ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟೀಲು ದುರ್ಗಾಪರಮೇಶ್ವರಿ ದೇವರ ಮೊರೆ ಹೋದ ರಮಾನಾಥ್ ರೈ

|
Google Oneindia Kannada News

ಮಂಗಳೂರು, ಫೆಬ್ರವರಿ 14: ಕರ್ನಾಟಕ ವಿಧಾನಸಭೆ ಚುನಾವಣೆ 2018 ಸಮೀಪಿಸುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯಕ್ಷಗಾನದ ಮೊರೆ ಹೋಗಿದ್ದಾರೆ.

ತಮ್ಮ ಮನೆಯಲ್ಲಿ ಕಟೀಲು ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಅವರು ಆಯೋಜಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಸಫಲತೆಗೆ ಪ್ರಾರ್ಥಿಸಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವರ ಮೊರೆ ಹೋಗಿದ್ದಾರೆ.

ಹಾಗೆ ನೋಡಿದರೆ ರಮಾನಾಥ ರೈ ಅವರ ಮನೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಫೆ. 24 ರಂದು ರಮನಾಥ್ ರೈ ಅವರ ಮನೆಯ ಅಂಗಳದಲ್ಲಿ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಲಿದೆ.

Minister Ramanath Rai organises Kateel Devi Mahathme Yakshgana at his home

ರಮನಾಥ ರೈ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ತಮ್ಮ ಮನೆಯಲ್ಲಿ ಆಯೋಜಿಸುವ ಮೂಲಕ ತಮ್ಮ ಮೇಲಿದ್ದ ಹಿಂದೂ ವಿರೋಧಿ ಲೇಬಲನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರ ವಿರೋಧಿಗಳು ಆರೋಪಿಸುತ್ತಿದ್ದಾರೆ.

ಕರಾವಳಿಯಲ್ಲಿ ಯಕ್ಷಗಾನದ ಹರಕೆ ಆಟ
ಕರಾವಳಿ ಭಾಗದಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ. ಕಟೀಲು ದೇವಿಗೆ ಹರಕೆ ಹೇಳಿ ಅದರ ಪ್ರಯುಕ್ತ ಮನೆಯಲ್ಲಿ ಯಕ್ಷಗಾನ ಹಮ್ಮಿಕೊಳ್ಳುತ್ತಾರೆ. ಕಟೀಲು ಮೇಳದಲ್ಲಿ ಒಟ್ಟು 6 ಈ ರೀತಿಯ ಹರಕೆಯ ಮೇಳಗಳಿದ್ದರೂ ಎಲ್ಲಾ ಮೇಳಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಈ ಹರಕೆಯ ಯಕ್ಷಗಾನವನ್ನು ಆಡಿಸುವವರು ಮೇಳವನ್ನು 2-3 ವರ್ಷ ಮೊದಲೇ ಮುಂಗಡ ಕಾಯ್ದಿರಿಸಬೇಕಾಗುತ್ತದೆ.

English summary
Dakshina Kannada district in charge minister Ramanath Rai organised Kateel Shri Devi Mahathme Yakshgana at his house in Bantwal on February 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X