ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಧಿಗೆ ಮುನ್ನ PPF ಖಾತೆ ಮುಚ್ಚುವುದಕ್ಕೆ ಅವಕಾಶ - ಕೇಂದ್ರದ ಚಿಂತನೆ

|
Google Oneindia Kannada News

ನವದೆಹಲಿ, ಫೆಬ್ರವರಿ 14: ಅವಧಿಗೂ ಮುನ್ನವೇ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನು ಮುಚ್ಚುವುದಕ್ಕೆ ಅವಕಾಶ ನೀಡಲು ಸರ್ಕಾರ ಚಿಂತೆ ನಡೆಸುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತುರ್ತು ಸಂದರ್ಭಗಳಲ್ಲಿ ಅಂದರೆ ಆರೋಗ್ಯ ಸಮಸ್ಯೆ ಮತ್ತು ಉನ್ನತ ಶಿಕ್ಷಣದ ಅಗತ್ಯಕ್ಕೆ ಪಿಪಿಎಫ್ ಖಾತೆಯನ್ನು ಅವಧಿಗೂ ಮುನ್ನವೇ ಮುಚ್ಚುವುದಕ್ಕೆ ಅವಕಾಶ ನೀಡಲಾಗುವುದು ಎದು ಅದು ಹೇಳಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆ!ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆ!

2018 ರ ಹಣಕಾಸು ಮಸೂದೆ ಪ್ರಕಾರ ಸಣ್ಣ ಉಳಿತಾಯ ಯೋಜನೆಯಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದ್ದು, ಅಪ್ರಾಪ್ತರೂ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.

Government proposes to allowing premature closure of PPF accounts

ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ ಮತ್ತು ಇನ್ನಿತರ ನಿರ್ದಿಷ್ಟ ಅವಧಿ ಠೇವಣಿ ಯೋಜನೆಗಳನ್ನು ಸರ್ಕಾರ ಒಂದೇ ಯೋಜನೆಯಡಿ ವಿಲೀನಗೊಳಿಸಲು ಚಿಂತಿಸಿದ ಹಿನ್ನೆಲೆಯಲ್ಲಿ ಪಿಪಿಎಫ್ ಖಾತೆಯಲ್ಲಿ ಈ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ.

ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ

ಈ ಮೊದಲ ನಿಯಮವೇನು?
ಈಗ ಇರುವ ಸಾರ್ವಜನಿಕ ಭವಿಷ್ಯ ನಿಧಿ ಕಾಯ್ದೆ ಪ್ರಕಾರ, 15 ವರ್ಷಗಳ ಪಿಪಿಎಫ್ ಖಾತೆಯಿಂದ ಏಳನೇ ವರ್ಷದಲ್ಲಿ ಮಾತ್ರ ಮೊದಲ ಬಾರಿ ಹಣ ಹಿಂದಕ್ಕೆ ಪಡೆಯಲು ಸಾಧ್ಯ. ಅದಕ್ಕೂ ಮತ್ತೆ ಒಂದಷ್ಟು ಶರತ್ತುಗಳಿವೆ. ಏಳನೇ ವರ್ಷದಲ್ಲಿ ಪಿಪಿಎಫ್ ಮೊತ್ತ ಹಿಂದಕ್ಕೆ ಪಡೆದರೆ, ನಾಲ್ಕನೇ ವರ್ಷದ ಕೊನೆಗೆ ಇದ್ದ ಮೊತ್ತದ ಅರ್ಧದಷ್ಟನ್ನು ಮಾತ್ರ ವಾಪಸ್‌ ಪಡೆಯಬಹುದು.

ತುರ್ತು ಸ್ಥಿತಿಯಲ್ಲಿ ಪಿಪಿಎಫ್ ಖಾತೆ ಮುಚ್ಚಲು ಅವಕಾಶವಿದೆಯಾದರೂ ಅದಕ್ಕೆ ದಂಡ ತೆರಬೇಕಾದ ಅನಿವಾರ್ಯತೆ ಇರುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರದ ಹಣವನ್ನು ವಾಪಸ್‌ ಪಡೆಯುವ ನಿಯಮಗಳು ತುಂಬಾ ಕಠಿಣವಾಗಿವೆ.

English summary
'The government of India proposes to allow premature closure of Public Provident Fund (PPF) accounts and permit opening of sppf, government of india, finance ministry, savings, ಪಿಪಿಎಫ್, ಭಾರತ ಸರ್ಕಾರ, ಹಣಕಾಸು ಸಚಿವಾಲಯ, ಉಳಿತಾಯmall savings accounts in the name of minor' said finance ministry on Feb 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X