ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ರಾಹುಲ್ ಮುಗುಳು ನಗೆ, ಮೋದಿಯದ್ದು ಅಂತಿಮ ನಗೆ

By Sachhidananda Acharya
|
Google Oneindia Kannada News

Recommended Video

ರಾಹುಲ್ ಗಾಂಧಿ ಎದುರು ನರೇಂದ್ರ ಮೋದಿ ಬಲ ಕುಸಿಯಲಿದ್ಯಾ? | Oneindia Kannada

ನವದೆಹಲಿ, ಫೆಬ್ರವರಿ 14: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದೇ ವೇಳೆಗೆ ರಾಹುಲ್ ಗಾಂಧಿ ಜನಪ್ರಿಯತೆ ಏರುಗತಿಯಲ್ಲಿ ಸಾಗಿದೆ ಎಂಬುದು ಎರಡನೇ ಹಂತದ ಲೋಕನೀತಿ-ಸಿಎಸ್ ಡಿಎಸ್-ಎಬಿಪಿ ನ್ಯೂಸ್ 'ಮೂಡ್ ಆಫ್ ದಿ ನೇಷನ್ ಸಮೀಕ್ಷೆ- 2018' ರಲ್ಲಿ ಬಹಿರಂಗವಾಗಿದೆ.

ಮುಖ್ಯವಾಗಿ ಗುಜರಾತ್ ಚುನಾವಣೆ ನಂತರದ ದಿನಗಳಲ್ಲಿ ರಾಹುಲ್ ಗಾಂಧಿಯಲ್ಲಾದ ಬದಲಾವಣೆಯನ್ನು ಜನರು ಒಪ್ಪಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ತ ಪ್ರತಿಸ್ಪರ್ಧಿ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಮೂಡ್ ಆಫ್ ದಿ ನೇಷನ್ ಸಮೀಕ್ಷೆ: ಕುಸಿಯುತ್ತಿದೆಯಾ ಬಿಜೆಪಿ ಜನಪ್ರಿಯತೆ? ಮೂಡ್ ಆಫ್ ದಿ ನೇಷನ್ ಸಮೀಕ್ಷೆ: ಕುಸಿಯುತ್ತಿದೆಯಾ ಬಿಜೆಪಿ ಜನಪ್ರಿಯತೆ?

2018ರ ಜನವರಿ 7ರಿಂದ ಜನವರಿ 20ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. 19 ರಾಜ್ಯಗಳಲ್ಲಿ, 175 ಲೋಕಸಭೆ ಕ್ಷೇತ್ರಗಳಲ್ಲಿ, 700 ಮತಗಟ್ಟೆಗಳ 14,336 ಜನರಿಂದ ಮಾಹಿತಿ ಕಲೆ ಹಾಕಿ ಈ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆ : ಭಾರತದಲ್ಲಿ ಬಿಜೆಪಿ ಜನಪ್ರಿಯತೆ ಕುಸಿಯುತ್ತಿದೆಯಂತೆ!

ರಾಹುಲ್ ಜನಪ್ರಿಯತೆ ಏರಿಕೆ

ರಾಹುಲ್ ಜನಪ್ರಿಯತೆ ಏರಿಕೆ

ಸದ್ಯಕ್ಕೆ ದೇಶಕ್ಕೆ ನರೇಂದ್ರ ಮೋದಿಯೇ ಕಿಂಗ್. ಆದರೆ ದಿನದಿಂದ ದಿನಕ್ಕೆ ಅವರ ಪ್ರಭಾವ ಕುಸಿಯುತ್ತಿದೆ. ಅದೇ ರಾಹುಲ್ ಗಾಂದಿ ಜನಪ್ರಿಯತೆ ಏರುಗತಿಯಲ್ಲಿದೆ. 2017ರ ಮೇನಿಂದ 2018ರ ಜನವರಿ ಹೊತ್ತಿಗೆ ಮೋದಿ ಜನಪ್ರಿಯತೆ ಶೇಕಡಾ 44ರಿಂದ 37ಕ್ಕೆ ಇಳಿಕೆಯಾಗಿದ್ದರೆ ರಾಹುಲ್ ಗಾಂಧಿ ಜನಪ್ರಿಯತೆ ಶೇ. 9 ರಿಂದ 20ಕ್ಕೆ ಏರಿಕೆಯಾಗಿದೆ.

ದಕ್ಷಿಣ ಭಾರತದಲ್ಲಿ ರಾಹುಲ್ ರಾಜ್ಯಭಾರ

ದಕ್ಷಿಣ ಭಾರತದಲ್ಲಿ ರಾಹುಲ್ ರಾಜ್ಯಭಾರ

ಭಾರತದ ಉಳಿದೆಲ್ಲಾ ಭಾಗಗಳಲ್ಲಿ ರಾಹುಲ್ ಗಾಂಧಿಗಿಂತ ಮೋದಿಯೇ ಪ್ರಧಾನಿ ಸ್ಥಾನಕ್ಕೆ ಉತ್ತಮ ಎಂದು ಜನರ ಹೇಳಿದ್ದರೆ ದಕ್ಷಿಣ ಭಾರತದಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿಯನ್ನು ಮೀರಿಸಿದ್ದಾರೆ.

2014ಕ್ಕೆ ಮರಳಿದ ಮೋದಿ ಜನಪ್ರಿಯತೆ

2014ಕ್ಕೆ ಮರಳಿದ ಮೋದಿ ಜನಪ್ರಿಯತೆ

2017ರಲ್ಲಿ ದೇಶದಲ್ಲಿ ಮೋದಿ ಜನಪ್ರಿಯತೆ ಉತ್ತುಂಗಕ್ಕೆ ಏರಿತ್ತು. ಆದರೆ ಈಗ ಕುಸಿತ ಕಂಡು 2014ರ ಸ್ಥಿತಿಯನ್ನು ತಲುಪಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಅದಕ್ಕಿಂತ ಕೆಳಕ್ಕೆ ಮೋದಿ ಜನಪ್ರಿಯತೆ ಇಳಿದಿಲ್ಲ.

ರಾಹುಲ್ ಜನಪ್ರಿಯತೆ ದ್ವಿಗುಣ

ರಾಹುಲ್ ಜನಪ್ರಿಯತೆ ದ್ವಿಗುಣ

2014ರಲ್ಲಿ ಶೇಕಡಾ 14ರಷ್ಟು ಜನರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸಿದ್ದರು. ಆದರೆ 2017ರ ಮೇನಲ್ಲಿ ಈ ಸಂಖ್ಯೆ ಶೇಕಡಾ 9ಕ್ಕೆ ಇಳಿಕೆಯಾಗಿತ್ತು. ಆದರೆ ಇದೀಗ ಮತ್ತೆ ಏರಿಕೆಯಾಗಿ ಶೇಕಡಾ 20ರಷ್ಟು ಜನರು ರಾಹುಲ್ ಪ್ರಧಾನಿಯಾಗಬೇಕು ಎನ್ನುತ್ತಿದ್ದಾರೆ.

ಜನಪ್ರಿಯತೆಯ ಉತ್ತುಂಗದಲ್ಲಿ ರಾಹುಲ್

ಜನಪ್ರಿಯತೆಯ ಉತ್ತುಂಗದಲ್ಲಿ ರಾಹುಲ್

ಹಾಗೆ ನೋಡಿದರೆ ರಾಹುಲ್ ಗಾಂಧಿ ಜನಪ್ರಿಯತೆ ಎಂದೂ ಈ ಮಟ್ಟಿಗೆ ಇರಲಿಲ್ಲ. ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಜನಪ್ರಿಯತೆ ಶೇಕಡಾ 20ನ್ನು ಮುಟ್ಟಿದೆ. 2011ರಲ್ಲೊಮ್ಮೆ ರಾಹುಲ್ ಪ್ರಧಾನಿಯಾಗಬೇಕು ಎಂದು ಶೇಕಡಾ 19ರಷ್ಟು ಜನರು ಬಯಸಿದ್ದರು.

ಮೋದಿಗೆ ರಾಹುಲ್ ಪೈಪೋಟಿ

ಮೋದಿಗೆ ರಾಹುಲ್ ಪೈಪೋಟಿ

ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಎಷ್ಟರಮಟ್ಟಿಗೆ ಪೈಪೋಟಿ ನೀಡಬಲ್ಲರು ಎಂಬ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಿಕ್ಕಿದ ಉತ್ತರಗಳು ಕುತೂಹಲಕರವಾಗಿವೆ. ರಾಹುಲ್ ಪ್ರಧಾನಿ ಸ್ಥಾನಕ್ಕೆ ಉತ್ತಮ ಸ್ಪರ್ಧಿ ಎಂದು ಶೇಕಡಾ 48 ಜನರು ಹೇಳಿದ್ದಾರೆ. ಆದರೆ ಸ್ಪರ್ಧಿಯಲ್ಲ ಎಂದೂ ಶೇಕಡಾ 39 ಜನರು ಹೇಳಿರುವುದು ಗಮನಾರ್ಹ.

ರಾಹುಲ್ ಸ್ಪರ್ಧೆ ಬಗ್ಗೆ ಉತ್ತಮ ಅಭಿಪ್ರಾಯ

ರಾಹುಲ್ ಸ್ಪರ್ಧೆ ಬಗ್ಗೆ ಉತ್ತಮ ಅಭಿಪ್ರಾಯ

ರಾಹುಲ್ ಗಾಂಧಿ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಬಿಜೆಪಿ ಮತ್ತು ಬಿಜೆಪಿ ಪರ ಮತದಾರರಲ್ಲದೆ ಉಳಿದವರಿಗೆ ಒಳ್ಳೆಯ ಅಭಿಪ್ರಾಯವಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸೇತರ ಮತದಾರರು ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ.

ಸೂಚನೆ: ಈ ಸಮೀಕ್ಷೆಯನ್ನು ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಗೋವಾ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯದಲ್ಲಿ ನಡೆಸಿಲ್ಲ.

English summary
ABP News-Lokniti-CSDS ‘Mood of the Nation Survey 2018’: Rahul Gandhi’s popularity may have gone up, he seems to be quite a polarizing figure in Indian politics. When respondents were asked whether they agreed with the statement that ‘Rahul Gandhi is competent to be the prime minister of the country’, 48% answered in the affirmative and 39% in the
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X