ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೌಶಲ್ಯ ಕರ್ನಾಟಕ' ಯೋಜನೆಯಡಿ ತರಬೇತಿ ಪಡೆಯುಲು ಹೀಗೆ ಮಾಡಿ

ರಾಜ್ಯದಲ್ಲಿಯ ಕೌಶಲ್ಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 'ರಾಜ್ಯ ಕೌಶಲ್ಯ ನೀತಿ'ಯನ್ನು ಹೊರತಂದಿದೆ.ಒಟ್ಟು 5 ಲಕ್ಷ ಜನರಿಗೆ ತರಬೇತಿ ನೀಡಲು ಸರಕಾರ ನಿರ್ಧರಿಸಿದೆ.ಇದರಡಿಯಲ್ಲಿ ತರಬೇತಿ ಪಡೆಯಲು ಅನುಸರಿಸಬೇಕಾದ ಮಾರ್ಗಗಳು ಇಲ್ಲಿವೆ.

|
Google Oneindia Kannada News

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಜ್ಯದಲ್ಲಿಯ ಕೌಶಲ್ಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 'ರಾಜ್ಯ ಕೌಶಲ್ಯ ನೀತಿ'ಯನ್ನು ಹೊರತಂದಿದೆ. ಅದರಂತೆ ಒಟ್ಟು 5 ಲಕ್ಷ ಜನರಿಗೆ ತರಬೇತಿ ನೀಡಲು ಸರಕಾರ ನಿರ್ಧರಿಸಿದೆ.

ಯುವ ಜನರ ಸಬಲೀಕರಣಕ್ಕಾಗಿ ಆಂದೋಲನ ಮಾದರಿಯಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರಕಾರ ಹೊರಟಿದ್ದು ಇದಕ್ಕಾಗಿ ಹೊಸ ಇಲಾಖೆಯನ್ನೆ ಸೃಷ್ಟಿಸಿದೆ. ಆಸಕ್ತ ನಿರುದ್ಯೋಗಿ ವಿದ್ಯಾವಂತ ಯುವಕರು ಆನ್ ಲೈನ್ ಮೂಲಕ ಹೆಸರು ನೋಂದಾಯಿಸಲು ಅವಕಾಶ ಮಾಡಲಾಗಿದೆ.

How to enroll your names to Kaushalya Karnataka? Here is the way do it

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ಗ್ರಾಮ‌ ಪಂಚಾಯತ್ ಕಾರ್ಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ನಿರುದ್ಯೋಗಿ ವಿದ್ಯಾರ್ಥಿ / ವಿದ್ಯಾರ್ಥಿನಿಯರು (ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಬಿಎ, ಬಿಕಾಂ, ಬಿಎಸ್ಸಿ ಹಾಗೂ ಇತರೆ ಯಾವುದೇ ಪದವಿ ಪಡೆದವರು) ಉದ್ಯೋಗ ಮತ್ತು ಆಸಕ್ತ ಕ್ಷೇತ್ರದಲ್ಲಿ ತರಬೇತಿಗೆ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದು. ಇವರಿಗೆ ಆಸಕ್ತಿ ಇರುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಸರ್ಕಾರ ಜಾರಿಗೆ ತಂದಿರುವ ಕೌಶಲ್ಯ ತರಬೇತಿ ಮತ್ತು ಉದ್ಯೋಗಕ್ಕಾಗಿ ಈ ಆನ್ ಲೈನ್ ತಾಣದಲ್ಲಿಯೂ ನೂಂದಣಿ ಮಾಡಿಸಲು ಅವಕಾಶವಿದೆ. ಆಸಕ್ತ ನಿರುದ್ಯೋಗಿಗಳ ಇಚ್ಚೆಗೆ ಅನುಸಾರವಾಗಿ ಉದ್ಯೋಗ ಮತ್ತು ತರಬೇತಿ ಪಡೆಯಲು ಇಚ್ಛಿಸಿದಲ್ಲಿ ತಮ್ಮ ಆಧಾರ್ ಸಂಖ್ಯೆ , ಪೋನ್ ಸಂಖ್ಯೆ ಮತ್ತು ಇ-ಮೇಲ್ ನೊಂದಿಗೆ ಆನ್ ಲೈನ್ ನಲ್ಲಿ ನೊಂದಾಯಿಸಿ ಕೊಳ್ಳಬಹುದು.
ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ
ಮೊಬೈಲ್ ಅಪ್ಲಿಕೇಶನ್ ನಲ್ಲಿ ಸಹ ಅರ್ಜಿಗಳನ್ನು ಸಲ್ಲಿಸಬಹುದು. ಈ ಮೊಬೈಲ್ ಆ್ಯಪ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಒಟ್ಟು 529 ವಿಭಾಗಗಳಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ತರಬೇತಿ ನೀಡಲಾಗುತ್ತದೆ.

English summary
How to enroll your names to Kaushalya Karnataka? Here is the way to enroll your names in village panchayat and through website and mobile application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X