ಕಷ್ಟ. ಆದರೆ ಒಂದು ಗಂಟೆ ಕಡಿಮೆ ಅಂತೂ ಸಾಧ್ಯವಿಲ್ಲ.

ಆದರೆ ಶನಿವಾರದ ಮಟ್ಟಿಗೆ ಜಯನಗರದಿಂದ ಮೆಜೆಸ್ಟಿಕ್ ಗೆ ದ್ವಿಚಕ್ರ ವಾಹನದಲ್ಲಿ ತೆರಳಲು ಕೇವಲ 15 ನಿಮಿಷ ಸಾಕು. ಪ್ರತಿದಿನವೂ ಹೀಗೆ ಇದ್ದರೆ ಚೆನ್ನ ಎಂದು ಒಂದು ಕ್ಷಣ ಅನ್ನಿಸಿದ್ದು ಸುಳ್ಳಲ್ಲ. ಟ್ರಾಫಿಕ್ ಕಿರಿಕಿರಿಯಿಲ್ಲ, ಹಾರ್ನ್ ಗಳ ಅರಚಾಟವಿಲ್ಲ, ಎಲ್ಲಿ ಜನರು ಅಡ್ಡ ಬಂದು ಬಿಡ್ತಾರೋ ಎಂಬ ಭಯವಿಲ್ಲ.[ಕರ್ನಾಟಕ ಬಂದ್: ಬೆಂಗಳೂರಲ್ಲಿ ಏನೇನಾಯ್ತು?]

karnataka

ಶನಿವಾರದ ಕರ್ನಾಟಕ ಬಂದ್ ಪರಿಣಾಮ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಅಲ್ಲಲ್ಲಿ ಕೆಲ ಅಂಗಡಿಗಳು ಬಾಗಿಲು ತೆಗೆದುಕೊಂಡಿದ್ದವು. ಆದರೆ ಬ್ಯಾಚುಲರ್ ಗಳ ಹೊಟ್ಟೆಪಾಡು? ಇದು ಸಮಸ್ಯೆಯೇ ! ಪ್ರತಿದಿನ ಹತ್ತಿರದ ಹೊಟೆಲ್ ಗೆ ಹೋಗಿ ತಿಂದು ಬರುತ್ತಿದ್ದವರಿಗೆ ಶನಿವಾರ ಬಾಗಿಲು ದರ್ಶನ. ಮನೆಯಲ್ಲಿ ಮಾಡಲು ಅಡುಗೆ ಸಾಮಗ್ರಿಗಳಲಿಲ್ಲ. (ಚೆನ್ನಾಗಿ ಮಾಡಲು ಬರಲ್ಲ ಎಂಬ ಆಪಾದನೆಯೂ ಇದೆ)

ಕೊನೆಯಲ್ಲಿ ಸಿಕ್ಕಿದ್ದು ಪುಳಿಯೊಗರೆ ಪೌಡರ್ , ಆದರೆ ಉಳಿದ ಸಾಮಗ್ರಿ ಇಲ್ಲ. ಅಂತಿಮವಾಗಿ ಅನ್ನ ವನ್ನು ಹೇಗೋ ಬೇಯಿಸಿಕೊಂಡು, ಅದಕ್ಕೆ ಪುಳಿಯೊಗರೆ ಪೌಡರ್ ಮತ್ತು ಮೊಸರು ಕಲಸಿಕೊಂಡು ತಿಂದಿದ್ದೇ ಮಷ್ಟಾನ್ನ ಭೋಜನ.

ಕಚೇರಿಗೆ ತೆರಳಿದ್ದ ಪತ್ರಕರ್ತರು ಮಧ್ಯಾಹ್ನದ ಊಟಕ್ಕೆ ತಾಪತ್ರಯ ತಂದುಕೊಂಡರು. ದಿನಾ ಊಟ ಮಾಡುವ ಹೊಟೆಲ್ ಗೆ ಬಾಗಿಲು. ಯಾವುದನ್ನು ರಸ್ತೆ ಬದಿ ತಿಂಡಿ ಎಂದು ಅಲ್ಲಗಳೆಯುತ್ತಿದ್ದರೋ ಅವರು ಇವತ್ತು ಅದನ್ನೇ ಚಪ್ಪರಿಸಬೇಕಾಯಿತು.[ಶನಿವಾರದ ಕರ್ನಾಟಕ ಬಂದ್ ಮುಖ್ಯಾಂಶಗಳು]

ಬಂದ್, 144 ಸೆಕ್ಷನ್ ಜಾರಿ ವೇಳೆ ಹೊರಕ್ಕೆ ಬೀಳಲು ಜನ ಭಯ ಬಿದ್ದೇ ಬೀಳುತ್ತಾರೆ. ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸರು ಅನಿವಾರ್ಯವಾಗಿ ಎಲ್ಲರ ವಿಚಾರಣೆಯನ್ನು ನಡೆಸುತ್ತಾರೆ. ಆದರೆ ಶನಿವಾರದ ಬಂದ್ ಶಾಂತಿಯುತವಾಗಿತ್ತು. ಅರ್ಧ ಜನರು ವೀಕೆಂಡ್ ಅಂಥ ಎದ್ದಿದ್ದೇ ಅರ್ಧ ದಿನ ಆದ ಮೇಲೆ. ಅಂತೂ ಇಂತು ಎಲ್ಲೋ ಒಂದು ಊಟ ಮುಗಿಸಿ ಮಧ್ಯಾಹ್ನದ ಐಪಿಎಲ್ ಪಂದ್ಯ ನೋಡಲು ಕುಳಿತುಕೊಂಡರೆ ಹೊರಗಡೆ ಏನಾಗಿದೆ ಎಂಬುದು ಯಾರಿಗೆ ತಾನೆ ಬೇಕು?

ಬಂದ್ ಮುಗೀತು ಎಂದ್ರೆ ಹೌದಾ ಶುರುವಾಗಿದ್ದು ಯಾವಾಗ? ಎಂದು ಕೇಳಿದವರಿಗೂ ಕೊರತೆಯಿಲ್ಲ. ಬಸ್ ಇಲ್ಲದೇ ಬವಣೆಪಟ್ಟವರಿಗೆ. ಸ್ವಂತ ವಾಹನವಿಲ್ಲದೇ ನಡೆದುಕೊಂಡು ಬಂದವರಿಗೆ ಮಾತ್ರ ಬಂದ್ ಬಿಸಿ ತಟ್ಟಿತ್ತು. ದಿನದ ವ್ಯಾಪಾರ ಕಳೆದುಕೊಂಡವರು ಒಳಗೊಳಗೆ ಬೈದುಕೊಂಡಿದ್ದು ಕೇಳಲಿಲ್ಲ.

ಬಂದ್, ಇವತ್ತು ಖಾಕಿ ಕಾಟವಿಲ್ಲ ಎಂದು ಹೆಲ್ಮೆಟ್ ಧರಿಸದೇ, ಸಿಗ್ನಲ್ ಜಂಪ್ ಮಾಡಿದವರು ದಂಡವನ್ನು ಕಟ್ಟಿದರು. ಏನೇ ಇರಲಿ ಇಂಥ ಬಂದ್ ಗಳು ಆಗಾಗ ಒಂದು ಆಗ್ತಾ ಇರಬೇಕು ಅಂಥ ಪೊಲೀಸರು 'ತಮ್ಮೊಳಗೆ' ಹೇಳಿಕೊಂಡರು.

ಕನ್ನಡ ಎಂದು ಕೂಗಾಡೋರು ಎಲ್ಲಿ ಹೋದ್ರಪ್ಪಾ?
ಇಂಥದ್ದೊಂದು ಮಾತುಗಳು ಟೌನ್ ಹಾಲ್ ಮೆರವಣಿಗೆಯನ್ನು ಬದಿಯಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದವರ ಬಾಯಿಂದ ಬಂತು. ಡಬ್ಬಿಂಗ್ ಎಂದಾಗ, ಮತ್ತೇನೋ ಆದಾಗ ಗುಡುಗಾಡುವ ನಟ ಮಹಾಶಯರು ಎಲ್ಲಿ? ಆಹಾರ ಸಂಸ್ಕೃತಿ ಕಾಪಾಡುತ್ತೇವೆ ಎಂದು ಬೊಬ್ಬಿಡುವ ಸಾಹಿತಿಗಳು ಎಲ್ಲಿ? ಶಿವರಾಜ್ ಕುಮಾರ್ ಮೈಸೂರಿನಲ್ಲಿ ಮಾತನಾಡಿದರೆ, ಜಗ್ಗೇಶ್, ಪ್ರೇಮ್, ಪುನೀತ್ ಜತೆ ಹಿರಿಯರಾದ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ ಹೋರಾಟದಲ್ಲಿ ಕಾಣಿಸಿಕೊಂಡರೇ ಉಳಿದವರು ನಾಪತ್ತೆ.

ಮೈಸೂರು, ಮಂಡ್ಯ, ಶ್ರಿರಂಗಪಟ್ಟಣ ರಶ್ಶೋ ರಶ್ಯು
ಬೆಂಗಳೂರಿನಲ್ಲಿ ಅನಧಿಕೃತ ರಜೆ. ಪರಿಣಾಮ, ಮೈಸೂರು, ಶ್ರೀರಂಗಪಟ್ಟಣ ಕಡೆಗೆ ಕುಟುಂಬ ಸಮೇತ ಒಂದು ದಿನದ ಪ್ರವಾಸ ಕ್ಕೆ ಹೋದವರೂ ಇನ್ನು ಅಲ್ಲೇಲ್ಲೋ ಪಕ್ಕದ ಡಾಬಾದದಲ್ಲಿ ತಿಂಡಿ ತಿನ್ನುತ್ತಿದ್ದಾರೆ. ವಾಟಾಳ್ ನಾಗರಾಜ್, ಸಾರಾ ಗೋವಿಂದು ಬಿಟ್ಟರೆ ಉಳಿದ ಸಂಘಟನೆಗಳ ಹುರಿಯಾಳುಗಳಿಗಳ ಅಡ್ರೆಸ್ ಇರಲಿಲ್ಲ.

ಅಯ್ಯೋ.. ಬೀಡ್ರಪ್ಪಾ ಯಾರ್ ಆದ್ರೂ ಬಂದ್ ಮಾಡ್ಕಳ್ಳಿ, ಏನಾದ್ರೂ ಮಾಡ್ಕಳ್ಳಿ, ಇವತ್ತೊಂದಿನ ಪುಕ್ಕಟೆ ರಜೆ ಸಿಕ್ತಲ್ಲಾ.. ಎನ್ನುತ್ತಾ ಮೈ ಮೇಲೆ ಹೊದ್ದ ಚಾದರವನ್ನು ಕೆಳಕ್ಕೆ ಬಿಸಾಡಿ ಸಂಜೆ ಶಾಪಿಂಗ್ ಗೆ ರೆಡಿಯಾದವ ಕತ್ರಿಗುಪ್ಪೆಯಲ್ಲಿ ಆಕಳಿಸಿದ್ದು ಪಕ್ಕದ ಮನೆಯವರಿಗೂ ಸರಿಯಾಗೇ ಕೇಳಿತ್ತು!

English summary
Various Kannada organizations under the banner of 'Kannada Okkuta', have called for a Karnataka bandh on Saturday regarding Mekedatu Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X