ಪೂರ್ಣಚಂದ್ರ ತೇಜಸ್ವಿ (08.09.1938 -- 05.04.2007)

Subscribe to Oneindia Kannada


ಹೆಸರು : ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ

ಜನ್ಮ ದಿನಾಂಕ : ಸೆ.8.1938

ಜನ್ಮ ಸ್ಥಳ : ಕುಪ್ಪಳ್ಳಿ, ಶಿವಮೊಗ್ಗ ಜಿಲ್ಲೆ.

ವೃತ್ತಿ : ಬರಹಗಾರ, ಕಾದಂಬರಿಗಾರ, ಕೃಷಿಕ, ಪರಿಸರ ಪ್ರೇಮಿ, ವಿಜ್ಞಾನಿ, ಸಂಶೋಧಕ ಇತ್ಯಾದಿ ಇತ್ಯಾದಿ.
ಸಾಹಿತ್ಯ ಸಂದರ್ಭ : ನವೋದಯ ಕಾಲ

ಓದುಗರಿಗೆ ನೀಡಿದ್ದು : ಬೆರಗು, ಹೊಸ ಲೋಕ, ಹೊಸ ವಿಚಾರ, ಹೊಸ ಅನುಭವ.

ವೈಶಿಷ್ಟ್ಯತೆ : ತನ್ನ ಅಪ್ಪ ಕುವೆಂಪು ಛಾಯೆಯಿಂದ ಹೊರಬಂದದ್ದು... ತಮ್ಮದೇ ವ್ಯಕ್ತಿತ್ವ ಕಟ್ಟಿಕೊಂಡದ್ದು.

ವಿದ್ಯಾಭ್ಯಾಸ : ಮಹಾರಾಜ ಕಾಲೇಜು, ಮೈಸೂರು. ಓದು ಮುಗಿದ ಮೇಲೆ ಚಿಕ್ಕಮಗಳೂರಿಗೆ ಪಯಣ. ಕಾಫಿ ತೋಟದಲ್ಲಿ ಲೀನ. ತಲ್ಲೀನ.

ಹವ್ಯಾಸ : ಪರಿಸರದೊಂಡಿಗೆ ಒಡನಾಟ, ಪೆಯಿಂಟಿಂಗ್‌,ಪೋಟೋಗ್ರಫಿ, ಫಿಲಾಸಫಿ, ಬರವಣಿಗೆ, ಪ್ರಚಲಿತ ಘಟನೆಗಳಿಗೆ ಪ್ರತಿಸ್ಪಂದನ ಇತ್ಯಾದಿ.

ಬರೆದದ್ದು : ಪದ್ಯ, ಕತೆ, ಕಾದಂಬರಿ, ಪ್ರವಾಸ ಕಥನ, ನಾಟಕ, ಸೈನ್ಸ್‌ ಫಿಕ್ಷನ್‌ ಸಾಹಿತ್ಯ, ಪರಿಸರ ಇತ್ಯಾದಿ.

ಕುವೆಂಪು ಬಗ್ಗೆ ಬರೆದದ್ದು : ಅಣ್ಣನ ನೆನಪು

ಪ್ರಶಸ್ತಿಗಳು : ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1987), ಪಂಪ ಪ್ರಶಸ್ತಿ (2001), ರಾಜ್ಯೋತ್ಸವ ಪ್ರಶಸ್ತಿ

ಕವನ ಸಂಕಲನ : ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು, ಬೃಹನ್ನಳೆ

ಕಾದಂಬರಿ : ಮಾಯಾಲೋಕ, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಕರ್ವಾಲೋ, ಅಣ್ಣನ ನೆನಪು, ಜುಗಾರಿ ಕ್ರಾಸ್‌, ಸ್ವರೂಪ, ನಿಗೂಢ ಮನುಷ್ಯರು.

ಕಥಾ ಸಂಕಲನ : ಪರಿಸರದ ಕತೆ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸ್‌, ತಬರನ ಕತೆ, ಕಿರಗೂರಿನ ಗಯ್ಯಾಳಿಗಳು, ಕಾಡಿನ ಕತೆಗಳು(ಭಾಗ 1 ಮತ್ತು 2)

ವಿಜ್ಞಾನ ಮತ್ತು ಪರಿಸರ ಬರಹ : ಮಿಸ್ಸಿಂಗ್‌ ಲಿಂಕ್‌, ದಿ ಗ್ರೇಟ್‌ ಎಸ್ಕೇಪ್‌ , ಪೆಪಿಲ್ಲಾನ್‌, ಹಕ್ಕಿ ಪುಕ್ಕ, ದಕ್ಷಿಣ ಭಾರತದ ಹಕ್ಕಿಗಳು, ವಿಸ್ಮಯ(ಭಾಗ 1ಮತ್ತು 2), ಫ್ಲೇಯಿಂಗ್‌ ಸಾಸರ್ಸ್‌(ಭಾಗ 1ಮತ್ತು 2), ಹೆಜ್ಜೆ ಮೂಡದ ಹಾದಿ, ಸಹಜ ಕೃಷಿ, ಮಿಲೇನಿಯಂ ಸೀರೀಸ್‌.

ಸಿನಿಮಾಗಳಾದ ಕಾದಂಬರಿಗಳು : ಅಬಚೂರಿನ ಪೋಸ್ಟ್‌ ಆಫೀಸ್‌ , ತಬರನ ಕತೆ, ಕುಬಿ ಮತ್ತು ಇಯಾಲ, ಕೃಷ್ಮೇಗೌಡನ ಆನೆ(?).

ನಾಟಕಗಳು : ಜುಗಾರೀ ಕ್ರಾಸ್‌, ಚಿದಂಬರ ರಹಸ್ಯ, ಕೃಷ್ಣೇಗೌಡನ ಆನೆ, ಯಮಳ ಪ್ರಶ್ನೆ, ಮಾಯಾಮೃಗ

Please Wait while comments are loading...