ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆ: ಎಂತೆಂಥಾ ಉತ್ತರಗಳು ಬಂದ್ವು ಶಿವನೇ!

|
Google Oneindia Kannada News

Recommended Video

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆಗೆ ವಿಚಿತ್ರ ರಿಪ್ಲೈ ಗಳು | Oneindia Kannada

ಎರಡು ರಾಷ್ಟ್ರೀಯ ಪಕ್ಷಗಳು ಸಾಮಾಜಿಕ ಜಾಲತಾಣವನ್ನು ಹೆಚ್ಚು ಹೆಚ್ಚು ಬಳಸುತ್ತಿರುವಂತೇ, ಅದಕ್ಕೆ ಬರುವ ಪ್ರತಿಕ್ರಿಯೆಗಳೂ ಹೆಚ್ಚಾಗ ತೊಡಗಿವೆ. ಹೀಗೆ ಬರುವ ರಿಪ್ಲೈಗಳು ಕೆಲವೊಂದು ಎಷ್ಟೊಂದು ಹಾಸ್ಯಾಸ್ಪದ/ಚರ್ಚಾತ್ಮಕವಾಗಿರುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ ನೋಡಿ...

4.02ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ @INCIndia ನಿಂದ, #WhatTheFact ಹ್ಯಾಷ್ ಟ್ಯಾಗ್ ಹಾಕಿ ಫೆ13ರಂದು ರಸಪ್ರಶ್ನೆಯೊಂದನ್ನು ಹಾಕಿತ್ತು.

ಈ ಕೆಳಗಿನ ಸಂಸ್ಥೆಗಳಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪಿಸಿದ ಸಂಸ್ಥೆಗಳು ಯಾವುದು ಎಂದು ನಾಲ್ಕು ಆಯ್ಕೆಯನ್ನು ಕೊಟ್ಟಿತ್ತು. ಅದರಲ್ಲಿ ಐಐಟಿ, ಐಐಎಂ, ಇಸ್ರೋ ಮತ್ತು ಮೇಲಿನ ಎಲ್ಲಾ ಮೂರು ಸಂಸ್ಥೆಗಳು ಎನ್ನುವ ಆಯ್ಕೆಯನ್ನು ಕಾಂಗ್ರೆಸ್ ನೀಡಿತ್ತು.

ಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆ

ಕಾಂಗ್ರೆಸ್ ಹಾಕಿರುವ ಕ್ವಿಜ್ ಗೆ ಇದುವರೆಗೆ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ವೋಟ್ ಹಾಕಿದ್ದು, ಅದರಲ್ಲಿ ಶೇ.80 ಜನ ಮೇಲಿನ ಎಲ್ಲಾ ಮೂರು ಸಂಸ್ಥೆಗಳು ಎನ್ನುವುದಕ್ಕೆ ವೋಟ್ ಮಾಡಿದ್ದಾರೆ.

ದೇಶದ ಪ್ರತಿಷ್ಟಿತ ಐಐಟಿ, ಐಐಎಂ ಮತ್ತು ಇಸ್ರೋ ಸಂಸ್ಥೆಗಳು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದರೂ, ಟ್ವಿಟ್ಟಿಗರು ಕಾಂಗ್ರೆಸ್ಸಿನ ಈ ಟ್ವೀಟಿಗೆ ಮಾಡಿರುವ ಕೆಲವೊಂದು ತರಹೇವಾರಿ ರಿಪ್ಲೈಗಳು ಮುಂದಿದೆ..

ಎಲ್ಲಾ ಕಾಂಗ್ರೆಸ್ ಅವಧಿಯಲ್ಲಿ ಅನ್ನುವುದಕ್ಕೆ ಶೇ.80

ಎಲ್ಲಾ ಕಾಂಗ್ರೆಸ್ ಅವಧಿಯಲ್ಲಿ ಅನ್ನುವುದಕ್ಕೆ ಶೇ.80

ಈ ಕೆಳಗಿನ ಯಾವ ಸಂಸ್ಥೆಗಳು ಕಾಂಗ್ರೆಸ್ ಅವಧಿಯಲ್ಲಿ ಆರಂಭವಾಗಿದ್ದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಅದರಲ್ಲಿ ಎಲ್ಲಾ ಕಾಂಗ್ರೆಸ್ ಅವಧಿಯಲ್ಲಿ ಅನ್ನುವುದಕ್ಕೆ ಶೇ.80, ಐಐಟಿಗೆ ಶೇ. 11, ಇಸ್ರೋಗೆ ಶೇ. 6 ಮತ್ತು ಐಐಎಂಗೆ ಶೇ. 3 ಎಂದು ವೋಟ್ ಮಾಡಿದ್ದಾರೆ.

ಭ್ರಷ್ಟಾಚಾರ, ಬಡತನ, ಕಾಶ್ಮೀರ ವಿವಾದ

ಭ್ರಷ್ಟಾಚಾರ, ಬಡತನ, ಕಾಶ್ಮೀರ ವಿವಾದ

ಭ್ರಷ್ಟಾಚಾರ, ಬಡತನ, ಕಾಶ್ಮೀರ ವಿವಾದ ಮತ್ತು ಇವೆಲ್ಲಾ ಯಾವ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದು ಎನ್ನುವ ರಿಪ್ಲೈ. ನೆಹರೂ ಅವರ ದೂರದೃಷ್ಟಿಯಿಂದ ಇಸ್ರೋ ಮುಂತಾದ ಸಂಸ್ಥೆಗಳು ಆರಂಭವಾಗಲು ಸಾಧ್ಯವಾಯಿತು. ಈಗಿನ ಪ್ರಧಾನಿಯ ವಿಷನ್ ಬರೀ ಟಿವಿ ಮತ್ತು ಪಕೋಡ ಎನ್ನುವ ಟ್ವೀಟ್.

ಅದನ್ನೇ ಸಾಧನೆ ಎಂದು ಬಿಂಬಿಸುತ್ತೀರಲ್ಲಾ

ಅದನ್ನೇ ಸಾಧನೆ ಎಂದು ಬಿಂಬಿಸುತ್ತೀರಲ್ಲಾ

ಇಸ್ರೋ, ಐಐಟಿ ಮುಂತಾದುವುಗಳನ್ನು ಆರಂಭಿಸುವುದು ಯಾವುದೇ ದೇಶಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳು, ಅದನ್ನೇ ಸಾಧನೆ ಎಂದು ಬಿಂಬಿಸುತ್ತೀರಲ್ಲಾ? ಇಷ್ಟು ವರ್ಷ ದೇಶವನ್ನು ಆಳಿದವರಾರು? ಅರವತ್ತು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಕ್ಕೇ ಭಾರತ ಇನ್ನೂ ಬಡರಾಷ್ಟ್ರವೆಂದು ಬಿಂಬಿತವಾಗಿರುವುದು.

ಮೇಲಿನ ಯಾವುದೂ ಅಲ್ಲ ಎನ್ನುವ ಆಯ್ಕೆಯನ್ನು ಯಾಕೆ ಕೊಟ್ಟಿಲ್ಲ?

ಮೇಲಿನ ಯಾವುದೂ ಅಲ್ಲ ಎನ್ನುವ ಆಯ್ಕೆಯನ್ನು ಯಾಕೆ ಕೊಟ್ಟಿಲ್ಲ?

ಕಾಂಗ್ರೆಸ್ ಅತ್ಯಂತ ಭ್ರಷ್ಟ ಪಕ್ಷ. ಮೇಲಿನ ಯಾವುದೂ ಅಲ್ಲ ಎನ್ನುವ ಆಯ್ಕೆಯನ್ನು ಯಾಕೆ ಕೊಟ್ಟಿಲ್ಲ? ಭ್ರಷ್ಟಾಚಾರ, ಹಗರಣ, ಕೋಮು ಗಲಭೆ, ಈ ಎಲ್ಲಾ - ಇದು ಉತ್ತಮ ಕ್ವಿಜ್ ಪ್ರಶ್ನೆಯಾಗುತ್ತಿತ್ತು ಎನ್ನುವ ಟ್ವೀಟ್.

ಯಾವ ಹಗರಣದಲ್ಲಿ ಜಾಸ್ತಿ ಭ್ರಷ್ಟಾಚಾರ ನಡೆದಿದೆ?

ಯಾವ ಹಗರಣದಲ್ಲಿ ಜಾಸ್ತಿ ಭ್ರಷ್ಟಾಚಾರ ನಡೆದಿದೆ?

ಇದೆಲ್ಲಾ ದೇಶದ ಆಸ್ತಿ, ಯಾವುದೇ ಪಕ್ಷಕ್ಕೆ ಸೀಮಿತವಾದುದಲ್ಲ, ಯಾವುದೂ ಅಲ್ಲ ಎನ್ನುವ ಆಯ್ಕೆ ಕೊಟ್ಟಿಲ್ಲ. ಕೆಳಗಿನ ಯಾವ ಹಗರಣದಲ್ಲಿ ಜಾಸ್ತಿ ಭ್ರಷ್ಟಾಚಾರ ನಡೆದಿದೆ? ಕಾಮನ್ವೆಲ್ತ್, 2ಜಿ, ಕಲ್ಲಿದ್ದಲು, ಅಗಸ್ತ್ಯಾ ಎನ್ನುವ ಕೆಣಕುವ ಟ್ವೀಟ್.

English summary
"Which of the following institutions were started by a Congress Govt. #WhatTheFact", Congress tweet from @INCIndia account. Twitterite voted 79% for All of the above and some funny tweet replies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X