ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಅವರ ನಿಜವಾದ ಆಸ್ತಿ ಎಷ್ಟು? ಅವರ ಮಾತಲ್ಲೇ ಕೇಳಿ!

|
Google Oneindia Kannada News

Recommended Video

ಸಿದ್ದರಾಮಯ್ಯನವರ ನಿಜವಾದ ಆಸ್ತಿ ಎಷ್ಟಿದೆ | Oneindia Kannada

ಬೆಂಗಳೂರು, ಫೆಬ್ರವರಿ 14: 'ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್' (ಎಡಿಆರ್) ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದ 31 ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಮಯ್ಯ 6 ನೇ ಶ್ರೀಮಂತ ಮುಖ್ಯಮಂತ್ರಿ ಎಂಬುದು ನಿನ್ನೆ ಬಯಲಾಗಿತ್ತು.

2013 ರಲ್ಲಿ ನಾಮಪತ್ರ ಸಲ್ಲಿಸುವಾಗ ಅವರು ನೀಡಿದ್ದ ಆಸ್ತಿಯ ವಿವರ 5.15 ಕೋಟಿ ರೂ. ಆದರೆ ಇದೀಗ ನಾಲ್ಕು ಮುಕ್ಕಾಲು ವರ್ಷದಲ್ಲಿ ಅವರ ಆಸ್ತಿ ದುಪ್ಪಟ್ಟಿಗಿಂತ ಜಾಸ್ತಿ ಅಂದರೆ 13.61 ಕೋಟಿ ರೂ.ಆಗಿದೆ ಎಂದು ವರದಿ ಹೇಳಿತ್ತು.

ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

ಈ ಕುರಿತು ಟಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಜವಾದ ಆಸ್ತಿ ಯಾವುದು ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಅವರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು? ಕೇಳಿ.

ಆರು ಕೋಟಿ ಕನ್ನಡಿಗ ಆಶೀರ್ವಾದವೇ ನನ್ನ ನಿಜವಾದ ಆಸ್ತಿ!

ಆರು ಕೋಟಿ ಕನ್ನಡಿಗ ಆಶೀರ್ವಾದವೇ ನನ್ನ ನಿಜವಾದ ಆಸ್ತಿ!

"ಖಾಸಗಿ ಸಂಸ್ಥೆಯೊಂದು ನನ್ನ ಆಸ್ತಿ ವಿವರವನ್ನು ನೀಡಿದೆ. ಆದರೆ ಅದು ನನ್ನೊಬ್ಬನ ಆಸ್ತಿಯಲ್ಲ. ಕಳೆದ ಚುನಾವಣೆಯ ಕಾಲದಲ್ಲಿ ಘೋಷಿಸಿದ್ದ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ ವಿವರ. ನನ್ನ ನಿಜವಾದ ಆಸ್ತಿ ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದ" ಎನ್ನುವ ಮೂಲಕ ತಾವು ಜನರ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಹೇಳಿದ್ದಾರೆ ಸಿದ್ದರಾಮಯ್ಯ.

ಮೊದಲ್ಯಾರು? ಕೊನೆಗ್ಯಾರು?

ಎಡಿಆರ್ ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದ 31 ಮುಖ್ಯಮಂತ್ರಿಗಳ ಪೈಕಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು 177 ಕೋಟಿ ರೂ.ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎಂದಿನಂತೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ 26 ಲಕ್ಷ ರೂ. ಆಸ್ತಿಯೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ!

ಸಿದ್ದು ಮೇಲೆ ಯಾವುದೇ ಕ್ರಿಮಿನ್ ಕೇಸ್ ಇಲ್ಲ!

ಸಿದ್ದು ಮೇಲೆ ಯಾವುದೇ ಕ್ರಿಮಿನ್ ಕೇಸ್ ಇಲ್ಲ!

ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಅಪರಾಧ ಪ್ರಕರಣಗಳೂ ದಾಖಲಾಗಿಲ್ಲ ಎಂದು ಎಡಿಆರ್ ಹೇಳಿದೆ. ಈ ಕುರಿತು ಹಲವರು ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದರೆ, ಮತ್ತಷ್ಟು ಜನ, ಲೋಕಾಯುಕ್ತದ ಅಧಿಕಾರ ಕಿತ್ತುಕೊಂಡು ಅಪರಾಧ ಪ್ರಕರಣ ದಾಖಲಾಗಬೇಕು ಎಂದರೆ ಹೇಗಾಗುತ್ತದೆ ಎಂದು ಕಾಲೆಳೆದಿದ್ದಾರೆ!

ಕ್ರಿಮಿನಲ್ ಕೇಸ್ ನಲ್ಲಿ ಫಡ್ನವೀಸ್ ಗೆ ಅಗ್ರಸ್ಥಾನ!

ಕ್ರಿಮಿನಲ್ ಕೇಸ್ ನಲ್ಲಿ ಫಡ್ನವೀಸ್ ಗೆ ಅಗ್ರಸ್ಥಾನ!

ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಮುಖ್ಯಮಂತ್ರಿಗಳ ಪೈಕಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 22 ಅಪರಾಧ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ! ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿಒಂದೂ ಅಪರಾಧ ಪ್ರಕರಣ ದಾಖಲಾಗದೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್ ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್

English summary
'6 crore people of Karnatakaare my real asset' Karnataka chief minister Siddaramaiah reacts on his twitter account about The Association for Democratic Reform(ADR) report on his assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X