ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶನ ಕೈಯಲ್ಲಿದ್ದ ಗ್ಲಾಸ್ ಠಳ್ ಎಂದಿತ್ತು!

|
Google Oneindia Kannada News

ಯತೀಶನ ಬಾಸ್ ಸುರೇಶ ಒಂದು ಬಾರಿ ಭಾರೀ ಪಾರ್ಟಿ ಆರ್ಗನೈಸ್ ಮಾಡಿದ್ದ. ಕಂಪನಿ ಲಾಭ ಗಳಿಸಿದ ಕಾರಣ ತನ್ನ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ತನ್ನ ಮನೆಗೆ ಆಹ್ವಾನಿಸಿ ಪಾರ್ಟಿ ನೀಡಿದ್ದ. ಯತೀಶನ ಜೊತೆ ಆತನ ಹೆಂಡತಿ ಲವೀನಾ ಕೂಡ ಹೋಗಿದ್ದಳು.

ಎಲ್ಲರ ಕಣ್ಣು ಆಕೆಯ ಸೌಂದರ್ಯದ ಮೇಲೆ ಬಿದ್ದಿತ್ತು ಎಂದು ಬೇರೆಯಾಗಿ ಹೇಳಬೇಕಾಗಿಲ್ಲ. ಎಲ್ಲರೂ ಹಾಡು, ಕುಣಿತ, ಕುಡಿತದಲ್ಲಿ ಎಂಜಾಯ್ ಮಾಡುತ್ತಿದ್ದರು. ಯತೀಶ ತನ್ನ ಸ್ನೇಹಿತರ ಜೊತೆ ಒಂದು ಮೂಲೆಯಲ್ಲಿ ಗ್ಲಾಸ್ ಮೇಲೆ ಗ್ಲಾಸ್ ಇಳಿಸುತ್ತಿದ್ದ. ಲವೀನಾ ಕೂಡ ಕಡಿಮೆಯೇನಿರಲಿಲ್ಲ. ತಾನೂ ಕೈಯಲ್ಲಿ ಒಂದು ಗ್ಲಾಸ್ ಹಿಡಿದುಕೊಂಡು ಕುಳಿತಿದ್ದಳು.

ಮಹಾ ರಸಿಕ ಎಂದು ಕುಖ್ಯಾತಿ ಗಳಿಸಿದ್ದ ಸುರೇಶನ ಕಣ್ಣು ಲವೀನಾ ಮೇಲೆ ಬಿದ್ದಿತು. ಆಕೆಯ ಕೈಯಲ್ಲಿದ್ದ ಗ್ಲಾಸು ಖಾಲಿಯಾಗುದ್ದುದನ್ನು ನೋಡಿ ಮತ್ತೊಂದು ತುಂಬಿದ ಗ್ಲಾಸ್ ಹಿಡಿದುಕೊಂಡು ಬಂದ ಸುರೇಶ ಮಾತಿನ ಲಹರಿಗಿಳಿದ. ಕೈಯಲ್ಲಿನ ಗ್ಲಾಸನ್ನು ಲವೀನಾಗೆ ಆಫರ್ ಮಾಡಿದ.

"ಲವೀನಾ ಅವರೆ, ಒಂದೇ ಗ್ಲಾಸಿಗೆ ಯಾಕೆ ಸುಮ್ಮನಾಗಿಬಿಟ್ಟಿರಿ? ಮತ್ತೊಂದನ್ನು ಇಳಿಸಿ" ಎಂದು ನಗುನಗುತ್ತ ಕೇಳಿದ.

"ನೋ ಥ್ಯಾಂಕ್ಯೂ. ನನ್ನ ಗಂಡ ಕೇವಲ ಒಂದೇ ಗ್ಲಾಸಿಗೆ ಮಿತಿಗೊಳಿಸಬೇಕೆಂದು ಆಜ್ಞೆ ಮಾಡಿದ್ದಾರೆ. ಅದನ್ನು ಇತ್ತೀಚಿನ ವರ್ಷಗಳಲ್ಲಿ ಚಾಚೂತಪ್ಪದೆ ಪಾಲಿಸುತ್ತಿದ್ದೇನೆ" ಎಂದು ನಯವಾಗಿ ತಿರಸ್ಕರಿಸಿದಳು.

"ಯಾಕೆಂದು ಕೇಳಬಹುದಾ?" ಎಂದು ಲವೀನಾಳನ್ನು ಸುರೇಶ ಕೇಳಿದ.

"ವೈ ನಾಟ್. ಒಂದು ಗ್ಲಾಸ್ ಇಳಿಸಿದಾಗ ನಾನು ಎಂಜಾಯ್ ಮಾಡುತ್ತೇನೆ, ಎರಡನೇ ಗ್ಲಾಸ್ ಇಳಿಸಿದಾಗ ಬೇರೆಯವರು ಎಂಜಾಯ್ ಮಾಡುತ್ತಾರೆ, ಅದಕ್ಕೇ" ಎಂದು ಲವೀನಾ ತುಟಿಯನ್ನು ಕಚ್ಚಿ, ತುಂಟ ನಗೆ ಬೀರಿ, ಓರೆಕಣ್ಣಿನಿಂದ ಹೇಳಿದಳು. ಸುರೇಶನ ಕೈಯಲ್ಲಿದ್ದ ಗ್ಲಾಸ್ ಠಳ್ ಎಂದಿತ್ತು! [ಗಂಡ ಹೆಂಡತಿ ಜೋಕ್ಸ್]

English summary
Husband wife jokes : One day Boss of Yatish organizes a party for his office employees as his company registers robust profit. Yatish goes to party with his wife beautiful Laveena. Suresh offers drink for Laveena, which she rejects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X